Breaking News

ಕೊಯಾನಾಡು ಶಾಲಾ ಬಳಿ ಕಿಂಡಿಅಣೆಕಟ್ಟು ನಿರ್ಮಾಣ

Advt_Headding_Middle

ಕೊಯಾನಾಡು ಶಾಲಾ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ.

ನೀರು ನಿಂತು ಮನೆಗೆ ಹಾನಿಯಾಗುವ ಸಂಭವ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿತ್ತು.

ಈ ಬಗ್ಗೆ ಸ್ಥಳಕ್ಕೆ ಭೇಟಿನೀಡಿದ ಸುದ್ದಿ ಪ್ರತಿನಿಧಿ ಸ್ಥಳದಲ್ಲಿ ಎರಡುದಿನದಿಂದ ನಿರಂತರ ಮಳೆ ಬಂದ ಕಾರಣ 2018ರಲ್ಲಿ ಭೂ ಕುಸಿತದಿಂದ ಇದ್ದ ಮರವನ್ನು ರಾಜ್ಯ ಹೆದ್ದಾರಿ ನಿರ್ಮಾಣದ ಸಮಯದಲ್ಲಿ ತುಂಡರಿಸಿದ ಮರಗಳು ಹೊಳೆಗೆ ಬಿದ್ದು ಕೊಯಿನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಬಂದು ನಿಂತು ನೀರು ಒಮ್ಮೆಲೇ ಏರಲು ಪ್ರಾರಂಭಿಸಿ ಆತಂಕದ ವಾತಾವರಣ ನಿರ್ಮಾಣಗೊಂಡಿತು. ಅಲ್ಲೇ ಹೊಳೆಬದಿ ಇರುವ 5-6 ಮನೆಗಳು ನೀರಿನಿಂದ ಸಮಸ್ಯೆ ಬರಬಹುದೆಂದು ಸಂಪಾಜೆ ರೆವೆನ್ಯು ಇಲಾಖೆಯವರು ಪಂ ಆಡಳಿತ ಮಂಡಳಿ ನೆರೆಬಂದರೆ ನೀವು ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಉಳಿದುಕೊಳ್ಳಬೇಕೆಂದು ಸೂಚನೆಯನ್ನು ನೀಡಿದ್ದರು. ಈ ಸಮಸ್ಯೆಗೆ ಸ್ಪಂದಿಸಿದ ಗ್ರಾಂ. ಪಂ. ಕ್ರೈಯಿನ್ ಮೂಲಕ ಮರದ ದಿಮ್ಮಿಗಳನ್ನು ತೆರವುಗೊಳಿಸಿ ಸಮಸ್ಯೆಯನ್ನು ತಿಳಿಗೊಳಿಸಿದರು. ಈ ಬಗ್ಗೆ ಮಾಜಿ ಅಧ್ಯಕ್ಷ ಕುಮಾರ್ ಚಿದ್ಗಾರ್ ಅವರನ್ನು ಮಾತಾಡಿಸಿದಾಗ, ಈ ಮನೆಗಳು ಹೊಳೆಯ ಪರಂಬೋಕಲ್ಲಿದ್ದು ಜಿಲ್ಲಾಧಿಕಾರಿಗಳು ಈ ಹಿಂದೆಯೇ ಮನೆಗಳನ್ನು ತೆರವುಗೊಳಿಸಬೇಕೆಂದು ಸೂಚನೆ ನೀಡಿದರು. ಅಲ್ಲದೆ, ಮರಗಳು ಬಂದು ಕಿಂಡಿ ಅಣೆಕಟ್ಟಲ್ಲಿ ನೀರು ನಿಂತು ಸಮಸ್ಯೆ ಬಂದದ್ದು ಹೌದು, ಕೂಡಲೇ ಮರದ ದಿಮ್ಮಿಗಳನ್ನು ತೆರವುಗೊಳಿಸಿ ಸಮಸ್ಯೆಯನ್ನು ಪರಿಹಾರ ಮಾಡಲಾಗಿದೆ. ಅಲ್ಲದೆ ಹೊಳೆಗೆ ತಡೆಗೋಡೆಯನ್ನು ನಿರ್ಮಿಸಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಗ್ರಾಂ. ಪಂ. ಉಪಾಧ್ಯಕ್ಷರು ಜಗದೀಶ್ ಪರಮಾಲೆ ಮಾತನಾಡಿ ಹಲವು ವರ್ಷಗಳಿಂದ ಹೊಳೆಯ ಆ ಕಡೆ ಇರುವವರಿಗೆ ಸೇತುವೆಯ ಅಗತ್ಯತೆ ಇತ್ತು, ಕೆಲವು ಜನರು ಇದಕ್ಕೆ ಹಿಂದಿನಿಂದಲೇ ಆಕ್ಷೇಪ ವ್ಯಕ್ತ ಪಡಿಸಿದರು. ಈಗ ಸೇತುವೆ ಕಾಮಗಾರಿ ಪ್ರಾರಂಭಗೊಂಡಿದ್ದು ಮಳೆಯ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಇಲ್ಲಿನ ಮನೆಯವರಿಗೆ ಸಮಸ್ಯೆ ಆಗಬಾರದೆಂದು ತಡೆಗೋಡೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಹೊಳೆ ಬದಿಯ ಮನೆಯಲ್ಲಿರುವ ಪೈಕಿ ಲೋಕೇಶ್ ಅವರು ಮಾತನಾಡಿ, ನಮಗೆ ಅಪಾಯ ಇದೆ ನಮ್ಮ ಮನೆ ಸಮೀಪದ ಹೊಳೆ ಬದಿಗೆ ತಡೆಗೋಡೆ ನಿರ್ಮಿಸಿ ಆಮೇಲೆ ಸೇತುವೆಯನ್ನು ಮಾಡಲಿ, ಎಂದು ತಿಳಿಸಿದರು. ಇನ್ನೊರ್ವ ನಿವಾಸಿ ಈಶ್ವರ ಅವರು ಮಾತಾಡಿ ನಮಗೆ ರಕ್ಷಣೆಗಾಗಿ ತಡೆಗೋಡೆಯ ಅಗತ್ಯತೆ ಇದೆ. ಅದರ ಕಾಮಗಾರಿ ಪ್ರಾರಂಭಗೊಂಡಿದೆ, ಅದು ಪೂರ್ಣಗೊಂಡು ಸೇತುವೆ ಕಾಮಗಾರಿ ಆಗಬೇಕೆಂದು ನಮ್ಮ ನಿಲುವು ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.