Breaking News

ಜಯನಗರ : ಕ್ರಿಕೆಟ್ ಆಟದ ಕುರಿತು ದೈವಸ್ಥಾನದ ಆಡಳಿತ ಸಮಿತಿ ಮತ್ತು ಕೆಲವು ಸದಸ್ಯರಲ್ಲಿ ಕಿರಿಕಿರಿ

Advt_Headding_Middle

 

ಪೊಲೀಸ್ ದೂರು
ಸುಳ್ಯ ಜಯನಗರದ ಕೊರಂಬಡ್ಕ ಶ್ರೀ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಹಲವು ವರ್ಷಗಳಿಂದ ಸ್ಥಳೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಹಾಗೂ ಆ ಜಾಗದಲ್ಲಿ ಆಡಳಿತ ಸಮಿತಿಯವರು ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡಿದುದರಿಂದ ಯುವಕರಿಗೆ ಆಡಲು ಅಸಾಧ್ಯವಾದ ಮತ್ತು ದೈವಸ್ಥಾನ ಸಮಿತಿಯವರೇ ಪೋಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.

ದೈವಸ್ಥಾನದ. ಈ ಸ್ಥಳದಲ್ಲಿ ಯುವಕರು ಕ್ರಿಕೆಟ್ ಆಡುವ ವಿಚಾರದಲ್ಲಿ ಇದಕ್ಕೂ ಮೊದಲು ಪರವಿರೋಧ ಚರ್ಚೆಗಳು ನಡೆಯುತ್ತಿದ್ದವು. ಆಟವಾಡುವ ಯುವಕರಲ್ಲಿ ಹಲವು ಮಂದಿ ದೈವಸ್ಥಾನ ಸಮಿತಿಯಲ್ಲೂ ಇರುವವರು. ತಾವು ಕ್ರಿಕೆಟ್ ಆಡುವ ಜಾಗದಲ್ಲಿ ಏಕಾಏಕಿ ಆಡಳಿತ ಮಂಡಳಿಯವರು ಗಿಡ ನೆಡುವುದಕ್ಕಾಗಿ ಗುಂಡಿ ತೋಡಿದರೆಂದು ಬೇಸರಗೊಂಡ ಯುವಕರು ಗುಂಡಿಯನ್ನು ತೋಡಿದ ದಿನ ಕಾಂಪೌಂಡಿನ ಹೊರಭಾಗದ ರಸ್ತೆಯಲ್ಲಿ ಜಮಾಯಿಸಿದ್ದರು. ಇದನ್ನು ಕಂಡ ಒಬ್ಬರು ತಮ್ಮ ಮೊಬೈಲ್ ನಲ್ಲಿ ಫೋಟೋ ತೆಗೆದು ಸುಳ್ಯ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಜೆ ಬಂದಾಗ ಯುವಕರು ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಯುವಕರು ” ಈ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಾವು ಭಾಗಿಯಾಗುತ್ತೇವೆ. ಇಲ್ಲಿ ಗಿಡ ನೆಡುವುದರ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಆಡಳಿತ ಸಮಿತಿಯ ಒಬ್ಬರು ನಮ್ಮ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ್ದಾರೆ. ಅದು ನಮಗೆ ನೋವು ತಂದಿದೆ” ಎಂದು ತಮ್ಮ ಅಸಮಾಧಾನವನ್ನು ಹೇಳಿಕೊಳ್ಳುತ್ತಿದ್ದರು.

ಇದರ ಬಗ್ಗೆ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಸಂತ ಕುದ್ಪಾಜೆ ಅವರ ಬಳಿ ವಿಚಾರಿಸಿದಾಗ ” ಈ ಪರಿಸರದಲ್ಲಿ ಗಿಡಗಳನ್ನು ನೆಡುವ ಯೋಜನೆಯನ್ನು ಈ ಮೊದಲೇ ರೂಪಿಸಲಾಗಿತ್ತು. ಇದೀಗ ಮಳೆಗಾಲ ಆರಂಭಗೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರಿಗೆ ಮಾತನಾಡಿ ಕೆಲವು ಹಣ್ಣಿನ ಗಿಡಗಳನ್ನು ತಂದು ನೆಡಲು ತೀರ್ಮಾನಿಸಿದ್ದೇವೆ. ಅದರಂತೆ ಕಳೆದ ಎರಡು ದಿನಗಳಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ವಿಷಯದ ಕುರಿತು ಯಾವುದೇ ಕಿರಿಕಿರಿ ಬರಬಾರದೆಂದು ಮುಂಜಾಗ್ರತೆಗಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಘಟನೆಯ ಕುರಿತು ಸ್ಥಳೀಯ ಯುವಕ ಲೋಕೇಶ್ ಎಂಬವರೊಂದಿಗೆ ವಿಚಾರಿಸಿದಾಗ ” ಇಲ್ಲಿ ಗಿಡಗಳನ್ನು ನೆಡುವ ವಿಚಾರದಲ್ಲಿ ನಮಗೆ ಯಾವುದೇ ಆಕ್ಷೇಪವಿಲ್ಲ. ದೈವಸ್ಥಾನದ ಆವರಣ ಸುಂದರವಾಗಿರುವುದು ನಮಗೆಲ್ಲರಿಗೂ ಒಳ್ಳೆಯದೇ. ಆದರೆ ನಾವು ಕೂಡ ಆ ಸಮಿತಿಯಲ್ಲಿ ಸದಸ್ಯರಿರುವಾಗ ವಿನಾಕಾರಣ ನಾವು ಅಡ್ಡಿ ಪಡಿಸಿದ್ದೇವೆ ಎಂದು ದೂರುವುದು ಸರಿಯಲ್ಲ. ಯುವಕರು 20 ವರ್ಷಗಳಿಂದ ಇಲ್ಲಿ ಆಡುತ್ತಿದ್ದಾರೆ ” ಎಂದು ಹೇಳಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.