ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

Advt_Headding_Middle

 

 

 

ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ನೇತೃತ್ವದಲ್ಲಿ ಮೆಸ್ಕಾಂ ಎದುರು ಪ್ರತಿಭಟನೆ

ತಾಕತ್ತಿದ್ದರೆ ಸಚಿವರು ೧೧೦ ಕೆ.ವಿ. ಸಬ್‌ಸ್ಟೇಶನ್ ಮಾಡಿಸಲಿ : ನಾಯಕರ ಸವಾಲು

ಸುಳ್ಯ ತಾಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಇಂದು ಮೆಸ್ಕಾಂ ಎದುರು ನಡೆಯಿತು.

ಸುಳ್ಯ ಬಂದ್ ಮಾಡಿ ಪ್ರತಿಭಟಿಸಬೇಕು-ಅಡ್ಪಂಗಾಯ

ಸುಳ್ಯದ ವಿದ್ಯುತ್ ಸಮಸ್ಯೆ ಹಲವು ದಶಕಗಳಿಂದ ಇದೆ. ನಮ್ಮ ಬೇಡಿಕೆ, ಅಹವಾಲುಗಳು ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ಮುಟ್ಟುವುದಿಲ್ಲ. ಆದುದರಿಂದ ಸುಳ್ಯ ತಾಲೂಕನ್ನು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಇದೆ. ಆಗಲಾದರೂ ಸರಕಾರಕ್ಕೆ ಬಿಸಿ ತಾಗಬಹುದು ಎಂದು ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಧನಂಜಯ ಅಡ್ಪಂಗಾಯ ಹೇಳಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಟಿ.ಎಂ. ಶಹೀದ್‌ರವರು “ಸುಳ್ಯ ತಾಲೂಕಿನಾದ್ಯಾಂತ ಹಲವು ದಿನಗಳಿಂದ ವಿದ್ಯುತ್ ಇಲ್ಲದೇ ತಾಲೂಕು ಕತ್ತಲಿನಲ್ಲಿದೆ. ಇಲಾಖೆಯನ್ನು ಈ ಬಗ್ಗೆ ಕೇಳಿದರೆ ಕುಂಟು ನೆಪ ಹೇಳಿ ಜನರಿಗೆ ದ್ರೋಹ ಮಾಡುತ್ತಿದೆ. ವಿದ್ಯುತ್ ಸಮಸ್ಯೆಯ ಬಗ್ಗೆ ನಮ್ಮ ಸಚಿವರು ಮಾತನಾಡುತ್ತಿಲ್ಲ. ೧೧೦ ಕೆವಿ ವಿದ್ಯುತ್ ಯೋಜನೆ ನೆನೆಗುದಿಗೆ ಬಿದ್ದಿದೆ. ಹಲವು ಬಾರಿ ಪ್ರತಿಭಟನೆ, ಮನವಿ ನೀಡಿದರೂ ಮೆಸ್ಕಾಂ ಇಲಾಖೆ ಸ್ಪಂದಿಸುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಆನ್ ಲೈನ್ ತರಗತಿಗಳಿಗೆ ಮತ್ತು ಹತ್ತನೇ ತರಗತಿಯ ಪರೀಕ್ಷೆಗಳಿಗೆ ತೊಂದರೆ ಆಗುತ್ತಿದೆ. ವಿದ್ಯುತ್ ಸಮಸ್ಯೆಯ ಬಗ್ಗೆ ಸರಕಾರ ಮತ್ತು ಮೆಸ್ಕಾಂ ಇಲಾಖೆ ಜನರಿಗೆ ತಪ್ಪು ಮಾಹಿತಿ ನೀಡಿ ದ್ರೋಹ ಮಾಡುತ್ತಿದೆ. ದಿನದಲ್ಲಿ ಹಲವು ಬಾರಿ ವಿದ್ಯುತ್ ತೆಗೆಯುವುದು- ಕೊಡುವುದು ಕೆಲಸ ಮಾಡುವುದರಿಂದ ಕೈಗಾರಿಕೆಗಳ ಮೇಷಿನ್ ಮತ್ತು ಮನೆಗಳಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುತ್ತಿದೆ ಎಂದ ಅವರು ಸಂಪಾಜೆಗೆ ಮಂಜೂರುಗೊಂಡ ವಿದ್ಯುತ್ ಸಬ್ ಸ್ಟೇಷನ್ ಜಾಗದ ಆರ್.ಟಿ.ಸಿ ಮಾಡಿಲ್ಲ. ಇದು ಸರಕಾರದ ವೈಫಲ್ಯ. ಸರಿಯಾದ ಪ್ರಮಾಣದಲ್ಲಿ ಇಲಾಖೆ ವಿದ್ಯುತ್ ನೀಡುತ್ತಿಲ್ಲ. ಆದರೂ ವಿದ್ಯುತ್ ಬಿಲ್ ನಲ್ಲಿ ವಸೂಲಿ ಮಾಡುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಸುಳ್ಯದ ಕೈಗಾರಿಕೆಗಳು ಕೆಲಸ ನಿಲ್ಲಿಸಿದೆ. ಎ.ಟಿ.ಎಂ, ಬ್ಯಾಂಕ್, ಸರಕಾರಿ ಇಲಾಖೆಗಳಲ್ಲಿ ಕೆಲಸ ಸ್ಥಗಿತಗೊಂಡಿದೆ ಎಂದು ಹೇಳಿದರು.

