Breaking News

ಜು.19 : ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಬಾಪೂಜಿ ಬಾಲನಿಕೇತನ ಅನಾಥಾಲಯದಲ್ಲಿ ದಾಖಲಾತಿಗಾಗಿ ಸಂದರ್ಶನ

Advt_Headding_Middle

 

 

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ  ಆಶ್ರಯದಲ್ಲಿ ನಡೆಸುತ್ತಿರುವ  ಬಾಪೂಜಿ ಬಾಲನಿಕೇತನ ಅನಾಥಾಲಯದಲ್ಲಿ ಕೆಲವು ಸೀಟುಗಳು ಖಾಲಿ ಇವೆ.  ದಾಖಲಾತಿಯು 5 ರಿಂದ 8 ನೇ ತರಗತಿಯವರೆಗಿನ ಕನ್ನಡ ಮಾಧ್ಯಮದವರಿಗೆ ಮಾತ್ರವಾಗಿದ್ದು, ವಿದ್ಯಾರ್ಥಿಗಳು ತಂದೆ ಅಥವಾ ತಾಯಿ ಇಲ್ಲದ ಅನಾಥರಾಗಿದ್ದು, ಕುಟುಂಬದ ವಾರ್ಷಿಕ ಆದಾಯ ಬಡತನ ರೇಖೆಗಿಂತ ಕಡಿಮೆ ಇರಬೇಕು. ಅಂತಹ ಬಾಲಕರಿಗೆ ಉಚಿತ ಊಟ, ವಸತಿಯೊಂದಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿದೆ. ಅರ್ಹ ವಿದ್ಯಾರ್ಥಿಗಳು ತಂದೆ ಅಥವಾ ತಾಯಿ ನಿಧನ ಹೊಂದಿದ ಬಗ್ಗೆ ಮರಣ ಪ್ರಮಾಣ ಪತ್ರ, ವಿದ್ಯಾರ್ಥಿಯ ಜನನ ದಿನಾಂಕ ಇರುವ ಯಾವುದಾದರೊಂದು ಶಾಲಾ ದಾಖಲೆ, ಆದಾಯ ಪ್ರಮಾಣ ಪತ್ರ, ಹೆತ್ತವರ ಮತ್ತು ಬಾಲಕನ ಆಧಾರ್‌ ಕಾರ್ಡ್ ನೊಂದಿಗೆ ಜು.19ರಂದು ಬೆಳಗ್ಗೆ 11 ಗಂಟೆಗೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ  ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449663797 ಯನ್ನು ಸಂಪರ್ಕಿಸುವಂತೆ ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.