Breaking News

ಅಜ್ಜಾವರ ಸರ್ಕಾರಿ ಪ್ರೌಢಶಾಲೆಗೆ ಭಾರತ್‍ ಸ್ಪಂದನ್ ತಂಡದಿಂದ ಸಹಾಯಹಸ್ತ

Advt_Headding_Middle

ಸಾಮಾಜಿಕ ಜಾಲತಾಣದ ಮುಖೇನ ಬೆಂಗಳೂರಿನಿಂದ ಸುಳ್ಯಕ್ಕೆ ಹರಿದು ಬಂದ ನೆರವು

ಭಾರತ್‍ ಸ್ಪಂದನ್ ಎಂಬ ಬೆಂಗಳೂರು ಮೂಲದ ತಂಡವು ಸುಳ್ಯ ತಾಲೂಕಿನ ಅಜ್ಜಾವರದ ದಕ್ಷಿಣ‌ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಪ್ರೌಢಶಾಲೆಗೆ ಅತ್ಯವಶ್ಯಕ ವಸ್ತುಗಳನ್ನು ಒದಗಿಸುವ ಮೂಲಕ ಶಾಲೆಯ ಶಿಕ್ಷಣ ಗುಣಮಟ್ಟದ ಅಭಿವೃದ್ದಿಗೆ ಬೆಂಬಲವಾಗಿ ನಿಂತಿದೆ.

ಇತ್ತೀಚೆಗೆ ಆ ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾಶಂಕರಿ ಅವರು ತಮ್ಮ ಶಾಲೆಗೆ ಒಂದು ಲೇಸರ್ ಪ್ರಿಂಟರ್ ಹಾಗೂ ಎರಡು ಇನ್ವರ್ಟರ್ ಬ್ಯಾಟರಿಗಳು ಅಗತ್ಯ ಇದೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು‌. ಅದನ್ನು ಮನಗಂಡ ಭಾರತ್‍ಸ್ಪಂದನ್ ತಂಡದ ಸದಸ್ಯರಲ್ಲೊಬ್ಬರಾದ ಶಿಶಿರ್ ಶಿರಸಿ ಯವರು ಶಿಕ್ಷಕಿ ವಿದ್ಯಾಶಂಕರಿ ಅವರನ್ನು ಸಂಪರ್ಕಿಸಿದರು ಹಾಗೂ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಮೆತ್ತಡ್ಕ ಅವರೊಂದಿಗೆ ಚರ್ಚಿಸಿ ಅಗತ್ಯ ಉಪಕರಣಗಳ ತಾಂತ್ರಿಕ ವಿವರಗಳನ್ನು ಪಡೆದು, ಅದನ್ನು ತಲುಪಿಸುವ ವ್ಯವಸ್ಥೆಯ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ಸದಸ್ಯರ‌ ತ್ವರಿತ ಸ್ಪಂದನೆ :
ನಂತರದಲ್ಲಿ ಭಾರತ್‍ ಸ್ಪಂದನ್ ತಂಡದ‌ ಸದಸ್ಯರು ತಮ್ಮಲ್ಲೇ ಚರ್ಚಿಸಿ ಪ್ರಿಂಟರ್ ಹಾಗೂ ಬ್ಯಾಟರಿಗಳನ್ನು ಒದಗಿಸುವ ನಿರ್ಧಾರ‌ ಮಾಡಿದರು. ಅದರಂತೆ ತಂಡದ ಸದಸ್ಯ ನಾಮದೇವ್ ಸೂರ್ಯವಂಶಿ ಅವರು ಲೇಸರ್‌‌ ಪ್ರಿಂಟರ್ ಒದಗಿಸುವ ವ್ಯವಸ್ಥೆ ಮಾಡಿದರು. ಇನ್ನೋರ್ವ ಸದಸ್ಯ ಪ್ರಸಾದ್ ಜೋಷಿ ಅವರು ತಮ್ಮ ಪೋಸ್ಟ್ ಡಿಪ್ಲೊಮಾ ಬ್ಯಾಚಿನ‌‌‌ ಸ್ನೇಹಿತರೊಡಗೂಡಿ ಒಂದು ಬ್ಯಾಟರಿಯ ಜವಾಬ್ದಾರಿ ಹೊತ್ತರೆ, ‌ಇನ್ನೊಂದು ಬ್ಯಾಟರಿಯನ್ನು ಮತ್ತೊಬ್ಬ ಸದಸ್ಯ ದುಬೈ ವಾಸಿ ನಾಗಾರ್ಜುನ ಅವರು ನೀಡಿದರು. ಹೀಗೆ ಮೂರು ಉಪಕರಣಗಳ ವ್ಯವಸ್ಥೆ ಮಾಡಿಕೊಂಡ ತಂಡ ಮೊದಲ ಹಂತದಲ್ಲಿ ಲೇಸರ್ ಪ್ರಿಂಟರನ್ನು ಶಾಲೆಗೆ‌ ಒದಗಿಸಿತು. ಅದಾದ ಎರಡು ದಿನಗಳಲ್ಲಿ ‌ಎರಡು ಬ್ಯಾಟರಿಗಳನ್ನು ಒದಗಿಸಿತು.

