Breaking News

ಕೊಡಿಯಾಲಬೈಲು ಸ್ಮಶಾನ ಅಪಪ್ರಚಾರ ಸರಿಯಲ್ಲ

Advt_Headding_Middle

ಲೋಕಾಯುಕ್ತ ತನಿಖೆಗೆ ನಾನೇ ಒತ್ತಾಯಿಸುತ್ತೇನೆ: ಹರೀಶ್ ರೈ ಉಬರಡ್ಕ ಪತ್ರಿಕಾಗೋಷ್ಠಿ

ಕೊಡಿಯಾಲಬೈಲು ವಿಮುಕ್ತಿ ಧಾಮ ಸ್ಮಶಾನಕ್ಕೆ ಸಂಬಂಧಿಸಿ ಅಪಪ್ರಚಾರಗಳು ನಡೆಯುತ್ತಿದ್ದು, ಸತ್ಯಾಸತ್ಯತೆ ತಿಳಿಸಲು ನಾನೇ ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ಇನ್ನೆರಡು-ಮೂರು ದಿನಗಳಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಲೆಕ್ಕಾಚಾರಗಳನ್ನು ಕೊಟ್ಟು ತನಿಖೆ ನಡೆಸಲು ಕೇಳಿಕೊಳ್ಳುತ್ತೇನೆ ಎಂದು ಉಬರಡ್ಕ ಗ್ರಾ.ಪಂ. ಸದಸ್ಯ ಹರೀಶ್ ರೈ ಉಬರಡ್ಕರು ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹರೀಶ್ ರೈಯವರು ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಸ್ಮಶಾನದ ಅಗತ್ಯತೆ ಇದ್ದುದರಿಂದ ನಾನು ಉಬರಡ್ಕ ಗ್ರಾ.ಪಂ. ಅಧ್ಯಕ್ಷನಾಗಿದ್ದ ಸಂದರ್ಭ ಈ ಪ್ರಾಜೆಕ್ಟ್‌ಗೆ ಕೈಹಾಕಿದ್ದೆ. ಲಯನ್ಸ್ ಕ್ಲಬ್ ಪ್ರಾಂತೀಯ ಸಮಿತಿ ನೇತೃತ್ವದಲ್ಲಿ ಸಹಕಾರ ನೀಡಿದ್ದಾರೆ. ಕೇವಲ 60 ದಿನದಲ್ಲಿ ಸ್ಮಶಾನದ ಕೆಲಸ ಮುಗಿದು ಲೋಕಾರ್ಪಣೆ ಗೊಂಡಿತು. 56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸ್ಮಶಾನಕ್ಕೆ 16,81,000 ರೂ. ಉದ್ಯೋಗ ಖಾತರಿ ಮತ್ತು 14 ನೇ ಹಣಕಾಸಿನಿಂದ ಭರಿಸಲಾಗಿದೆ.

5 ಲಕ್ಷ ರೂ. ಶಾಸಕರು ನೀಡಿದ್ದರೆ, 1,05,000 ರೂ. ತಾಲೂಕು ಪಂಚಾಯತ್ ಸದಸ್ಯರು ಒದಗಿಸಿದ್ದಾರೆ. ಲಯನ್ಸ್ ಕ್ಲಬ್‌ ಪ್ರಾಂತೀಯ ಸಮಿತಿಯವರು ಒಟ್ಟು 10 ಲಕ್ಷ ವ್ಯಯಿಸಿದ್ದಾರೆ ಎಂದು ಹರೀಶ್ ರೈಯವರು ಲೆಕ್ಕ ನೀಡಿದರು. ಪಂಚಾಯತ್ ನಿಂದ ಬಂದ ಹಣ ಎಲ್ಲವೂ ಪಂಚಾಯತ್ ಅಕೌಂಟ್‌ನ ಮೂಲಕವೇ ಆಗಿದೆ. ಇದೆಲ್ಲದಕ್ಕೂ ಪಂಚಾಯತ್‌ನಲ್ಲಿ ದಾಖಲೆಯೂ ಇದೆ.

