Breaking News

ಜಾಲ್ಸೂರು: ಮರಸಂಕ ಪರಿಸರದ ಹತ್ತಕ್ಕೂ ಅಧಿಕ ಮನೆಗಳಿಗೆ ಇಲ್ಲದ ಸಂಪರ್ಕ ರಸ್ತೆ

Advt_Headding_Middle

 

ಮಳೆಗಾಲ ಬಂತೆಂದರೆ ಸಾಕು ಈ ಪ್ರದೇಶದ ಜನರ ಸಂಕಷ್ಟ ಕೇಳುವವರಿಲ್ಲ

ವೃದ್ಧೆಯನ್ನು ಸ್ಟ್ರೆಚರ್ ಮೂಲಕ ತುಂಬಿ ಹರಿಯುತ್ತಿರುವ ತೋಡು ದಾಟಿಸುವ ವೀಡಿಯೋ ವೈರಲ್

ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಾ ಬಂದಿದ್ದು ನಾವು ಅಮೃತಮಹೋತ್ಸವದ ಹೊಸ್ತಿಲಿನಲ್ಲಿದ್ದೇವೆ. ಆದರೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಇಲ್ಲೊಂದು ಗ್ರಾಮದಲ್ಲಿ ಕನಸಾಗಿಯೇ ಉಳಿದಿದೆ.
ಹೌದು ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸುಮಾರು ಹತ್ತಕ್ಕೂ ಅಧಿಕ ಮನೆಯವರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಪ.ಜಾತಿ ಹಾಗೂ ಪ.ಪಂಗಡ ಸೇರಿದಂತೆ ಇತರೆ ಒಟ್ಟು 12 ಮನೆಗಳಿದ್ದು, ಇಲ್ಲಿಯ ಜನತೆ ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ನೆಲೆಸಿದ್ದು, ಇಲ್ಲಿಗೆ ನಡೆದು ಹೋಗಲು ವ್ಯವಸ್ಥೆ ಇದೆ. ಬಿಟ್ಟರೆ ದ್ವಿಚಕ್ರ ವಾಹನ ಸೇರಿದಂತೆ ಬೇರೆ ವಾಹನ ಸಂಚಾರಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ಜನತೆ ಕಲ್ಲು ಸಿಮೆಂಟ್, ಹೊಯಿಗೆ, ಕಬ್ಬಿಣ ಸೇರಿದಂತೆ ಕಟ್ಟಡ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಹೋಗಿ ಕಷ್ಟಪಟ್ಟು ಮನೆ ನಿರ್ಮಿಸಿದ್ದು, ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕಾಲುದಾರಿಯಲ್ಲಿ ಸಂಚರಿಸಿ, ಕಾಲುಸಂಕದ ಮೂಲಕ ತೋಡು ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ಪರಿಸರದಲ್ಲಿ ಸತೀಶ್, ಮಾದವ, ಈಶ್ವರ ನಾಯ್ಕ, ಕಮಲ, ಬಾಬುಗೌಡ, ಬಾಬು , ಜೋಗಿ, ಬೋಜ, ಅಣ್ಣು ಸೇರಿದಂತೆ ಹಲವರ ಮನೆಗಳಿದ್ದು ಮಳೆಗಾಲ ಬಂತೆಂದರೆ ಸಾಕು ಇಲ್ಲಿಯ ಜನರು ಸುತ್ತುಬಳಸಿ, ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

 

ವೃದ್ದೆಯನ್ನು ಸ್ಟ್ರೆಚರ್ ಮೂಲಕ ಹೊತ್ತೊಯ್ಯುವ ವೀಡಿಯೋ ವೈರಲ್
ಈ ಪರಿಸರದ ಸುಮಾರು 70 ವರ್ಷದ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಜು.13ರಂದು ಮನೆಯ ಆವರಣದಲ್ಲಿ ಬಿದ್ದು, ಕಾಲಿಗೆ ಗಂಭೀರ ಗಾಯಗೊಂಡಾಗ ಮನೆಯವರು ಸೇರಿಕೊಂಡು ಸ್ಟ್ರೆಚರ್ ಮೂಲಕ ವಿಪರೀತ ಮಳೆಯಿಂದ ತುಂಬಿ ಹರಿಯುತ್ತಿದ್ದ ತೋಡನ್ನು ದಾಟಿಸಿ, ರಸ್ತೆ ಬದಿಗೆ ಹೊತ್ತುಕೊಂಡು ತಂದು ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೇವಕಿ ಅವರನ್ನು ಸ್ಟ್ರೆಚರ್ ಮೂಲಕ ತೋಡು ದಾಟಿಸುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ.

ಕಾಲುಸಂಕ ನಿರ್ಮಾಣಗೊಂಡಿದ್ದರೂ ಸರಿಯಾಗಿಲ್ಲದ ರಸ್ತೆ ವ್ಯವಸ್ಥೆ
ಈ ಪರಿಸರದಲ್ಲಿ ಕಳೆದ 28 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತಿ ವತಿಯಿಂದ ಕಾಲುಸಂಕ ನಿರ್ಮಾಣಗೊಂಡಿದೆ. ಆದರೆ ಈ ಸಂಕದಲ್ಲಿ ಜನತೆಗೆ ನಡೆದುಕೊಂಡು ಹೋಗಲು ಸಾಧ್ಯವಿದೆ ಹೊರತು ವಾಹನ ಸಂಚಾರಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕ್ಷೇತ್ರದ ಶಾಸಕರು ಸಚಿವರಾಗಿದ್ದು, ಇನ್ನಾದರೂ ನಿರ್ಮಾಣಗೊಳ್ಳಬೇಕಿದೆ ಸಂಪರ್ಕ ಸೇತು
ಹೇಳಿ ಕೇಳಿ ಕಳೆದ 59 ವರ್ಷಗಳಿಂದ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿಂದ ಕಳೆದ ಆರು ಅವಧಿಗೆ ಎಸ್. ಅಂಗಾರರು ಶಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರಕಾರದಲ್ಲಿ ಸಚಿವರಾಗಿದ್ದು, ಸಚಿವ ಅಂಗಾರರ ವಿಶೇಷ ಪ್ರಯತ್ನದಿಂದ ಇಲ್ಲಿಗೆ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾರ್ಯ ಆಗಬೇಕಾಗಿದೆ.

ಜಾಲ್ಸೂರು ಕ್ಷೇತ್ರವನ್ನು ಹಲವಾರು ವರ್ಷಗಳಿಂದ ಪ್ರತಿನಿಧಿಸುವ ಎಲ್ಲ ಪಕ್ಷದ ಸ್ಥಳಿಯ ನಾಯಕರುಗಳಿಗೆ ಈ ಸಮಸ್ಯೆ ಬಗ್ಗೆ ತಿಳಿಯದೇ ಏನಿಲ್ಲ, ಇಲ್ಲಿಯ ತನಕ‌ ಎಲ್ಲವೂ‌ ಭರವಸೆಗಳ ಮೇಲೆ ನಿಂತಿದೆಯೇ ವಿನಹ‌ ಯಾರು ಕೂಡ ಸಮಸ್ಯೆ ಬಗೆಹರಿಸಲು ಅಥವಾ ಸಂಪರ್ಕ ರಸ್ತೆ, ಕಾಲುಸಂಕ, ಸಣ್ಣ ಸೇತುವೆ, ಇಂತಹ‌ ಯಾವುದೇ ಸೌಕರ್ಯಗಳನ್ನು ನೀಡುವಷ್ಟು ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.