ಸುಳ್ಯದಲ್ಲಿ ಮೋರ್ ಸೂಪರ್ ಮಾರ್ಕೆಟ್ ಶುಭಾರಂಭ

Advt_Headding_Middle

 

 

ಸುಳ್ಯದ ಮುಖ್ಯ ರಸ್ತೆಯ ಗಾಂಧಿನಗರ ಜುಮ್ಮಾ ಮಸೀದಿಯ ಎದುರುಗಡೆ ಇರುವ ಎಂ.ಪಿ.ಗೋಪಿನಾಥ್ (ಗೋಪಿಕಾ)ರವರ ಮಾಲಕತ್ವದ  ಗೋಪಿಕಾ ಕಾಂಪ್ಲೆಕ್ಸ್ ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುವ ಮೋರ್ ಸೂಪರ್ ಮಾರ್ಕೆಟ್ ಜು. 14 ರಂದು ಶುಭಾರಂಭಗೊಂಡಿತು.
ಕಾಂಪ್ಲೆಕ್ಸ್ ಮಾಲಕರ ಪತ್ನಿ ಶ್ರೀಮತಿ ಯೋಗಿತಾಗೋಪಿನಾಥ್ ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭ ಯುವ ಉದ್ಯಮಿ ಪ್ರಣವ್ ಎಂ.ಜಿ, ಸೂಪರ್ ಮಾರ್ಕೆಟ್ ನ ಕ್ಲಸ್ಟರ್ ಮ್ಯಾನೇಜರ್ ಸಂಜು ಚಿಂಗಪ್ಪ, ಸ್ಟೋರ್ ಮ್ಯಾನೇಜರ್ ಲೋಕೇಶ್ ಆರ್, ಎನ್.ಎಸ್. ಒ. ವಿಜಯ್, ಕ್ಲಸ್ಟರ್ ಮೇನೇಜರ್ ವಿಶ್ವನಾಥ, ಹೆಚ್.ಆರ್. ಪ್ರಗತ್ ರಾಜ್ ಉಪಸ್ಥಿತರಿದ್ದರು.
ನ.ಪಂ.ಸದಸ್ಯರಾದ ಶರೀಫ್ ಕಂಠಿ, ಉಮ್ಮರ್, ನ್ಯಾಯವಾದಿ
ಎಂ.ವೆಂಕಪ್ಪ ಗೌಡ,
ಕೆ.ಎಸ್, ಗಣೇಶ್ ಪ್ರಿಂಟರ್ಸ್ ಮಾಲಕ ಉಮೇಶ್ ಪಿ.ಕೆ, ಲಯನ್ಸ್ ಅಧ್ಯಕ್ಷ ಆನಂದ ಪೂಜಾರಿ ಸುಳ್ಯ, ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್
ಜಿತೇಂದ್ರ ಎನ್ ಎ, ಡಾ.ಹರ್ಷಿತಾಪುರುಷೋತ್ತಮ, ಶೈಮಾ ಜಿತೇಂದ್ರ ಎನ್. ಎ, ಪತ್ರಕರ್ತ ಗಂಗಾಧರ ಮಟ್ಟಿ, ಅಬ್ದುಲ್ ಖಾದರ್ ಬೊಳುಬೈಲು ಮತ್ತಿತರರು ಆಗಮಿಸಿ ಶುಭ ಹಾರೈಸಿದರು.
ಸೂಪರ್ ಮಾರ್ಕೆಟ್ ನಲ್ಲಿ ಉತ್ತಮ ಗುಣಮಟ್ಟದ ದಿನಬಳಕೆಯ ಗೃಹೋಪಯೋಗಿ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಮಿತ ದರದಲ್ಲಿ ಲಭ್ಯವಿದೆ. ಅಲ್ಲದೆ ಶುಭಾರಂಭದ ಪ್ರಯುಕ್ತ ಖರೀದಿಯ ಮೇಲೆ ವಿಶೇಷ ಆಫರ್ ನೀಡಲಾಗುವುದು.
ಪ್ರತಿದಿನ ಬೆಳಗ್ಗೆ ಗಂಟೆ 7.00 ರಿಂದ ರಾತ್ರಿ 9.00 ರ ತನಕ ಗ್ರಾಹಕರಿಗೆ ಖರೀದಿಗೆ ಅವಕಾಶವಿರುವುದಾಗಿ ಮೇನೇಜರ್ ತಿಳಿಸಿದರು. ಸಂಸ್ಥೆಯಲ್ಲಿ ಸುಮಾರು 14 ಮಂದಿ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮೇನೇಜರ್ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.