Breaking News

ಕುಂಭರ್ಚೋಡು ಪರಿಸರದಲ್ಲಿ ಕರೆಂಟ್ ಸಮಸ್ಯೆ

Advt_Headding_Middle

ಸುಳ್ಯ ಕುಂಭರ್ಚೋಡು, ಬೊಳುಬೈಲು ಪರಿಸರದಲ್ಲಿ ಸುಮಾರು 60 ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನತೆ ವಿದ್ಯುತ್ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.   ಈ ಪರಿಸರದಲ್ಲಿ ಕೃಷಿಕರು ಹೆಚ್ಚಾಗಿ ಕಂಡು ಬರುವ ಪ್ರದೇಶವಾಗಿದ್ದು ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದ ಜನತೆ ವಿದ್ಯುಚ್ಛಕ್ತಿಯ ಸಮಸ್ಯೆಯಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯನ್ನು ಅನುಭವಿಸುತ್ತಿದ್ದಾರೆ.  ಇದೀಗ ಹೆಚ್ಚಿನ ಶಾಲೆಗಳಲ್ಲಿ ಆನ್ಲೈನ್ ತರಗತಿ ಆರಂಭಿಸಿದ್ದು ಕರೆಂಟಿಲ್ಲದೆ ಫೋನ್ ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ.  ಈ ಭಾಗದಲ್ಲಿ ಕೇವಲ ಒಂದೇ ಟ್ರಾನ್ಸ್ ಫಾರಂ ಕಾರ್ಯಾಚರಿಸುತ್ತಿದ್ದು ಈ ಭಾಗದ ಎಲ್ಲಾ ಮನೆಗಳ ವಿದ್ಯುಚ್ಛಕ್ತಿ ಪೂರೈಕೆಗೆ ಇದು ಸಾಕಾಗುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.  ಕೃಷಿಕರು ತೋಟಕ್ಕೆ ನೀರನ್ನು ಉಪಯೋಗಿಸಲು ಮೋಟರು ಅಳವಡಿಸಲು ಈ ಒಂದು ಕಂಬವನ್ನು ಅವಲಂಬಿಸಿಕೊಂಡಿದ್ದಾರೆ.  ಉಪಯೋಗಿಸುವ ವಿದ್ಯುಚ್ಛಕ್ತಿಯ ಲೋಡ್ ಹೆಚ್ಚಾಗಿ ಆಗಿಂದಾಗ ಕಂಬದಿಂದ  ಫ್ಯೂಸ್ ಹೋಗುತ್ತಿರುತ್ತದೆ. ಮಳೆಗಾಲದಲ್ಲಿ ಗಾಳಿ ಮಳೆಗೆ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಂಡುಬರುತ್ತಿದೆ.  ಇದರಿಂದಾಗಿ ಕಳೆದ ಮೂರು ದಿನಗಳಿಂದ ಇಡೀ ಕುಂಬರ್ಚೋಡು ಪರಿಸರ ಕತ್ತಲಿನಿಂದ ಕೂಡಿದೆ.
ಇಲಾಖೆಯಿಂದ ಈಗಾಗಲೇ ಒಂದು ವರ್ಷಗಳ ಹಿಂದೆ  ಮತ್ತೊಂದು ಟ್ರಾನ್ಸ್ ಫಾರಂ ಕಂಬ ಅಳವಡಿಸಲು ಅನುಮತಿ ಸಿಕ್ಕಿದ್ದರೂ ಬಾಕ್ಸ್ ಬಾರದ ಹಿನ್ನೆಲೆಯಲ್ಲಿ ಕೆಲಸ ಅರ್ಧದಲ್ಲೇ ನಿಂತಿದೆ.
ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆಗೆ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯವರು ಸ್ಥಳೀಯ ನಿವಾಸಿಗಳ ಬಹುಕಾಲದ ಸಮಸ್ಯೆಯನ್ನು ನೀಗಿಸಿಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.