ಕ್ರಿಕೆಟ್ ಅಡುತ್ತಿದ್ದ ಯುವಕರ ನಡುವೆ ಧರ್ಮ ಬೇಧದ ವಿಷ ಬೀಜ ಬಿತ್ತಿದ ಆರೋಪ : ಪ್ರವೀಣ್ ಜಯನಗರ ವೀಡಿಯೊ ವೈರಲ್

Advt_Headding_Middle

 

ಸುಳ್ಯ ಜಯನಗರದ ಕೊರಂಬಡ್ಕ ದೈವಸ್ಥಾನದ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಅಲ್ಲಿ ಆಡದಂತೆ ತಡೆಯುವುದಕ್ಕಾಗಿ ಗಿಡ ನೆಡುವ ಕಾರಣ ನೀಡಿ ಗುಂಡಿ ತೆಗೆಯಲಾಗಿದೆ ಎಂದು ಯುವಕರು ಆಕ್ಷೇಪಿಸಿದಾಗ, ದೈವಸ್ಥಾನದ ಪದಾಧಿಕಾರಿಗಳಲ್ಲಿ ಒಬ್ಬರಾದ ಪ್ರವೀಣ್ ಜಯನಗರರವರು ಯುವಕರ ನಡುವೆ ಧರ್ಮ ಭೇದದ ವಿಷಬೀಜ ಬಿತ್ತಿದರೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಯುವಕರಲ್ಲಿ ಅವರು ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

“ನೀವು ಮುಸ್ಲಿಂ ಯುವಕರನ್ನು, ಕ್ರೈಸ್ತ ಯುವಕರನ್ನು ಕರೆದುಕೊಂಡು ಬಂದು ಇಲ್ಲಿ ಕ್ರಿಕೆಟ್ ಆಡಿಸುತ್ತಿದ್ದೀರಿ. ಇದು ಹಿಂದುಗಳ ಕ್ಷೇತ್ರ, ಇಲ್ಲಿ ಅನ್ಯ ಧರ್ಮೀಯರು ಬಂದು ಆಡುತ್ತಿರುವುದು ಏಕೆ? ನೀವು ಚರ್ಚಿನ ವಠಾರದಲ್ಲಿ ಅಥವಾ ಮಸೀದಿಯ ವಠಾರದಲ್ಲಿ ಹೋದರೆ ಅವರು ಅಲ್ಲಿ ಆಡಲು ಬಿಡುತ್ತಾರಾ? ” ಎಂದು ಅವರು ಹೇಳಿದರಲ್ಲದೆ, ಈ ಬಗ್ಗೆ ಆಕ್ಷೆಪಿಸಿದಾಗ, ಆ ಯುವಕರ ಗುಂಪಲ್ಲಿದ್ದ ಕ್ರೈಸ್ತ ಯುವಕನನ್ನು ಒತ್ತಾಯಪೂರ್ವಕ ಹೊರಗೆ ಕಳುಹಿಸುತ್ತಿರುವುದು ವೀಡಿಯೋದಲ್ಲಿ ಕಂಡುಬರುತ್ತದೆ.
ಈ ವೀಡಿಯೋ ವೈರಲ್ ಆಗಿದ್ದು, ಸ್ಥಳೀಯ ಕೆಲವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ. ಸಾಮರಸ್ಯದಲ್ಲಿರುವ ಊರಲ್ಲಿ ಧರ್ಮ ಭೇದದ ವಿಷಬೀಜ ಬಿತ್ತುವ ಕಾರ್ಯ ಮಾಡಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಪೋಲೀಸ್ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆಂದು ಹೇಳಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.