ಸುಳ್ಯ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮ

Advt_Headding_Middle

 

 

49 ನೇ ಅಧ್ಯಕ್ಷರಾಗಿ ಉದ್ಯಮಿ ಲ| ಆನಂದ ಪೂಜಾರಿ ಮತ್ತು ಪದಾಧಿಕಾರಿಗಳಿಗೆ ಪದಪ್ರಧಾನ

ಸುಳ್ಯ ಲಯನ್ಸ್ ಕ್ಲಬ್ ಇದರ ಪದಗ್ರಹಣ ಸಮಾರಂಭ ಮತ್ತು ಚಾರ್ಟರ್ ನೈಟ್ ಕಾರ್ಯಕ್ರಮ ಜು.17 ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಆರಂಭದಲ್ಲಿ ಸಭಾ ಕಾರ್ಯಕ್ರಮವು ಲ| ರಾಮಚಂದ್ರ ಪೆಲತ್ತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ನಿಕಟಪೂರ್ವ ಜಿಲ್ಲಾ ಗವರ್ನರ್ ಲ| ಎಂ.ಬಿ.ಸದಾಶಿವ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ದ್ವಿತೀಯ ರಾಜ್ಯಪಾಲರಾದ ಲ|ಡಾ.ಮೆಲ್ವಿನ್ ಡಿಸೋಜ ಎಂ.ಜೆ ಎಫ್ ಹಾಗೂ
ಐ.ಪಿ ಪಿ.ಲ|ಗಂಗಾಧರ ರೈ, ನಿಕಟಪೂರ್ವ ಕಾರ್ಯದರ್ಶಿ ಲ| ವೀರಪ್ಪ ಗೌಡ, ಖಜಾಂಜಿ ಲ|ಸಂಜೀವ ಕತ್ಲಡ್ಕ ವೇದಿಕೆಯಲ್ಲಿದ್ದರು.
ಬಳಿಕ 2021-22 ನೇ ಸಾಲಿನ ಪದಪ್ರಧಾನ ಸಮಾರಂಭವು ದ್ವಿತೀಯ ರಾಜ್ಯಪಾಲರಾದ ಲ| ಡಾ.ಮೆಲ್ವಿನ್ ಡಿಸೋಜ ರವರು ನೆರವೇರಿಸಿದರು.ಈ ಸಂದರ್ಭ ವೇದಿಕೆಯಲ್ಲಿ
ಲ|ವೆಂಕಪ್ಪ ಕೇನಾಜೆ, ಲ|ಹೇಮನಾಥ ಶೆಟ್ಟಿ, ಲ|ಜಯರಾಮ ದೇರಪ್ಪಜ್ಜನಮನೆ, ಲ|ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ರಮಿತಜಯರಾಮ್, ಖಜಾಂಜಿ ರಾಮಚಂದ್ರ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2021-22 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ 49 ನೇ ಅಧ್ಯಕ್ಷರಾಗಿ ಲ| ಆನಂದ ಪೂಜಾರಿ .ಕೆ, ಕಾರ್ಯದರ್ಶಿ ಲ| ರಮಿತಜಯರಾಮ್, ಖಜಾಂಜಿ ರಾಮಚಂದ್ರ. ಎಂ, ಐ.ಪಿ.