ಸುಬ್ರಹ್ಮಣ್ಯ : ರೋಟರಿ ಕ್ಲಬ್   ಪದಾಧಿಕಾರಿಗಳ ಪದಗ್ರಹಣ

Advt_Headding_Middle

ಇನ್ನೊಬ್ಬರ ನೋವು ನಮ್ಮ ನೋವಿನಂತೆ ಎಂದರಿತು ಕೆಲಸಗಳು ಸಾಗಲಿ : ಡಾ. ನಾಗಾರ್ಜುನ

ರೋಟರಿ  ಕ್ಲಬ್ ಸುಬ್ರಹ್ಮಣ್ಯ ಇದರ 2021-22 ರ  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 17 ರಂದು ಸುಬ್ರಹ್ಮಣ್ಯದ ಮಹಾಮಾಯಿ ಸಭಾಂಗಣದಲ್ಲಿ ನಡೆಯಿತು.

ಹೊಸ ಪದಾಧಿಕಾರಿಗಳ ಪದಗ್ರಹಣ ಅಧಿಕಾರಿಯಾಗಿ  ಪೂರ್ವ ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ ಎಸ್ ಪದಗ್ರಹಣ ನಡೆಸಿಕೊಟ್ಟರು . ಮುಖ್ಯ ಆತಿಥಿಗಳಾಗಿಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ವಲಯ V ರ ಅಸಿಸ್ಟೆಂಟ್ ಗವರ್ನರ್ ರೊ। ಜಿತೇಂದ್ರ ನಿಡ್ಯಮಲೆ, ವಲಯ ಕಾರ್ಯದರ್ಶಿ ಅಬ್ಬಾಸ್ ಮುರ, ವಲಯ ಸೇನಾನಿ ರೋ। ಭರತ್ ನೆಕ್ರಾಜೆ, ಪೂರ್ವಾಧ್ಯಕ್ಷ ಸೀತಾರಾಮ ಎಣ್ಣೆಮಜಲು, ಪೂರ್ವ ಕಾರ್ಯದರ್ಶಿ ದೀಪಕ್ ಎಚ್ ಬಿ, ಹಾಲಿ ಕಾರ್ಯದರ್ಶಿ ಶಿವರಾಮ ಏನೆಕಲ್ಲು ಅವರು ವೇದಿಕೆಯಲ್ಲಿದ್ದರು. ಈ ಸಂದರ್ಭ ಕೆ ಎಸ್ ಎಸ್ ಕಾಲೇಜಿನ ನಿವೃತ್ತ  ಪ್ರಾಂಶುಪಾಲ, ಕ್ಲಬ್ ನ ಪೂರ್ವಾಧ್ಯಕ್ಷರಾದ  ಬಾಲಕೃಷ್ಣ ಪೈ ಹಾಗೂ  ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇದರ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಆರೋಗ್ಯ ಇಲಾಖೆಯ 108 ರ ಸಿಬ್ಬಂದಿಗಳಾದ ಭರತ್ ಪರಮಲೆ, ಗಿರಿಧರ ಅಂಬೆಕಲ್ಲು, ಜಯಶ್ರೀ ಕೊಪ್ಪಲಗದ್ದೆ ಅವರುಗಳನ್ನು ಗೌರವಿಸಲಾಯಿತು. ನಾಗರಾಜ ಪರಮಲೆ, ಜಯಪ್ರಕಾಶ್ ಚೆಮ್ನೂರು, ಲೊಕೇಶ್ ಎಣ್ಣೆಮಜಲು ಅವರಗಳನ್ನು ಹೊಸದಾಗಿ ರೋಟರಿ ಕ್ಲಬ್ ಸೇರಿಸಿಕೊಳ್ಳಲಾಯಿತು.  ಗಿರಿಧರ ಸ್ಕಂದ ಸ್ವಾಗತಿಸಿದರು. ದೀಪಕ್ ವರದಿ ವಾಚಿಸಿದರು. ಶಿವರಾಮ ಏನೆಕಲ್ಲು ವಂದಿಸಿದರು. ರಾಮಕೃಷ್ಣ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು.

ಪೋಟೋ: ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ

ಸುಳ್ಳಿ ಸ್ಥಳೀಯವಾಗಿ ಸಮಾಜಕ್ಕೆ ರೋಟರಿಯಿಂದ ಉತ್ತಮ ಕೆಲಸಗಳಾಗಲಿ. ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಕಾನ್ಪರೆನ್ಸ್ ಸಭಾಂಗಣ ಆಗಲಿದ್ದು ರೋಟರಿಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಕಾನ್ಪರೆನ್ಸ್ ಗಳು ಸುಬ್ರಹ್ಮಣ್ಯದಲ್ಲಿ ಆಗುವಂತಾಗಲಿ ಎಂದು ಮೋಹನ್ ರಾಂ ಸುಳ್ಳಿಯವರು ಹೇಳಿದರು.

ಇನ್ನೊಬ್ಬರ ನೋವು ನಮ್ಮ ನೋವಿನಂತೆ ಎಂದರಿತು ಕೆಲಸಗಳು ಸಾಗಲಿ. ಸದಾ ಹೃದಯವಂತಿಕೆಯಿಂದ ಕೆಲಸಗಳಾಗಳು ಆಗಬೇಕು.  ತೊಂದರೆ ಬರುವ ಮೊದಲೇ ಅರಿತು ಕೆಲಸ ಮಾಡುವುದು ರೋಟರಿ ಅವರ ಕೆಲಸವಾಗಲಿ ಎಂದು ಡಾ .ನಾಗಾರ್ಜುನರವರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.