ತನ್ನ ಮನೆ ಕಂಪೌಂಡ್ ನಲ್ಲಿ ಸಾಮಾಜಿಕ ಸಂದೇಶ ಬರೆಸಿ ವೈವಾಹಿಕ ಬೆಳ್ಳಿ ಹಬ್ಬ ಆಚರಿಸಿಕೊಂಡ ಅಳ್ಪೆ ಜಿನ್ನಪ್ಪ ಗೌಡ ದಂಪತಿ

Advt_Headding_Middle

 

ಪಂಜದ ಸಾಮಾಜಿಕ ಕಾರ್ಯಕರ್ತರಾದ ಗಾಂಧಿ ಚಿಂತಕ ಅಳ್ಪೆ ಜಿನ್ನಪ್ಪ ಗೌಡರು ತನ್ನ ಮನೆಯ ಸುತ್ತಲಿನ ಆವರಣ ಗೋಡೆಯಲ್ಲಿ ವಿವಿಧ ಬಗೆಯ ಸಾಮಾಜಿಕ ಸಂದೇಶಗಳನ್ನು ಬರೆಸುವುದರ ಮೂಲಕ ತನ್ನ ಇಪ್ಪತ್ತೈದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಪಂಜದ ಚಿಂಗಾಣಿಗುಡ್ಡೆ ಸಮೀಪದ ನಿವಾಸಿ ಗ್ರಾಮ ಸ್ವರಾಜ್ ತಂಡದ ಕಾರ್ಯಕರ್ತ ಅಳ್ಪೆ ಜಿನ್ನಪ್ಪ ಗೌಡ ಮತ್ತು ಲೀಲಾವತಿ ದಂಪತಿಗೆ ಮದುವೆಯಾಗಿ ಜೂ.೨೪ಕ್ಕೆ ೨೫ ವರ್ಷ ಆರಂಭಗೊಂಡಿತು. ಈ ಸಂದರ್ಭವನ್ನು ಅವರು ತನ್ನ ಮನೆಯ ಸುತ್ತವಿರುವ ಆವರಣಗೋಡೆಯಲ್ಲಿ ಸಾಮಾಜಿಕ ಸಂದೇಶಗಳನ್ನು ಸಾರುವ ಚಿತ್ರಗಳನ್ನು ಬರೆಸುವುದರ ಮೂಲಕ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದರು. ಅದಕ್ಕಾಗಿ ಖ್ಯಾತ ಚಿತ್ರಕಾರರೂ ಆದ ಸಿನಿಮಾ ಡಿಸೈನರ್ ಸುರೇಶ್ ಬಳ್ಳಕ ರವರನ್ನು ಆಹ್ವಾನಿಸಿದರು. ಅವರ ಮೂಲಕ ಆವರಣ ಗೋಡೆಯಲ್ಲಿ ಕೊರೋನಾ ಲಸಿಕೆ ಪಡೆಯುವ ಬಗ್ಗೆ, ಮಾಸ್ಕ್ ಧರಿಸುವ ಬಗ್ಗೆ, ಮಳೆನೀರು ಕೊಯ್ಲಿನ ಬಗ್ಗೆ, ಪರಿಸರ ಸಂರಕ್ಷಣೆಯ ಬಗ್ಗೆ, ಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ, ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ, ಶಿಕ್ಷಣದ ಅವಶ್ಯಕತೆಯ ಬಗ್ಗೆ ಸಂದೇಶ ಸಾರುವ ಚಿತ್ರಗಳನ್ನು ಬರೆಸುವ ಕಾರ್ಯ ಮಾಡಿದರು.

ಜು. 5 ರಂದು ರಸ್ತೆ ಉದ್ಘಾಟನೆಗಾಗಿ ಚಿಂಗಾಣಿಗುಡ್ಡೆ ಗೆ ಬಂದ ಮಂತ್ರಿ ಎಸ್. ಅಂಗಾರ ರಿಂದ ಈ ಸಾಮಾಜಿಕ ಸಂದೇಶದ ಪೈಂಟಿಂಗ್ ಅನ್ನು ಉದ್ಘಾಟಿಸಬೇಕೆಂಬುದು ಜಿನ್ನಪ್ಪ ಗೌಡರ ಬಯಕೆಯಾಗಿತ್ತು. ಆದರೆ ಅವರು ಬಾರದಿದ್ದುದರಿಂದ ಪತ್ನಿ ಸಮೇತರಾಗಿ ತಾವೇ ದೀಪ ಬೆಳಗಿಸಿ ಅವುಗಳನ್ನು ಉದ್ಘಾಟಿಸಿದರು.

” ವೈವಾಹಿಕ ಬೆಳ್ಳಿ ಹಬ್ಬಕ್ಕಾಗಿ ಬೇರೆ ಅನಗತ್ಯ ಖರ್ಚುಗಳನ್ನು ಮಾಡದೆ ಸಾಮಾಜಿಕ ಸಂದೇಶ ಬೀರುವಂತೆ ವಿಶಿಷ್ಟವಾಗಿ ಆಚರಿಸ ಬೇಕೆಂದು ನಿರ್ಧರಿಸಿ ಇದನ್ನು ಮಾಡಿದ್ದೇನೆ. ಇದು ಇತರರಿಗೆ ಸ್ಫೂರ್ತಿ ಆಗಬೇಕೆಂಬುದು ನನ್ನ ಉದ್ದೇಶ. ನಾನು ವಿವಾಹದ ಬಳಿಕ ನಾಲ್ಕು ಡಬ್ಬಿಗಳಲ್ಲಿ ತಲಾ 10 ಹತ್ತು ರೂ.ಗಳಂತೆ ದಿನಕ್ಕೆ 40 ರೂ. ಉಳಿತಾಯ ಮಾಡುತ್ತಿದ್ದೇನೆ. ಎಲ್ಲ ಸಾಮಾಜಿಕ, ಧಾರ್ಮಿಕ ಸೇವೆಗೆ ಅದರಿಂದಲೇ ಹಣ ತೆಗೆಯುತ್ತೇನೆ. ಸಾಲ ಮಾಡುವುದಿಲ್ಲ ” ಎಂದು ಚಿನ್ನಪ್ಪ ಗೌಡರು ಹೇಳುತ್ತಾರೆ.

https://youtube.com/shorts/OmbhWpj5hcI?feature=share

 

ಚಿನ್ನಪ್ಪ ಗೌಡರು ಕಳೆದ ಗ್ರಾಪಂ ಚುನಾವಣೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ ವಿಚಾರಧಾರೆಯೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಅಲ್ಲದೆ ಚಿಂಗಾಣಿಗುಡ್ಡೆ ಟ್ಯಾಂಕಿಗೆ ಕುಡಿವ ನೀರು ಬರುವಂತೆ ಮಾಡಲು ಹೋರಾಡುತ್ತಿದ್ದಾರೆ. ಅವರ ಪುತ್ರ ಜಗದೀಶ್ ಇಂಜಿನಿಯರಿಂಗ್ ಕಲಿತು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.