Breaking News

ಲಯನ್ಸ್ ಕ್ಲಬ್ ಗುತ್ತಿಗಾರು ಪದಗ್ರಹಣ ಸಮಾರಂಭ

Advt_Headding_Middle

 

 

ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಪದಗ್ರಹಣ ಸಮಾರಂಭ ಜೂ.17 ರಂದು ಲಯನ್ಸ್ ಸೇವಾ ಭವನ ಗುತ್ತಿಗಾರು ಇಲ್ಲಿ ನಡೆಯಿತು.

ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ 317 ಡಿ ಜಿಲ್ಲಾ ದ್ವಿತೀಯ ರಾಜ್ಯಪಾಲ ಮೆಲ್ವಿನ್ ಡಿಸೋಜಾ ಅವರು ಮಾತನಾಡಿ ಮೆಲ್ವಿನ್ ಜೋನ್ಸ್ ರಿಂದ ಆರಂಭಿಸಿದ ಲಯನ್ಸ್ ಸಂಸ್ಥೆ ವಿಶ್ವಾದ್ಯಂತ 14 ಲಕ್ಷಕಿಂತಲೂ ಅಧಿಕ ಸದಸ್ಯರನ್ನು ಹೊಂದಿರುವ ವಿಶ್ವದ ಅತೀ ದೊಡ್ಡ ಸೇವಾ ಸಂಸ್ಥೆ. ಹೊಸದಾಗಿ
ಅಧಿಕಾರ ವಹಿಸಿಕೊಂಡ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿಗಳನ್ನು ಅರಿತು ಕೆಲಸ ಮುಂದುವರೆಸಿದರೆ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂದರು. ವೇದಿಕೆಯಲ್ಲಿ ಹಾಲಿ ಅಧ್ಯಕ್ಷ ಲಿಜೊ ಜೋಸ್, ಕಾರ್ಯದರ್ಶಿ ಕುಶಾಲಪ್ಪ, ಕೋಶಾಧಿಕಾರಿ ನವೀನ್ ಬಾಳುಗೋಡು ಪೂರ್ವಾಧ್ಯಕ್ಷರಾದ ವಿನೋದ್ ಕುಮಾರ್ ಮುಂಡೋಡಿ, ಕಾರ್ಯದರ್ಶಿ ಪ್ರವೀಣ್ ಮುಂಡೋಡಿ, ಕೋಶಾಧಿಕಾರಿ ಜಯರಾಮ ಕಡ್ಲಾರು, ವೇದಿಕೆಯಲ್ಲಿದ್ದು ಅಧಿಕಾರ ಹಸ್ತಾಂತರಿಸಲಾಯಿತು. ಸ್ಥಾಪಕ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕ್ಲಬ್ ಪ್ರವರ್ತಕ ಧರ್ಮಪಾಲ್, ಪೂರ್ವಾಧ್ಯಕ್ಷ ಮೋಹನ್ ಕೆ, ವಲಯಾಧ್ಯಕ್ಷ ವೆಂಕಪ್ಪ ಕೇನಾಜೆ, ಜಿಲ್ಲಾ ಪಿ.ಆರ್.ಒ ಜಯರಾಂ ದೇರಪಜ್ಜನ ಮನೆ ಉಪಸ್ಥಿತರಿದ್ದರು. ವಿನೋದ್ ಕುಮಾರ್ ಸ್ವಾಗತಿಸಿದರು . ಕುಶಾಲಪ್ಪ ತುಂಬತ್ತಾಜೆ ವಂದಿಸಿದರು. ವೆಂಕಟ್ರಮಣ ಕೆ.ವಿ ಮತ್ತು ಸೌಜನ್ಯ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು, ಕಿನ್ನಿಗೋಳಿ, ಬಂಟ್ವಾಳ, ಪುತ್ತೂರು, ಸುಳ್ಯ, ಸಂಪಾಜೆ, ಕಡಬ, ಪಂಜ, ಗುತ್ತಿಗಾರು ವಿವಿಧ ಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಫೋಟೋ : ಉಷಾ ಸ್ಟುಡಿಯೋ ಗುತ್ತಿಗಾರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.