ಎಸ್ ಕೆ ಎಸ್ ಎಸ್ ಎಫ್ ತ್ವಲಬಾವಿಂಗ್ ವತಿಯಿಂದ ಅನುಸ್ಮರಣಾ ಸಂಗಮ

Advt_Headding_Middle

 

ಎಸ್ ಕೆ ಎಸ್ ಎಸ್ ಎಫ್ ತ್ವಲಬಾ ವಿಂಗ್ ಸುಳ್ಯ ವಲಯದ ಜನರಲ್ ಕನ್ವೀನರ್ ಹಾಗೂ ಕೆ.ಐ.ಸಿ ವಿದ್ಯಾರ್ಥಿಯಾಗಿದ್ದ ಇತ್ತಿಚೆಗೆ ನಿಧನರಾದ ಸಿನಾನ್ ಇರುವಂಬಳ್ಳ ರವರ ಅನುಸ್ಮರಣಾ ಸಂಗಮ ಮತ್ತು ಅವರ ಸ್ಮರಣಾರ್ಥ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಜು.15 ರಂದು ಗುರುಂಪು ಸುಪ್ರೀಂ ಹಾಲ್ ನಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಲಯ ಉಪಾಧ್ಯಕ್ಷರಾದ ಇರ್ಷಾದ್ ಫೈಝಿ ಪಾಲ್ತಾಡ್ ವಹಿಸಿದರು.
ಉಸ್ತಾದ್ ಅಬ್ದುಲ್ ಖಾದರ್ ಫೈಝಿ ಐವರ್ನಾಡ್ ದುವಾ ನೆರವೇರಿಸಿದರು.
ಮುಹಮ್ಮದ್ ಸ್ವಾಲಿಹ್ ಕೌಸರಿ ಅನುಸ್ಮರಣಾ ಭಾಷಣ ನಡೆಸಿದರು.
ಸುಳ್ಯ ರೇಂಜ್ ಮದ್ರಸಾ ಮೆನೇಜ್ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್ ಸಂಪಾಜೆ, ಟ್ರೆಂಡ್ ಜಿಲ್ಲಾ ಕೋಶಾಧಿಕಾರಿ ಯು.ಪಿ ಬಶೀರ್ ಬೆಳ್ಳಾರೆ ಮಾತನಾಡಿದರು.
ಸಮಾರಂಭದಲ್ಲಿ ಮದ್ರಸಾ ಮೆನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಎಸ್.ಎ ಹಮೀದ್, ಸುಳ್ಯ ವಲಯ ಪ್ರ.ಕಾರ್ಯದರ್ಶಿ ಅಕ್ಬರ್ ಕರಾವಳಿ, ಅಹ್ಮದ್ ಸುಪ್ರೀಂ, ಅಹ್ಮದ್ ಪಾರೆ, ಆಶಿಕ್ ಸುಳ್ಯ, ಶಹೀದ್ ಪಾರೆ ಉಪಸ್ಥಿತರಿದ್ದರು. ನವಾಜ್ ಸುಪ್ರೀಂ, ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್ ಸಹಕರಿಸಿದರು
ತ್ವಲಬಾ ವಿಂಗ್ ಚೇರ್ಮನ್ ಕಬೀರ್ ಅಜ್ಜಾವರ ಸ್ವಾಗತಿಸಿ, ಕನ್ವೀನರ್ ಸ್ವಾದಿಕ್ ಬೆಳ್ಳಾರೆ ವಂದಿಸಿದರು. ಇಸಾಕ್ ಕಳಂಜ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.