Breaking News

ಸುಳ್ಯ ನಗರ ಪಂಚಾಯತ್‌ಗೆ ಹೊಸ ಜೇಸಿಬಿ ವಾಹನ

Advt_Headding_Middle

ನಗರದ ಸ್ವಚ್ಛತೆಗೆ ಪೂರಕ ವ್ಯವಸ್ಥೆ: ವಿನಯ್‌ಕುಮಾರ್ ಕಂದಡ್ಕ

ಸುಳ್ಯ ನಗರ ಪಂಚಾಯತ್‌ಗೆ ಹೊಸ ಜೇಸಿಬಿ ಯಂತ್ರ ಬಂದಿದೆ. ಕೇಂದ್ರ ಸರಕಾರದ ಅನುದಾನವನ್ನು ಬಳಸಿಕೊಂಡು 28 ಲಕ್ಷ ವೆಚ್ಚದಲ್ಲಿ ಖರೀದಿಸಲಾದ ಜೇಸಿಬಿಯ ಕೀ ಹಸ್ತಾಂತರ ಕಾರ್ಯಕ್ರಮ ಇಂದು ನಗರ ಪಂಚಾಯತ್ ಆವರಣದಲ್ಲಿ ನಡೆಯಿತು.

ಟಾಟಾ ಸಂಸ್ಥೆಯ ಎಜಿಎಂ ವಿಜಯ್‌ಕುಮಾರ್ ಜೇಸಿಬಿಯ ಕೀಯನ್ನು ನ.ಪಂ. ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅಧ್ಯಕ್ಷರು ಕೇಂದ್ರ ಸರಕಾರದ ಅನುದಾನವನ್ನು ಬಳಸಿಕೊಂಡು ಹೊಸ ಜೇಸಿಬಿ ವಾಹನವನ್ನು ಖರೀದಿಸಲಾಗಿದೆ. ನಗರದ ಸ್ವಚ್ಛತೆಗೆ ಇದು ಪೂರಕವಾಗಲಿದೆ. ಇದಲ್ಲದೆ ಇನ್ನು ಬೊಲೇರೋ, ಪಿಕ್‌ಆಪ್, ಟಾಟಾ 407 ವಾಹನವು ಸದ್ಯದಲ್ಲೇ ಬರಲಿದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಕ, ಸದಸ್ಯೆ ಶಿಲ್ಪಾ ಸುಧೇವ್, ಮುಖ್ಯಾಧಿಕಾರಿ ಎಂ.ಆರ್ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.