ಗ್ರಾಮೀಣ ಭಾಗದ ಶಾಲೆಗಳ ಪರಿಸ್ಥಿತಿಗಳು ಸಾಮಾನ್ಯವಾಗಿ ಹೊರ ಪ್ರಪಂಚದ ಅರಿವಿಗೆ ಬರುವುದೇ ಇಲ್ಲ. ಆದರೆ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಬದ್ಧರಾಗಿರುವ ಇಂತಹ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಅವಿರತ ಶ್ರಮ, ವಿನೂತನ ಪ್ರಯತ್ನಗಳಿಂದ ಅದು ದೂರದೂರಿನವರ ಗಮನಕ್ಕೆ ಬಂದು ಅಗತ್ಯ ಬೆಂಬಲ ತಲುಪಲು ಸಾಧ್ಯವಾಗುತ್ತಿದೆ.
ಸರ್ಕಾರಿ ಶಾಲೆಗಳು ದೇಶದ ಆಸ್ತಿ, ಸರ್ಕಾರಿ ಶಾಲೆಗಳು ಸದೃಢವಾದರೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಾದರೆ ದೇಶದ ಅಭಿವೃದ್ಧಿ ಒಂದು ಹೆಜ್ಜೆ ಮೇಲೆ ಹೋಗುತ್ತದೆ ಎಂಬ ಮನೋಭಾವ ಭಾರತ್‍ ಸ್ಪಂದನ್ ತಂಡದ್ದಾಗಿದೆ. ಸರ್ಕಾರಿ ಶಾಲೆಗೆ ತನ್ಮೂಲಕ‌ ದೇಶಕ್ಕೆ ಒಂದು ಚಿಕ್ಕ ಸೇವೆ ಸಲ್ಲಿಸಿದ ಸಾರ್ಥಕತೆ ಇದೆ ಎಂದು ತಂಡ ಅಭಿಪ್ರಾಯ ಪಟ್ಟಿದೆ.

ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಿನಾಥ ಮೆತ್ತಡ್ಕ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿವೃಂದವು ಭಾರತ್‍ಸ್ಪಂದನ್ ತಂಡಕ್ಕೆ ಕೃತಜ್ಞತೆ ಸೂಚಿಸಿದೆ.

