Breaking News

ನಮ್ಮ ತೆರಿಗೆ ಹಣದ ಲಸಿಕೆಯನ್ನು ಆಡಳಿತ ಪಕ್ಷ ನಮಗೆ ಶೀಘ್ರದಲ್ಲಿ ದೊರಕಿಸಲಿ : ಎಂ.ವೆಂಕಪ್ಪ ಗೌಡ

Advt_Headding_Middle

 

ರಾಜ್ಯ ಸರ್ಕಾರವೇ ಒಪ್ಪಿಕೊಂಡಂತೆ ನಮ್ಮ ರಾಜ್ಯಕ್ಕೆ ಈ ತನಕ 2.6 ಕೋಟಿ ಡೋಸ್ ಲಸಿಕೆ ಮಾತ್ರ ಬಂದಿದ್ದು ರಾಜ್ಯದ ಪ್ರತಿಯೊಬ್ಬರಿಗೂ 2 ಡೋಸ್ ಲಸಿಕೆ ನೀಡಬೇಕಾದಲ್ಲಿ 9.6 ಕೋಟಿ ಡೋಸ್ ವ್ಯಾಕ್ಸಿನ್ ನಮ್ಮ ರಾಜ್ಯಕ್ಕೆ ಬೇಕಾಗುತ್ತೆ ಎಂಬ ಅಂಕಿ ಅಂಶಗಳನ್ನು ನಮ್ಮ ರಾಜ್ಯ ಸರ್ಕಾರವು ಇದೀಗ ನೀಡಿರುತ್ತದೆ. ಅದೇ ಪ್ರಕಾರ ಸುಳ್ಯ ತಾಲೂಕಿನಲ್ಲಿ 2011 ರ ಜನಗಣತಿಯ ಪ್ರಕಾರ 1 ಲಕ್ಷ ನಲ್ವತ್ತಯಿದು ಸಾವಿರ ಜನಸಂಖ್ಯೆ ಇದ್ದು ಪ್ರಸ್ತುತ ಆ ಸಂಖ್ಯೆ 1 ಲಕ್ಷ ಐವತ್ತು ಸಾವಿರಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆ ಇರುವುದರಿಂದ ನಮ್ಮ ತಾಲೂಕಿಗೆ ಕಡಿಮೆ ಪಕ್ಷ 3 ಲಕ್ಷ ಡೋಸ್ ಲಸಿಕೆ ವ್ಯಾಕ್ಸಿನ್ನನ ಅವಶ್ಯಕತೆ ಇರುತ್ತದೆ. ಆದರೆ ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಒಟ್ಟಾಗಿ ಸುಳ್ಯ ತಾಲೂಕಿಗೆ ಈ ತನಕ 57000 ಡೋಸ್ ಲಸಿಕೆ ಮಾತ್ರ ಸರಬರಾಜು ಆಗಿರುವುದರಿಂದ ಇನ್ನೂ 2 ಲಕ್ಷದ ಐವತ್ತು ಸಾವಿರ ಡೋಸ್ ಲಸಿಕೆ ಸರಬರಾಜು ಆದಲ್ಲಿ ಸುಳ್ಯ ತಾಲೂಕಿನ ಸಂಪೂರ್ಣ ಜನತೆ ಲಸಿಕೆ ನೀಡುವರೇ ಸಾಧ್ಯವಾಗುತ್ತದೆ. ಪ್ರಸ್ತುತ ಲಸಿಕಾ ಕೇಂದ್ರಗಳಿಗೆ 50-100 ರ ಡೋಸ್ ಗಳ ಸಂಖ್ಯೆಯಲ್ಲಿ ಲಸಿಕೆ ಸರಬರಾಜು ಆಗುತ್ತಿರುವುದರಿಂದ ಸರ್ಕಾರ ನಿರೀಕ್ಷಿಸಿದಂತೆ ಸಂಪೂರ್ಣ ಜನ ತೆಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಈ ವಾಸ್ತವ ಅಂಶ ನಮ್ಮ ತಾಲೂಕಿನ ಉನ್ನತ ಮಟ್ಟದ ಜನಪ್ರತಿನಿದಿನಗಳಿಗೆ ತಿಳಿದಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಸರ್ಕಾರದ ಮಟ್ಟದಿಂದ ನಮ್ಮ ತಾಲೂಕಿಗೆ ತರಿಸುವ ಕೆಲಸವನ್ನು ಮಾಡದೆ ಲಸಿಕೆ ಕೇಂದ್ರದಲ್ಲಿ ಎದೆ ಉಬ್ಬರಿಸಿಕೊಂಡು ಅಧಿಕಾರಿಗಳು ತರಿಸಿದ ಲಸಿಕೆ ಗಳನ್ನು ತಾವೇ ತರಿಸಿದ್ದು ಎಂದು ಬಿಂಬಿಸುತ್ತ ಮತ್ತು ಅದನ್ನು ತಮ್ಮ ಕಿಸೆಯಿಂದ ನೀಡುತ್ತಿರುವ ರೀತಿಯಲ್ಲಿ ವರ್ತಿಸುತ್ತಿರವುದು ತೀರಾ ನಾಚಿಕೆಗೇಡಿನ ಸಂಗತಿ, ಅಂಥವರು ಈಗ ಸರ್ಕಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ತರಿಸಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸವನ್ನು ಮಾಡಲಿ, ಅದನ್ನು ಬಿಟ್ಟು ಅಧಿಕಾರಿಗಳು ನಮ್ಮ ತೆರಿಗೆ ಹಣದಲ್ಲಿ ತರಿಸಲಾದ ಲಸಿಕೆಯನ್ನು ಅವರು ಮುಂದೆ ನಿಂತು ತಾವೇ ನೀಡಿದ್ದೇವೆ ಎಂದು ಬಿಂಬಿಸುವ ಎಷ್ಟು ಸರಿ ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.