Breaking News

ಕೊಡಿಯಾಲಬೈಲು ರುದ್ರಭೂಮಿಗೆ ಸಂಬಂಧಿಸಿದ ದಾಖಲೆ ಪಂಚಾಯತ್‌ನಲ್ಲಿಲ್ಲ

Advt_Headding_Middle

 

ಹರೀಶ್ ರೈ ಉಬರಡ್ಕರ ಪತ್ರಿಕೆ ಗೋಷ್ಠಿಗೆ ಪಂಚಾಯತ್ ಆಡಳಿತ ಉತ್ತರ

`’ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನ ವಿಮುಕ್ತಿಧಾಮ ರುದ್ರಭೂಮಿ ಕಾಮಗಾರಿಗೆ ಸಂಬಂಧಿಸಿ ಹರೀಶ್ ರೈ ಉಬರಡ್ಕರು ಪತ್ರಿಕಾಗೋಷ್ಠಿ ನಡೆಸಿ ಹೇಳಿದಂತೆ ದಾಖಲೆಗಳು ಯಾವುದೂ ಪಂಚಾಯತ್‌ನಲ್ಲಿಲ್ಲ. ಮತ್ತು ಸ್ಮಶಾನವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ” ಎಂದು ಪಂಚಾಯತ್ ಆಡಳಿತ ಮಂಡಳಿ ಹೇಳಿದೆ.


ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿಯವರು, “ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಂದಿನಿಂದ ನಡೆದ ಎಲ್ಲ ಸಾಮಾನ್ಯ ಸಭೆಗಳಲ್ಲಿ ಕೊಡಿಯಾಲಬೈಲು ಸ್ಮಶಾನದ ಲೆಕ್ಕಾಚಾರಗಳನ್ನು ಹರೀಶ್ ರೈಯವರಲ್ಲಿ ಕೇಳುತ್ತಿzವೆ. ಅವರು ನೀಡಿಲ್ಲ. ದಾಖಲೆ ನೀಡುವಂತೆ ನಾನೇ ಅವರಿಗೆ ನೋಟೀಸು ಕೂಡಾ ನೀಡಿzನೆ. ಕಳೆದ ಆಡಳಿತ ಮಂಡಳಿಯವರು ಕೂಡಾ ಲೆಕ್ಕ ಕೇಳಿದರೂ ಅವರು ಕೊಟ್ಟಿಲ್ಲವೆಂದು ಆಗಿನ ಪಂಚಾಯತ್ ಅಧ್ಯಕ್ಷರು ಹೇಳಿದ್ದಾರೆ. ಲಯನ್ಸ್, ಎಂ.ಎಲ್.ಎ., ತಾ.ಪಂ. ಸದಸ್ಯರ ಅನುದಾನವೂ ಪಂಚಾಯತ್ ಮೂಲಕ ಕ್ರಿಯಾ ಯೋಜನೆ ಆದುದಲ್ಲ. ಪಂಚಾಯತ್‌ನಿಂದ ಉದ್ಯೋಗ ಖಾತ್ರಿ ಹಾಗೂ ೧೪ ಹಣಕಾಸು ಯೋಜನೆಯಲ್ಲಿ ಟ್ಟು ೧೮ ಲಕ್ಷ ವಿನಿಯೋಗಿಸಲಾಗಿರುವುದಕ್ಕೆ ಲೆಕ್ಕ ಇದೆ. ೫೬ ಲಕ್ಷದ ಖರ್ಚಿಗೆ ಲೆಕ್ಕ ಇಲ್ಲ. ಮತ್ತು ಸ್ಮಶಾನ ಅಭಿವೃದ್ಧಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವಾಗಲೂ ಯಾವುದೇ ಸಮಿತಿ ರಚಿಸಿಲ್ಲ. ದೇಣಿಗೆ ಸಂಗ್ರಹ ಮಾಡಿದ್ದು ಕೂಡಾ ಆಗಿನ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗಮನಕ್ಕೂ ಬಂದಿಲ್ಲ ಎಂದು ಹೇಳಿದರು.
ಎಪ್ರಿಲ್ ೧ ರಿಂದ ೨೮ರ ವರೆಗೆ ೩೦ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಹರಿಶ್ ರೈಯವರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಂಚಾಯತ್‌ಗೆ ನೀಡಿದ ಮಾಹಿತಿಯಲ್ಲಿ ೭ ಶವ ಸುಟ್ಟ ಲೆಕ್ಕ ಇದೆ ಎಂದು ಹೇಳಿದ ಅವರು ಸ್ಮಶಾನದ ವಿಷಯದಲ್ಲಿ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯವರು ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ ಮಾತನಾಡಿ, “ ಸ್ಮಶಾನ ಆಗಿರುವುದು ಹಿಂದಿನ ಆಡಳಿತದ ಅವಧಿಯಲ್ಲಿ. ಲೆಕ್ಕಾಚಾರದಲ್ಲಿ ಒಂದಿಷ್ಟು ಗೊಂದಲಗಳು ಇದೆ. ಅದಕ್ಕೆ ಸೂಕ್ತ ದಾಖಲೆ ಪಡೆದುಕೊಂಡು ಸಮಿತಿಯಲ್ಲಿ ಮತ್ತು ಪಂಚಾಯತ್ ನಲ್ಲಿ ಚರ್ಚಿಸಿ ಸರಿಪಡಿಸಲಾಗುವುದು ಮುಂದಿನ ದಿನಗಳಲ್ಲಿ ಕೊಡಿಯಾಲಬೈಲು ಸ್ಮಶಾನವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುವುದು. ಗ್ರಾಮದಲ್ಲಿರುವ ಇತರ ಸ್ಮಶಾನಗಳನ್ನು ಕೂಡ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿ ಕೊಳ್ಳಲಾಗುವುದು ಎಂದು ಅವರು ಹೇಳಿದರು
ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ “ಅವ್ಯವಹಾರ ಆಗಿದೆ ಎಂದು ನಾವು ಹೇಳುವುದಿಲ್ಲ. ಅವರೇ ಲೋಕಾಯುಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯ ಕುರಿತು ಹೇಳಿಕೆ ನೀಡಿದ್ದಾರೆ. ಪಂಚಾಯತ್ ವತಿಯಿಂದ ತನಿಖೆಗೆ ಕೊಡಬೇಕೋ ಬೇಡವೊ ಅನ್ನುವುದನ್ನು ಸಮಿತಿಯಲ್ಲಿ ಚರ್ಚಿಸಿ ಮುಂದುವರಿಯಲಾಗುವುದು. ೧೮ ಲಕ್ಷ ಹೊರತು ಪಡಿಸಿ ಬೇರೆ ಯಾವುದೇ ಅನುದಾನದ ಲೆಕ್ಕ ಪಂಚಾಯತ್‌ನಲ್ಲಿ ಇಲ್ಲ. ಉಬರಡ್ಕ ಸಹಕಾರಿ ಸಂಘದಿಂದ ನೀಡಿದ ೫೦ ಸಾವಿರ ಲೆಕ್ಕವೂ ಪಂಚಾಯತ್‌ನಲ್ಲಿ ಇಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸದಸ್ಯೆ ಭವಾನಿ ಮೂರ್ಜೆ ಪತ್ರಿಕಾಗೋಷ್ಠೀಯಲ್ಲಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.