*ಏನಿದು ಭಾರತ್‍ಸ್ಪಂದನ್?*

ಭಾರತ್‍ ಸ್ಪಂದನ್ ಎಂದರೆ‌ ಭಾರತಕ್ಕಾಗಿ ಸ್ಪಂದಿಸುವವರು ಎಂಬರ್ಥದಲ್ಲಿ ದೇಶಕ್ಕಾಗಿ ಸಮರ್ಪಿಸಿಕೊಂಡ, ಸಮಾಜದಲ್ಲಿ ಕಷ್ಟಗಳು ಎದುರಾದಾಗ ಸ್ಪಂದಿಸುವ ಸ್ವಯಂಸೇವಕರ ತಂಡಕ್ಕೆ ಇಟ್ಟುಕೊಂಡ ಹೆಸರು.
ಸಾಫ್ಟ್‌ವೇರ್ ಉದ್ಯೋಗಿ ಗಿರೀಶ್ ಆಳ್ವ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಈ ತಂಡದಲ್ಲಿ ಭಾರತದ ವಿವಿಧ ರಾಜ್ಯಗಳ ಹಾಗೂ ವಿದೇಶದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರಗಳ, ವಿವಿಧ ಸ್ಥರದ ಉದ್ಯೋಗಿಗಳು, ಉದ್ಯಮಿಗಳು, ವೃತ್ತಿಪರರು, ವಿದ್ಯಾರ್ಥಿಗಳ ಜೊತೆಗೆ ಪೂರ್ಣಾವಧಿ ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಇವರೆಲ್ಲ ಉದ್ದೇಶ ಒಂದೇ ಭಾರತಕ್ಕಾಗಿ ಸೇವೆ ಸಲ್ಲಿಸುವುದು. ಅದರಲ್ಲೂ ಪ್ರಮುಖವಾಗಿ ಪ್ರಕೃತಿ ವಿಕೋಪಗಳು ಎದುರಾದಾಗ ಅಥವಾ ಕೊರೋನಾದಂತಹ ಸಾಂಕ್ರಾಮಿಕ ರೋಗಗಳು ಅಥವಾ ದೇಶದಲ್ಲಿ ಯಾವುದೇ ವಿಪತ್ತು ಎದುರಾದಾಗ ಸದಸ್ಯರೆಲ್ಲರೂ ತಾವು ಇರುವಲ್ಲಿಂದಲೇ‌ ಒಂದ ವರ್ಚುವಲ್ ವಾರ್ ರೂಮ್ ರಚಿಸಿಕೊಂಡು ಸಹಾಯಹಸ್ತವನ್ನು ಚಾಚುತ್ತಾರೆ.
ಈ ಹಿಂದೆ ಕರ್ನಾಟಕ, ಕೇರಳ, ಮಹಾರಾಷ್ಟ್ರಗಳಲ್ಲಿ ಪ್ರವಾಹ ಪ್ರದೇಶದ‌ ಜನರಿಗೆ, ಹಲವೆಡೆ ಭೂಕುಸಿತ, ಭೂಕಂಪಗಳಾದ‌ ಪ್ರದೇಶದ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ತಲುಪುವಂತೆ ನೋಡಿಕೊಳ್ಳಲಾಗಿದೆ. ಅದಕ್ಕೂ ಹಿಂದೆ Voters Registration ಅಭಿಯಾನ ಮಾಡಲಾಗಿತ್ತು, ವೋಟಿಂಗ್ ಕಾರ್ಡ್ ಇಲ್ಲದ‌ ಲಕ್ಷಾಂತರ ಜನರಲ್ಲಿ ಜಾಗೃತಿ ಮೂಡಿಸಿ ಮತದಾನ ಮಾಡುವಂತೆ‌ ಪ್ರೇರೇಪಿಸಲಾಗಿದೆ. ಅಷ್ಟೇ ಏಕೆ ಕೊರೋನ ಮೊದಲ ಅಲೆಯ ಸಂದರ್ಭದಲ್ಲಿ #SOSCorona ಎಂಬ ವಾರ್ ರೂಮ್ ರಚಿಸಿಕೊಂಡು ಸಾಮಾಜಿಕ ಜಾಲತಾಣಗಳು ಹಾಗೂ ನಮ್ಮ‌ ಸಂಪರ್ಕಜಾಲಗಳ‌ ಮೂಲಕ ಭಾರತದ 22 ರಾಜ್ಯಗಳ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅಗತ್ಯ ಸಹಕಾರ‌ ಒದಗಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.