ಬಳಿಕ ಮೆಸ್ಕಾಂ ತಾಂತ್ರಿಕ ಅಧಿಕಾರಿ ಸುಪ್ರಿತ್‌ರವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. “ನಾವು ಲೋಡ್ ಶೆಡ್ ಮಾಡುತ್ತಿಲ್ಲ. ಆದರೆ ಮಳೆಗಾಲ ವಾದ್ದರಿಂದ ಲೈನ್‌ಗೆ ಗೆಲ್ಲುಗಳು ಬಿದ್ದಾಗ ಟ್ರಿಪ್ ಆಗುತ್ತದೆ. ಸಂಪಾಜೆಯ ೩೩ ಕೆ.ವಿ. ಸಬ್‌ಸ್ಟೇಶನ್ ಕೆಲಸ ಪ್ರಗತಿಯ ಹಂತದಲ್ಲಿದೆ. ಮತ್ತು ಸಿಬ್ಬಂದಿಗಳು ಫೋನ್ ಮಾಡಿದರೆ ಉತ್ತರ ಕೊಡುವುದಿಲ್ಲ ಎಂಬುದರ ಬಗ್ಗೆ ನಾವು ಸಿಬ್ಬಂದಿಗಳನ್ನು ವಿಚಾರಿಸುತ್ತೇವೆ. ಆ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಮತ್ತು ೧೧೦ ಕೆ.ವಿ. ಸಬ್ ಸ್ಟೇಶನ್ ಕೆ.ಪಿ.ಟಿಸಿಎಲ್. ಮೂಲಕ ಪ್ರಕ್ರಿಯೆ ಹಂತದಲ್ಲಿದೆ ಎಂದು ಮಾತು ಮುಂದುವರೆಸುತ್ತಿದ್ದಾಗ, ಸ್ಥಳಕ್ಕೆ ಬಂದ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು, “೧೧೦ ಕೆ.ವಿ.ವಿಚಾರದಲ್ಲಿ ನೀವು ಸುಳ್ಳು ಹೇಳಬೇಡಿ. ಈ ಬಗ್ಗೆ ನಾವು ಹಲವು ವರ್ಷದಿಂದ ಕೇಳುತ್ತಿzವೆ. ನಿಮ್ಮದು ಇದೇ ರೀತಿಯ ಉತ್ತರ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಇಂಧನ ಮಂತ್ರಿ ಡಿ.ಕೆ.ಶಿ. ಯವರು ಇದ್ದರು. ಆಗ ಬಿಜೆಪಿಯವರು ಕರೆಂಟ್ ಕೊಡಿ ಎಂದು ಡಿಕೆಶಿಯವರಿಗೆ ಫೋನ್ ಮಾಡಿದ್ರಲ್ಲ. ಈಗ ನಾವು ಯಾರಿಗೆ ಯಡಿಯೂರಪ್ಪರಿಗೆ ಫೋನ್ ಮಾಡಬೇಕಾ? ಇಲ್ಲಿ ಶಾಸಕರು ಈಗ ಸರಕಾರದ ಮಂತ್ರಿಯಾಗಿದ್ದಾರಲ್ವ? ತಾಕತ್ತು ಇದ್ದರೆ ಅವರು ೧೧೦ ಕೆ.ವಿ. ಸಬ್‌ಸ್ಟೇಶನ್ ಮಾಡಲಿ ಎಂದು ಸವಾಲೆಸೆದರು.
ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್‌ರವರು, ಸಂಪಾಜೆಯ ೩೩ ಕೆ.ವಿ. ಸಬ್‌ಸ್ಟೇಶನ್ ವಿಚಾರವನ್ನು ಪ್ರಸ್ತಾಪಿಸಿದರು. ಅಧಿಕಾರಿಗಳಿಗಳು ಉತ್ತರ ನೀಡುತ್ತಿದ್ದಾಗ ಅಲ್ಲಿದ್ದವರು ವಿದ್ಯುತ್ ಸಮಸ್ಯೆಯನ್ನು ಹೇಳುತ್ತಿದ್ದರು.
ಬ್ಲಾಕ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ರಾಜ್ಯ ಸಂಯೋಜಕ ಎಸ್.ಕೆ.ತಾಜ್ ಮಹಮ್ಮದ್ ಸಂಪಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎ. ರಿಯಾರh ಕಲ್ಲುಗುಂಡಿ, ಪ್ರಮುಖರಾದ ರಹೀಂ ಬೀಜದಕಟ್ಟೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಅಬೂಸಾಲಿ ಗೂನಡ್ಕ, ಅನಿಲ್ ಬಳ್ಳಡ್ಕ, ಫವಾಜ್ ಕನಕಮಜಲು,ಎಸ್.ಕೆ.ಹನೀಫ್, ಕೆ.ಪಿ.ಜಾನಿ, ಜಯಪ್ರಕಾಶ್ ನೆಕ್ರೆಪ್ಪಾಡಿ, ಅಶ್ರಫ್ ಟರ್ಲಿ, ರಹೀಮ್ ಬೀಜದಕಟ್ಟೆ, ಆರಿಫ್ ಗೂನಡ್ಕ, ಹ್ಯಾರಿಸ್ ಗೂನಡ್ಕ, ಪ್ರಸಾದ್ ಕಲ್ಲುಗುಂಡಿ, ಅಯ್ಯುಬ್ ಗೂನಡ್ಕ, ಅಜರ್ ಗೂನಡ್ಕ, ಅಬ್ದುಲ್ ರಹಿಮಾನ್, ಸಚಿನ್ ರಾಜ ಶೆಟ್ಟಿ ಪೆರುವಾಜೆ, ಸಿದ್ದೀಕ್ ಕೊಕ್ಕೊ ಮೊದಲಾದವರಿದ್ದರು.
ಪ್ರತಿಭಟನೆ ಮುಗಿದ ಬಳಿಕ ಅಲ್ಲಿಗೆ ಬಂದವರಿಗೆಲ್ಲ ಮೆಸ್ಕಾಂ ವತಿಯಿಂದ ಟೀ ಹಾಗೂ ಬಿಸ್ಕೆಟ್ ವ್ಯವಸ್ಥೆ ಇತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.