ಗೂನಡ್ಕ: ಸಜ್ಜನ ಸಭಾಭವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸಜ್ಜನ ಅದೃಷ್ಟ ದಂಪತಿಗಳು

Advt_Headding_Middle

 

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಆಶ್ರಯದಲ್ಲಿ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಪರಿಸರ ಸ್ನೇಹಿ ಸುಸಜ್ಜಿತ ಸಜ್ಜನ ಸಭಾಂಗಣವನ್ನು ನಿರ್ಮಿಸಲಾಗಿದ್ದು,‌ ಜು. 15ಎಂದು ಪ್ರಥಮ ವಿವಾಹ ಸಮಾರಂಭ ನಡೆದು ವಧು ವರರಿಗೆ ಸಜ್ಜನ ಅದೃಷ್ಟ ದಂಪತಿಗಳೆಂಬ ಬಹುಮಾನ ನೀಡಲಾಯಿತು.
ಬಡ ಕುಟುಂಬದವರು ನಡೆಸುವ ಮದುವೆ ಸಮಾರಂಭಗಳಿಗೆ ಕೈಗೆಟುಕುವ ರಿಯಾಯಿತಿ ದರದಲ್ಲಿ ಸಭಾಂಗಣವನ್ನು ನೀಡಿ ನೆರವಾಗುವ ಸಾಮಾಜಿಕ ಕಳಕಳಿ ಈ ಸಭಾಂಗಣ
ಅದ್ದೂರಿ ಸಜ್ಜೋನತ್ಸವದೊಂದಿಗೆ ಉದ್ಘಾಟನೆಗೊಂಡು, ನಾಲ್ಕು ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು. ಗೂನಡ್ಕ‌ ದರ್ಕಾಸಿನ ಟಿ.‌ಬಿ.‌ ಅಬ್ಬಾಸ್ ರವರ ಪುತ್ರಿ ಮರಿಯಮ್ ಝಖಿಯಾರೊಂದಿಗೆ ಇರುವಂಬಳ್ಳ ಅಬ್ದುಲ್ ರಹಿಮಾನ್ ರವರ ಪುತ್ರ ಇಲ್ಯಾಸ್ ವಿವಾಹ ಹಾಗು ಟಿ.ಬಿ. ಅಬ್ದುಲ್ ಅಝೀಝ್ ರವರ ಪುತ್ರಿ ಮರಿಯಮ್ ನೌಫಿಯಾರೊಂದಿಗೆ ಮಡಿಕೇರಿಯ ಏಳನೇ ಹೊಸಕೋಟೆ ಉಮ್ಮರ್ ಝಂಝಂರವರ ಪುತ್ರ ನೌಶಾದ್ ರವರ ವಿವಾಹ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನದ ಪರವಾಗಿ ಅಶ್ರಫ್ ಟರ್ಲಿ, ‌ರಹೀಂ ಬೀಜದಕಟ್ಟೆ ಹಾಗೂ ವಹಾಬ್ ಅಡಿಮಾರಡ್ಕ ವಧೂವರರಿಗೆ ಉಡುಗೊರೆಯನ್ನು ನೀಡಿ ಶುಭಹಾರೈಸಿದರು.

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಜ್ಜನ ಸಭಾಂಗಣ 400 ಆಸನಗಳ ಒಳಾಂಗಣ ವ್ಯವಸ್ಥೆಯನ್ನು ಹೊಂದಿದ್ದು, ಪ್ರತ್ಯೇಕವಾಗಿ 250 ಜನರಿಗೆ ಏಕಕಾಲದಲ್ಲಿ ಭೋಜನದ ವ್ಯವಸ್ಥೆ, ವಧು-ವರರಿಗೆ ಪ್ರತ್ಯೇಕವಾದ ಅಲಂಕಾರದ ಕೋಣೆಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ವಿಶಾಲವಾದ ವ್ಯವಸ್ಥಿತ ಅಡುಗೆಕೋಣೆಗಳು, ಪ್ರತ್ಯೇಕ ಶೌಚಾಲಯಗಳು ಹಾಗೂ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಗಳಲ್ಲದೇ ಜನರೇಟರ್ ಬ್ಯಾಕ್ ಅಪ್ ಒದಗಿಸಲಾಗಿದೆ. ಸುಮಾರು ರೂ 75 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸುಸಜ್ಜಿತ ಸಭಾಂಗಣವನ್ನು, ಬಡವರ ವಿವಾಹ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಕೈಗೆಟುಕುವ ವಿಶೇಷ ರಿಯಾಯಿತಿ ದರದಲ್ಲಿ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಇಲ್ಲಿ ನಡೆಯುವ ಪ್ರತೀ ಮದುವೆಯ ನವದಂಪತಿಗಳ ಹೆಸರುಗಳನ್ನು ಅದೃಷ್ಟ ಚೀಟಿ ಎತ್ತುವುದರ ಮೂಲಕ ವರ್ಷಾಂತ್ಯದಲ್ಲಿ ‘ಸಜ್ಜನ ಅದೃಷ್ಟ ದಂಪತಿಗಳು’ ಎಂದು ಘೋಷಿಸುವುದರೊಂದಿಗೆ ಆಕರ್ಷಕ ಉಡುಗೊರೆಗಳನ್ನು ನೀಡಿ ಪುರಸ್ಕರಿಸುವ ಉದ್ದೇಶ ಇರುವುದಾಗಿ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.