ಪತಿಗೆ ನಗ್ನ ಫೋಟೋ ಕಳುಹಿಸಿದ ಆರೋಪ : ಪ್ರಿಯಕರನ ಮೇಲೆ ಕೇಸು ದಾಖಲು

Advt_Headding_Middle

ತನ್ನ ಪತಿಗೆ ನಗ್ನ ಫೋಟೋ ಕಳುಹಿಸಿದ್ದಾರೆಂದು ಪ್ರಿಯಕರನ ಮೇಲೆ ಮಹಿಳೆಯೊಬ್ಬರು ದೂರು ನೀಡಿದ ಆಧಾರದಲ್ಲಿ ಆರೋಪಿಯ ವಿರುದ್ಧ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪುತ್ತೂರು ತಾಲೂಕಿನ 26 ವರ್ಷದ ಮಹಿಳೆ ಮತ್ತು ವಿಜೇಶ್ ಎಂಬವರು ಪರಸ್ಪರ ಪ್ರೀತಿಸುತ್ತಿದ್ದು, 2016 ನೇ ನವೆಂಬರ್ 2 ನೇ ವಾರದಲ್ಲಿ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದ ಮಹಿಳೆಯನ್ನು ಪುತ್ತೂರಿನ ದರ್ಬೆ ಎಂಬಲ್ಲಿ ಚಹಾ ಕುಡಿಯಲು ಹೋಟೆಲ್‌ಗೆ ಹೋಗೋಣ ಎಂದು ಒತ್ತಾಯಪಡಿಸಿ ವಿಜೇಶ್‌ನು ತನ್ನ ಆಲ್ಟೋ ಕಾರಿನಲ್ಲಿ ಮಹಿಳೆಯನ್ನು ಕುಳ್ಳಿರಿಸಿ ಹೋಟೆಲ್ ರೂಮಿಗೆ ಕರೆದುಕೊಂಡು ಹೋಗಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಮಾಡಿ, ಆಕೆಯ ನಗ್ನ ಸ್ಥಿತಿಯಲ್ಲಿನ ವಿಡಿಯೋ ಮತ್ತು ಫೋಟೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನೆನ್ನಲಾಗಿದೆ. ಫಿರ್ಯಾದಿ ಮಹಿಳೆ 2021 ಮೇ.03 ರಂದು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ವಿಜೇಶ್‌ನು ಮಹಿಳೆಯ ಗಂಡನಿಗೆ ಮಹಿಳೆಯು ತನ್ನ ಜೊತೆಗಿದ್ದ ನಗ್ನ ಫೋಟೋವನ್ನು ಕಳುಹಿಸಿದ ಕಾರಣ ಮಹಿಳೆಯ ಗಂಡ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ, ಇದೀಗ ಮಹಿಳೆಯ ದೂರಿನ ಮೇಲೆ ಆರೋಪಿ ವಿಜೇಶ್‌ನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಅಪಹರಣ, ಅತ್ಯಾಚಾರ ಹಾಗೂ ಮೋಸದ ಕುರಿತಂತೆ ಪ್ರಕರಣ ದಾಖಲಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.