Breaking News

ಸುಳ್ಯ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ವತಿಯಿಂದ ನಿವೃತ್ತ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle

 

 

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಸುಳ್ಯ ಉಪಗ್ರಹ ಶಾಖಾ ಸಮಿತಿ ವತಿಯಿಂದ ಸುದೀರ್ಘ 28 ವರ್ಷಗಳ ಕಾಲ ಎಲ್. ಐ.ಸಿ. ಯ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ
ಸಲ್ಲಿಸಿ ವಯೋ ನಿವೃತ್ತಿ ಹೊಂದಿದ
ಶ್ರೀನಿವಾಸ್ ಕೆ. ಯವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಜು. 15 ರಂದು ಸುಳ್ಯ ಗಣೇಶ್ ಕಾಂಪ್ಲೆಕ್ಸ್ ನಲ್ಲಿರುವ ಎಲ್. ಐ.ಸಿ. ಉಪಗ್ರಹ ಶಾಖಾ ಕಛೇರಿಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ಎಲ್. ಐ .ಸಿ.ಸುಳ್ಯ ಶಾಖೆಯ ವ್ಯವಸ್ಥಾಪಕ ಶಶಿಧರ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀನಿವಾಸ್ ಕೆ, ಶ್ರೀಮತಿ ಸುಧಾಶ್ರೀನಿವಾಸ್,
ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಗ್ಡೆ , ಆಡಳಿತಾಧಿಕಾರಿ ಬಾಬು ನಾಯ್ಕ್
ಉಪಸ್ಥಿತರಿದ್ದರು.
ಎಲ್.ಐ.ಸಿ.ಪ್ರತಿನಿಧಿ ಮಾಧವ ಜಾಲ್ಸೂರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭವಾನಿಶಂಕರ ಅಡ್ತಲೆ ಅಭಿನಂದನಾ ಭಾಷಣಗೈದರು. ಗೋಪಾಲಕೃಷ್ಣ ಪಿ.ಎಸ್
ಸನ್ಮಾನ ಪತ್ರ ವಾಚಿಸಿದರು. ಪ್ರಭಾಕರ ಎಸ್.ಎನ್ ಸೋಣಂಗೇರಿ ವಂದಿಸಿದರು.
ಪದ್ಮನಾಭ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಮತ್ತು ಶ್ರೀಮತಿ ಸುಧಾ
ದಂಪತಿಯನ್ನು ಶಾಲು, ಹಾರಾರ್ಪಣೆ , ಫಲಪುಷ್ಪ ತಾಂಬೂಲ ಸ್ಮರಣೆಕೆ , ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಲ್. ಐ.ಸಿ.ಪ್ರತಿನಿಧಿಗಳಾದ ವೆಂಕಟ್ರಾಜ್ ಭಟ್ ಸುಬ್ರಹ್ಮಣ್ಯ, ಶಂಕರ ಲಿಂಗಂ ತೊಡಿಕಾನ, ಸೋಮನಾಥ ಕೇರ್ಪಳ, ವಸಂತ ಹೊದ್ದೆಟ್ಟಿ, ಮಾಧವ ಬಿ.ಟಿ, ಸದಾನಂದ ಐವರ್ನಾಡು, ಅವಿನಾಶ್ ಕುರುಂಜಿ ಸಿಬ್ಬಂದಿಗಳಾದ ಲಿಂಗಪ್ಪ ಗೌಡ, ಸಂದೀಪ್, ರೋಶನ್ ಕುದ್ಕುಳಿ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.