Breaking News

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಹೂವಪ್ಪ ಗೌಡರಿಗೆ ಸನ್ಮಾನ

Advt_Headding_Middle

 

ಪ್ರಾಮಾಣಿಕ ಕೆಲಸದಿಂದ ಮನಸ್ಸಿಗೆ ತೃಪ್ತಿ : ಆಂಜನೇಯ ರೆಡ್ಡಿ

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಗೃಹರಕ್ಷಕ ದಳದ ಹೂವಪ್ಪ ಗೌಡ ಕಣ್ಕಲ್ ರವರಿಗೆ ಸನ್ಮಾನ ಕಾರ್ಯಕ್ರಮವು ಜು.18 ರಂದು ನಡೆಯಿತು.
ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿಯವರು ಹೂವಪ್ಪ ಗೌಡರಿಗೆ ಶಾಲು ಹೊದಿಸಿ, ಫಲ, ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಮಾತನಾಡಿ ಹೂವಪ್ಪ ಗೌಡರು ಕಷ್ಟಪಟ್ಟು ಕೆಲಸ ಮಾಡಿದವರು ಯಾವುದೇ ಕಷ್ಟದ ಸಂದರ್ಭದಲ್ಲಿ ಪೊಲೀಸರೊಂದಿಗೆ ಸೇರಿಕೊಂಡು ಕೆಲಸ ಮಾಡಿದ್ದಾರೆ.
ಕೆಲಸವನ್ನು ಪ್ರೀತಿಯಿಂದ ಆತ್ಮತೃಪ್ತಿಯಿಂದ ಮಾಡಿದ್ದಾರೆ.
ಪ್ರಾಮಾಣಿಕವಾಗಿ ನಿಷ್ಟೆಯಿಂದ ಕೆಲಸ ಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಉತ್ತಮವಾಗಿ ಅಣ್ಣತಮ್ಮಂದಿರಂತೆ ಕೆಲಸ ಮಾಡುತ್ತಾ ಒಂದೇ ರೀತಿಯಿಂದ ಕುಟುಂಬದ ರೀತಿಯಲ್ಲಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಹೂವಪ್ಪ ಗೌಡರಿಗೆ ಮತ್ತು ಅವರ ಕುಟುಂಬದವರಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಎ.ಎಸ್.ಐ.ಗಳಾದ ಭಾಸ್ಕರ್, ಸುಧಾಕರ್, ನಾರಾಯಣ ರವರು ಉಪಸ್ಥಿತರಿದ್ದರು.
ಎ.ಎಸ್.ಐ.ಭಾಸ್ಕರ್ ಮತ್ತು ಹೆಡ್ ಕಾನ್ಸ್ ಟೇಬಲ್ ಸತೀಶ್ ರವರು ಶುಭಹಾರೈಸಿ ಮಾತನಾಡಿದರು.
ಕಾನ್ ಸ್ಟೇಬಲ್ ಮಂಜುನಾಥ ಸ್ವಾಗತಿಸಿ, ಹಾಲೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ನಂದಿನಿ ಪ್ರಾರ್ಥಿಸಿ, ಪ್ರವೀಣ್ ವಂದಿಸಿದರು.
ಕಾರ್ಯಕ್ರಮದಲ್ಲಿ ಠಾಣೆಯ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.