ಬೆಳ್ಳಾರೆ : ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ

Advt_Headding_Middle

 

ಬೆಳ್ಳಾರೆ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಜು ೧೨ ರಂದು ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಸಭಾಂಗಣದಲ್ಲಿ ಅಮೃತ ಕುಮಾರ್ ಕಿಲಂಗೋಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ಕಿಲಂಗೋಡಿ ಸಭೆಯಲ್ಲಿ ಮಂಡಿಸಿದರು. ಸಭೆಯ ವರದಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರವನ್ನು ಸಂಘದ ಕೋಶಾಧಿಕಾರಿ ವಸಂತ ಉಲ್ಲಾಸ್ ಸಭೆಯಲ್ಲಿ ಮಂಡಿಸಿದರು.
ನಂತರ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಸಲಾಯಿತು. ನಂತರ ಮುಂದಿನ ವರ್ಷದ ಕಾರ್ಯಕ್ರಮವನ್ನು ಯೋಜಿಸಿ ಅನುಮೋದನೆ ನೀಡಲಾಯಿತು.. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ ಹಾಗೂ ನಿಕಟಪೂರ್ವಾಧ್ಯಕ್ಷರಾದ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು. ನಂತರ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆನಂದ ರೈ ಪುಡ್ಕಜೆ, ನಿಕಟ ಪೂರ್ವಾಧ್ಯಕ್ಷರಾಗಿ ಅಮೃತ್ ಕುಮಾರ್ ಕಿಲಂಗೋಡಿ ಅಧ್ಯಕ್ಷರಾಗಿ ಆನಂದ ಗೌಡ ಪಡ್ಪು ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕಿಲಂಗೋಡಿ, ಕೋಶಾಧಿಕಾರಿಯಾಗಿ ಮಹಾಲಿಂಗ ಪಾಟಾಳಿ ಕುರುಂಬುಡೇಲು, ಉಪಾಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ಜತೆ ಕಾರ್ಯದರ್ಶಿಯಾಗಿ ಶಶಿಧರ ಮಣಿಯಾಣಿ ಬೀಡು ಇವರನ್ನು ಆಯ್ಕೆ ಮಾಡಲಾಯಿತು.
ಚಂದ್ರಹಾಸ ಮಣಿಯಾಣಿ ಪಡ್ಪು, ಸುಪ್ರೀತ್ ಬಸ್ತಿಗುಡ್ಡೆ, ಮನೋಹರ ದಾಸನಮಜಲು , ಪದ್ಮನಾಭ ಚೂಂತಾರು, ಮಾಧವ ಪುಡ್ಕಜೆ ಶ್ರೀನಿವಾಸ ಕುರುಂಬುಡೇಲು ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ನಿಕಟ ಪೂರ್ವಾಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯನಿರ್ವಹಿಸಿದರು.
ಜತೆ ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು ಸ್ವಾಗತಿಸಿ, ಕೋಶಾಧಿಕಾರಿ ವಸಂತ ಉಲ್ಲಾಸ್ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.