ಮೂರು ಸಂಘ ಸಂಸ್ಥೆಗಳು 10 ಸಾವಿರದಂತೆ 30 ಸಾವಿರ ಕ್ಯಾಷ್ ನೀಡಿದ್ದಲ್ಲದೆ, ಉಳಿದೆಲ್ಲವೂ ಪಂಚಾಯತ್ ಅಕೌಂಟ್ ಮೂಲಕವೇ ಕೆಲಸ ನಡೆದಿದೆ ಎಂದು ಅವರು ವಿವರ ನೀಡಿದರು. 2019 ರಿಂದ ಇದುವರೆಗೆ 152 ಶವಗಳನ್ನು ಸುಡಲಾಗಿದ್ದು, ಇದರಲ್ಲಿ 20ರಷ್ಟು ಉಚಿತವಾಗಿ ಸುಟ್ಟಿದ್ದೇವೆ. ಉಳಿದವರಿಂದ ರೂ.3000 ದಂತೆ ಪಡೆದು ಶವ ಸಂಸ್ಕಾರ ನೆರವೇರಿಸಲಾಗಿದೆ. ಇದರಲ್ಲಿ 1000 ಶವ ಸುಡುವ ಕೆಲಸ ನಿರ್ವಹಿಸುವ ವ್ಯಕ್ತಿಗೆ ನೀಡಿದರೆ, ಉಳಿದ 2000 ಮೈಂಟೆನೆನ್ಸ್‌ಗೆಂದು ತೆಗೆದಿರಿಸಿದ್ದೇವೆ. ಈ 2000 ರೂ. ವನ್ನು ಕೂಡ ನಾನು ತೆಗೆದುಕೊಳ್ಳುವುದಿಲ್ಲ.

ಸ್ಮಶಾನದ ಪಕ್ಕದಲ್ಲಿ ನಾರಾಯಣ ರಾವ್‌ರವರ ಮನೆಯಿರುವುದರಿಂದ ಅವರು ಈ ಹಣದ ಲೆಕ್ಕಾಚಾರ ನೋಡಿಕೊಳ್ಳುತ್ತಾರೆ. ಈಗ ಅಕೌಂಟ್‌ನಲ್ಲಿ 2 ಲಕ್ಷ 27 ಸಾವಿರ ಇದೆ. ಅದನ್ನು ನಾವು ಪಂಚಾಯತ್ ಅಕೌಂಟ್ ಮಾಡಿಕೊಂಡ ಕೂಡಲೇ ಅದಕ್ಕೆ ನೀಡುತ್ತೇವೆ. ಇದುವರೆಗೆ ಶವ ಸುಡಲು ಖರ್ಚಾಗಿರುವುದು ಕೇವಲ 29 ಸಾವಿರವಷ್ಟೆ. 2 ಸ್ಟ್ರೀಟ್‌ಲೈಟ್‌ಗಳನ್ನು ಹಾಕಿದ್ದೇವೆ ಹೊರತು ಅದರಿಂದ ಹಣ ಖರ್ಚು ಮಾಡಿಲ್ಲ. ಕಟ್ಟಿಗೆ, ಗೆರಟೆ ಇತ್ಯಾದಿಗಳನ್ನು ಅರಣ್ಯ ಇಲಾಖೆ, ಸಂಸ್ಥೆಗಳಿಂದ ಸಹಾಯವಾಗಿ ಕೇಳಿ ಪಡೆದುಕೊಂಡು ಸ್ಮಶಾನ ನಡೆಸಿಕೊಂಡು ಬಂದಿದ್ದೇವೆ.

ಪರಿಹಾರವಿಲ್ಲವೆ:
ಮೊನ್ನೆ ಶವ ಕರಟಿದ ವಾಸನೆ ಬರುತ್ತದೆ ಎಂದು ಪ್ರತಿಭಟಿಸಿದರು. ಅದು ಸರಿಯೆ. ಅಂತಹ ತೊಂದರೆ ಇದ್ದರೆ ನಮ್ಮ ಗಮನಕ್ಕೆ ತರಬಹುದಿತ್ತು. ನಾವು ಅದನ್ನು ಕೆಮಿಕಲ್ ಏನಾದರೂ ಹಾಕಿ ವಾಸನೆ ಬರದಂತೆ ಮಾಡಬಹುದಿತ್ತು. ಸ್ಮಶಾನ ನಿರ್ವಹಣಾ ಸಮಿತಿ ಬೇಕೆಂದು ಆರಂಭದ ದಿನದಿಂದಲೇ ನಾನು ಒತ್ತಾಯಿಸಿಕೊಂಡು ಬರುತ್ತಿದ್ದೇನೆ. ಆದರೆ ಅದು ಸಾಧ್ಯವಾಗಲಿಲ್ಲ. ಕಳೆದ ಪಂಚಾಯತ್‌ನ ಅವಧಿಯಲ್ಲಿ ಕೂಡ ನಾನೇ ಒತ್ತಾಯಿಸಿದೆ. ಕೊನೆಯ ಸಂದರ್ಭ ಟ್ರಸ್ಟ್ ಮಾಡಲು ನನಗೆ ವಹಿಸಿಕೊಟ್ಟರು. ಆದರೆ ಬಳಿಕ ಚುನಾವಣೆ ಬಂದುದರಿಂದ ಅದು ಆಗಿಲ್ಲ.

ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಕೂಡ ಸಮಿತಿಗೆ ನಾನೇ ಒತ್ತಾಯಿಸಿ ಸಮಿತಿ ಆಗಿದೆ. ಆದರೆ ಸ್ಮಶಾನಕ್ಕೆ ದುಡಿದ ಲಯನ್ಸ್‌ನವರನ್ನು ಸಮಿತಿಯಲ್ಲಿ ಸದಸ್ಯರಾಗಿ ಸೇರಿಸಿಕೊಳ್ಳಲು ಒಪ್ಪದಿದ್ದುರಿಂದ ನಾನು ಸಮಿತಿಯಲ್ಲಿರಲು ಇಷ್ಟಪಡಲಿಲ್ಲ. ಆದರೂ ಹೊರಗೆ ನಿಂತು ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುತ್ತೇನೆ. ಇದುವರೆಗೆ ಮೂರು ಸಾವಿರಕ್ಕೆ ಶವ ಸಂಸ್ಕಾರ ಮಾಡಿದಂತೆಯೇ ಈಗ ಆದ ಸಮಿತಿಯವರು ಅದನ್ನು ನಡೆಸಿಕೊಂಡು ಹೋಗಬೇಕು. ರೇಟ್ ಹೆಚ್ಚು ಏರಿಸಬಾರದೆಂದು ಸಮಿತಿಯವರನ್ನು ನಾನು ವಿನಂತಿಸುತ್ತೇನೆ ಎಂದು ಹೇಳಿದರು.

ಅಪಪ್ರಚಾರ:
ಸ್ಮಶಾನದಲ್ಲಿ ನಾನು ಹಣ ದುರ್ಬಳಕೆ ಮಾಡಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಎಲ್ಲರು ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಪಂಚಾಯತ್ ಪಿಡಿಓರವರೆ ಇಂಜಿನಿಯರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಎಸ್ಟಿಮೇಟ್ ಮಾಡಿದ್ದಾರೆ. 51 ಲಕ್ಷದ ಎಸ್ಟಿಮೇಟ್ ಲೆಕ್ಕ ಇದೆ. ಇದೆಲ್ಲ ನಾನು ಹೇಳಿ ಮಾಡಿದ್ದಲ್ಲ. ನಮಗೆ 33 ಲಕ್ಷ ಹಣ ಬಂದಿದ್ದರೆ, ಇನ್ನೂ 36 ಲಕ್ಷ ಆಗಬೇಕು. ಅದರಲ್ಲಿ 15-17 ಲಕ್ಷ ಪೇಮೆಂಟ್ ಬಾಕಿ ಇದೆ. ಇದಕ್ಕೆ ವ್ಯವಸ್ಥೆಯಾಗಬೇಕು.

ಈಗಾಗಲೇ ಸಚಿವರಲ್ಲಿ ಇದೆಲ್ಲವನ್ನು ಹೇಳಿದ್ದೇನೆ ಎಂದು ಹರೀಶ್ ರೈ ಹೇಳಿದರು. ಮನಮೋಹನ್ ಬಳ್ಳಡ್ಕ ಹಾಗೂ ಸೀತಾನಂದ ಬೇರ್ಪಡ್ಕರು ಮಾತನಾಡಿ ಹರೀಶರು ಉತ್ತಮ ಕೆಲಸ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಆದ ಸ್ಮಶಾನದಿಂದ ಜನರಿಗೆ ಉಪಯೋಗ ಆಗುತ್ತಿದೆ. ಚುನಾವಣೆಯಲ್ಲಿ ಜನರಿಂದ ತಿರಸ್ಕಾರಗೊಂಡವರು ಈಗ ಏನೂ ಮಾಡಲಾಗದೆ ಈ ರೀತಿಯ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಆದರೆ ಉಬರಡ್ಕದ ಜನರು ಹರೀಶ್ ರೈಯವರ ಜೊತೆಗಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ರಾವ್, ವಿಜಯ್‌ಕುಮಾರ್ ಉಬರಡ್ಕ, ರಾಧಾಕೃಷ್ಣ ಬೇರ್ಪಡ್ಕ, ಕೃಷ್ಣಕುಮಾರ್ ಕಲ್ಚಾರ್, ಪ್ರಭಾಕರ್ ಅಮೈ, ಸಂದೀಪ, ಗುರುವ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.