ಪೆರಾಜೆ ಬಿಪಿಎಲ್ ಕಾರ್ಡ್‌ದಾರರಿಂದ ಮುಖ್ಯಮಂತ್ರಿಗೆ ಮನವಿ

Advt_Headding_Middle

ಪೆರಾಜೆ ಗ್ರಾಮದ ನಾಗರಿಕರು ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ನಾವು ಪೆರಾಜೆ ಗ್ರಾಮದ ಬೆಟ್ಟಗುಡ್ಡಗಳಿರುವ ಕುಗ್ರಾಮದಲ್ಲಿ ವಾಸಿಸುತ್ತಿದ್ದು, ಕುಗ್ರಾಮದಿಂದ ಪೆರಾಜೆ ಪೇಟೆಗೆ ಯಾವುದೇ ಸಾರಿಗೆ ವಾಹನಗಳಿಲ್ಲ, ಸುಮಾರು 25 ಕಿ.ಮೀ. ದೂರ ನಡೆದೆ ಬರಬೇಕು. ಯಾವುದೇ ಕಚೇರಿ ವ್ಯವಹಾರಕ್ಕೆ ಸುಮಾರು 55 ಕಿ.ಮೀ.ದೂರ ಪ್ರಯಾಣಿಸಿ ಮಡಿಕೇರಿಗೆ ಹೋಗಬೇಕು.

ಇತರ ವ್ಯವಹಾರಗಳಿಗೆ ಸುಳ್ಯಕ್ಕೆ ಸುಮಾರು 25 ಕಿ.ಮೀ. ದೂರ ಪ್ರಯಾಣಿಸಬೇಕಾಗುತ್ತದೆ. ಹಾಗಾಗಿ ಅನುಕೂಲ ಇದ್ದವರು ದ್ವಿಚಕ್ರ ವಾಹನ, ಜೀಪ್ ಮೊದಲಾದವುಗಳನ್ನು ಹೊಂದಿರುತ್ತಾರೆ. ಹಾಗಾಗಿ ನಮ್ಮ ಸಮಸ್ಯೆಗೆ ಸ್ಪಂದಿಸಿ ಬಿ.ಪಿ.ಎಲ್ ಕಾರ್ಡ್‌ನ್ನು ರದ್ದು ಮಾಡದಂತೆ ಆದೇಶ ನೀಡಬೇಕೆಂದು ಸುಮಾರು 25 ಮಂದಿಯ ಸಹಿಯನ್ನು ಹಾಕಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.