ಜಾಲ್ಸೂರು: ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಎಸ್.ಡಿ.ಪಿ.ಐ. ವತಿಯಿಂದ ಗ್ರಾ.ಪಂ. ಗೆ ಮನವಿ ಸಲ್ಲಿಕೆ

Advt_Headding_Middle

 

 

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ಆಗಬೇಕಾಗಿದ್ದು ಈ ಹಿಂದೆ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಹೊರತು ಯಾವುದೂ ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ಗ್ರಾಮ ವ್ಯಾಪ್ತಿಯ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕೆಂದು ಒತ್ತಾಯಿಸಿ, ಎಸ್.ಡಿ.ಪಿ.ಐ. ಜಾಲ್ಸೂರು ವಲಯದ ವತಿಯಿಂದ ಗ್ರಾಮ ಪಂಚಾಯತಿಗೆ ಜು.16ರಂದು ಮನವಿ ಸಲ್ಲಿಸಲಾಯಿತು.
ಈ ಬಾರಿ ಈ ಕೆಲಸಗಳನ್ನು ಶೀಘ್ರದಲ್ಲೇ ಮಾಡಬೇಕೆಂಬ ಹಾಗೂ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನೀಡಿ ಮನವಿ ಮಾಡಲಾಯಿತು.
ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಸಂಕ ಎಂಬಲ್ಲಿ ಸುಮಾರು ಒಂಭತ್ತು ಮನೆಗಳಿಗೆ ರಸ್ತೆ, ಸೇತುವೆ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಕೋನಡ್ಕ ಪದವಿನ ಮೂರನೇ ವಾರ್ಡಿನಲ್ಲಿ ತಡೆಗೋಡೆ ನಿರ್ಮಿಸಲು ಗುಂಡಿ ಅಗೆದು ಐದು ತಿಂಗಳಾದರೂ ಯಾವುದೇ ತಡೆ ಗೋಡೆ ಕೆಲಸ ಶುರುವಾಗಿಲ್ಲ. ಇದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಡೆಗೊಡೆ ನಿರ್ಮಿಸಬೇಕು. ಜಾಲ್ಸೂರು ಕಾಸರಗೋಡು ರಸ್ತೆ ಮರಸಂಕ ಎಂಬ ಪ್ರದೇಶದಲ್ಲಿ ತಡೆ ಗೋಡೆ ಇಲ್ಲದೆ ತೋಟಕ್ಕೆ ವಾಹನಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕದಿಕಡ್ಕದಲ್ಲಿ ಚರಂಡಿಯಲ್ಲಿ ಮಣ್ಣು ನಿಂತು ನೀರು ಹೋಗದೆ ರಸ್ತೆಯಲ್ಲೇ ನೀರು ಹರಿದು ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಬೀದಿ ದೀಪ ಇಲ್ಲದ ಸಮಸ್ಯೆಯಾಗುತ್ತಿದೆ.ಹಾಗಾಗಿ ಶೀಘ್ರದಲ್ಲೇ ಇದಕ್ಕೆ ಬೀದಿ ದೀಪ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಅಡ್ಕಾರಿನ ಜನತಾ ಕಾಲನಿಯಿಂದ ಹರಿದು ಬರುವ ಕೊಳಚೆ ನೀರು ಚರಂಡಿಯಲ್ಲಿ ಹಾದುಹೊಗದೆ ನೇರವಾಗಿ ರಸ್ತೆಗೆ ಹರಿಯುವುದರಿಂದ ದುರ್ವಾಸನೆ ಬೀರುತ್ತಿರುವ ಕಾರಣ ಆ ಭಾಗದ ಜನರಿಗೆ ನಡೆದಾಡಲು ಕಷ್ಟವಾಗುತ್ತಿದೆ. ಇಂತಹ ಹಲವು ಸಮಸ್ಯೆಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದು ಗ್ರಾಮ ಪಂಚಾಯತಿ ವತಿಯಿಂದ ಅತೀ ಶೀಘ್ರವಾಗಿ ಈ ಎಲ್ಲಾ ಸಮಸ್ಯೆಗಳು ಪರಿಹಾರಕಾಣಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಅಡ್ಕಾರು ಬೂತ್ ಅಧ್ಯಕ್ಷ ಮಿಸ್ಬಾಹ್ ಅಡ್ಕಾರ್, ಕಾರ್ಯದರ್ಶಿ ಹಾರಿಸ್ ಕದಿಕಡ್ಕ, SDTU ಸುಳ್ಯ ಕಾರ್ಯದರ್ಶಿ ಅಬ್ದುರಹ್ಮಾನ್ ಅಡ್ಕಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.