ಪಿ ಲ|ರಾಮಚಂದ್ರ ಪೆಲತ್ತಡ್ಕ, ಉಪಾಧ್ಯಕ್ಷರಾಗಿ ಲ|ರೂಪಶ್ರೀ ಜೆ. ರೈ, ಲ|ವೀರಪ್ಪ ಗೌಡ ಕೆ, ಲ|ರಾಮಕೃಷ್ಣ ರೈ, ಕ್ಲಬ್ ಆಡಳಿತಾಧಿಕಾರಿ ಲ|ಜಯರಾಮ್ ದೇರಪ್ಪಜ್ಜನಮನೆ, ಲ|ನಳಿನ್ ಕುಮಾರ್ ಕೋಡ್ತುಗುಳಿ, ಲ|ರಾಧಾಕೃಷ್ಣ ಎಂ, ಲ|ಡಾ.ರಂಗಯ್ಯ, ಲ|ಡಾ.ಲಕ್ಷ್ಮೀಶ, ಲ|ಪ್ರಸಾದ್ ಎಂ. ಎಸ್,ಲ|ಎಂ.ಎಂ.ತಮ್ಮಯ್ಯ, ಲ|ಎಸ್. ಆರ್. ಹೂವಯ್ಯ, ಲ|ಕೆ.ಆರ್. ಗಂಗಾಧರ, ಲ|ಎಂ.ಬಿ.ಸದಾಶಿವ,ಲ| ವಿಶ್ವನಾಥ ರಾವ್, ಲ|ಪಿ ಯಂ.ರಂಗನಾಥ್, ಲ| ಶಶಿಧರ ಶೆಟ್ಟಿ, ಲ|ಜಗನ್ನಾಥ ರೈ, ಲ|ಜಯಂತ್ ರೈ, ಲ| ಗಂಗಾಧರ ರೈ, ಲ| ಡಿ.ಟಿ.ದಯಾನಂದ, ಲ|ಚಂದ್ರಶೇಖರ ಕೆ.ಎಸ್, ಲ|ಎಸ್.ಆರ್. ಸೂರಯ್ಯ, ಲ|ನಿರಂಜನ್ ಎಂ.ಡಿ, ಲ| ಅವಿನ್ ಪಡ್ಡಂಬೈಲು, ಲ| ತಿಮ್ಮಯ್ಯ ಪಿಂಡಿಮನೆ, ಲ| ನೇತ್ರಾವತಿ ಪಡ್ಡಂಬೈಲು, ಲ|ಪದ್ಮರಂಗನಾಥ್, ಲ|ವೀಣಾಪ್ರಸಾದ್ ರವರು ನಿರ್ದೇಶಕರಾಗಿರುತ್ತಾರೆ.
ಎಲ್ಲಾ ಪದಾಧಿಕಾರಿಗಳಿಗೆ ದ್ವಿತೀಯ ರಾಜ್ಯಪಾಲರಾದ ಲ| ಡಾ.ಮೆಲ್ವಿನ್ ಡಿಸೋಜ ರವರು ಜವಬ್ದಾರಿ ಹಂಚಿಕೆಯ ಕುರಿತು ಮಾರ್ಗದರ್ಶನ ನೀಡಿದರು.
ಈ ಸಂದರ್ಭ ದ್ವಿತೀಯ ರಾಜ್ಯಪಾಲ ಲ|ಡಾ.ಮೆಲ್ವಿನ್ ಡಿಸೋಜ, ನಿಕಟಪೂರ್ವ ಜಿಲ್ಲಾ ಗವರ್ನರ್ ಲ|ಎಂ.ಬಿ.ಸದಾಶಿವ ಹಾಗೂ ಕ್ಲಬ್ ಆಡಳಿತಾಧಿಕಾರಿ ಲ|ಜಯರಾಮ ದೇರಪ್ಪಜ್ಜನಮನೆ ಯವರನ್ನು ಸನ್ಮಾನಿಸಲಾಯಿತು. ಕ್ಲಬ್ ನಿಕಟಪೂರ್ವ ಅಧ್ಯಕ್ಷ
ಲ|ರಾಮಚಂದ್ರ ಪೆಲತ್ತಡ್ಕ ಸ್ವಾಗತಿಸಿದರು. ಲ|ರಮಿತಜಯರಾಮ್ ವಂದಿಸಿದರು. ಲ| ರೂಪಾಶ್ರೀಜಯಂತ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಬೇರೆ ಸಂಘಗಳ ಪದಾಧಿಕಾರಿಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಶುಭ ಹಾರೈಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.