ಮಳೆಗಾಲದಲ್ಲಿ ದ್ವೀಪದಂತಾಗುವ ಬಟ್ಟಂಗಾಯ ಪ್ರದೇಶ

Advt_Headding_Middle

 

 

ಆಲೆಟ್ಟಿ ವ್ಯಾಪ್ತಿಯ ಕೋಲ್ಚಾರು-ಬಟ್ಟಂಗಾಯಕ್ಕೆ ಸಂಪರ್ಕ ಸೇತುವೆ ಭಾಗ್ಯವಿಲ್ಲವೇ…

ಆಲೆಟ್ಟಿ ಗ್ರಾಮದ ಕೋಲ್ಚಾರು ವಾರ್ಡಿನ ವ್ಯಾಪ್ತಿಯ ಬಟ್ಟಂಗಾಯ ಎಂಬಲ್ಲಿ ಸುಮಾರು ವರ್ಷಗಳಿಂದ ಪರಿಶಿಷ್ಟ ಪಂಗಡ ಜಾತಿಗೆ ಸೇರಿದ ಮನೆಗಳು ಇವೆ. ಇಲ್ಲಿ ಸರಿ ಸುಮಾರು 30 ರಿಂದ 40 ಮಂದಿ ನಿವಾಸಿಗಳು ವಾಸವಾಗಿದ್ದಾರೆ. ಇದರಲ್ಲಿ ಹಿರಿಯರು, ಮಹಿಳೆಯರು ಹಾಗೂ ಸಣ್ಣ ಮಕ್ಕಳು ಇದ್ದು ಇವರಿಗೆ ಅವಶ್ಯ ಆಹಾರ ಸಾಮಾಗ್ರಿಗಳಿಗಾಗಲಿ ಅಥವಾ ಇನ್ನಿತರ ಕಛೇರಿ ಕೆಲಸ ಮತ್ತು ದೈನಂದಿನ ಕೆಲಸ ಕಾರ್ಯಗಳಿಗೆ ಬರುವುದಾದರೆ ಕೋಲ್ಚಾರಿಗೆ ಬಂದು ಅಲ್ಲಿಂದ ಪಡಿತರ ಮತ್ತು ಪಂಚಾಯತ್ ಕೆಲಸಕ್ಕೆ ಆಲೆಟ್ಟಿಗೆ ಬರಬೇಕು. ಆವಶ್ಯಕ ವಸ್ತುಗಳಿಗೆ ಇವರು ಸುಳ್ಯವನ್ನೇ ಅವಲಂಬಿತರಾಗಿದ್ದಾರೆ. ಆದರೆ ಇವರಿಗೆ ಕಾಡಿರುವ ದೊಡ್ಡ ಸಮಸ್ಯೆ ಎಂದರೆ ರಸ್ತೆ ಸಂಪರ್ಕ ಇಲ್ಲದಿರುವುದು. ಕೋಲ್ಚಾರಿನಿಂದ ಬಟ್ಟಂಗಾಯ ಪ್ರದೇಶಕ್ಕೆ ಸುಮಾರು 15 ಕೀ.ಮೀ.ದೂರ ಕ್ರಮಿಸಬೇಕು.ಅರಣ್ಯ ಪ್ರದೇಶದ ಮೂಲಕ ಈ ರಸ್ತೆಯು ಹಾದು ಹೋಗುತ್ತಿದೆ.

ತೀರಾ ಕಚ್ಚಾ ರಸ್ತೆಯಾಗಿರುವುದರಿಂದ ಜೀಪು ಮಾತ್ರ ಸಂಚರಿಸಲು ಸಾಧ್ಯ. ಆದರೆ ಮಳೆಗಾಲ ಬಂತೆಂದರೆ ಬಟ್ಟಂಗಾಯ ಪ್ರದೇಶ ದ್ವೀಪವಾಗುವುದು. ಯಾಕೆಂದರೆ ಇಲ್ಲಿ ಒಂದು ಕಿರಿದಾದ ತೋಡು ಸಿಗುವುದು. ಮಳೆಗಾಲದಲ್ಲಿ ವಿಪರೀತ ನೀರು ಹರಿಯುವುದರಿಂದ ಇದನ್ನು ದಾಟಲು ಸಾಧ್ಯವಾಗುವುದಿಲ್ಲ. ವಾಹನ ಕೂಡ ಸಂಚರಿಸಲು ಕಷ್ಟ ಸಾಧ್ಯ. ಇಲ್ಲಿನ ಜನರು ಮಳೆಗಾಲದಲ್ಲಿ ಪೇಟೆಗೆ ಬರಬೇಕಾದರೆ ಪಾಣತ್ತೂರು ಕಡೆಯಿಂದ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ. ಹಿರಿಯರು ಮಕ್ಕಳು ಇರುವುದರಿಂದ ಅನಾರೋಗ್ಯ ಬಾಧಿಸಿದಾಗ ತುಂಬಾ ಸಮಸ್ಯೆ ಎದುರಿಸುವಂತಾಗಿದೆ ಎಂದು ತಮ್ಮ ಅಳಲನ್ನು ಈ ಪ್ರದೇಶದಲ್ಲಿರುವ ಜನರು ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.
ಬಹಳ ವರ್ಷಗಳಿಂದ ನಮ್ಮ ಹದಗೆಟ್ಟ ರಸ್ತೆ ದುರಸ್ತಿಪಡಿಸಿ ಕಿರಿದಾದ ತೋಡಿಗೆ ಸೇತುವೆ ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ.
ಚುನಾವಣೆಯ ಸಂದರ್ಭ ಬಂದು ಭರವಸೆ ನೀಡಿ ಹೋಗುತ್ತಾರೆ. ಮತ್ತೆ ನಮ್ಮ ಕಡೆ ಹಿಂತಿರುಗಿ ನೋಡುವವರಿಲ್ಲ. ನಮ್ಮ ಈ ಯಾತನೆಯ ಬದುಕಿಗೆ ಕೊನೆ ಇಲ್ಲವೇ ಎಂದು ಈ ಪ್ರದೇಶದಲ್ಲಿರುವ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪಂಚಾಯತ್ ಉಪಾಧ್ಯಕ್ಷರ ಪ್ರತಿಕ್ರಿಯೆ:
ಅರಣ್ಯ ಇಲಾಖೆಯ ಮೂಲಕ ಹಾದು ಹೋಗುವ ರಸ್ತೆಯಾಗಿರುವುದರಿಂದ ಪ್ರತೀ ವರ್ಷ ರಸ್ತೆಯ ಹೊಂಡ ಗುಂಡಿ ಮುಚ್ಚುವ ಕೆಲಸ ಪಂಚಾಯತ್ ಅನುದಾನದಲ್ಲಿ ಮಾಡುತ್ತಿದ್ದೇವೆ. ಈ ವರ್ಷ ಕ್ರಿಯಾ ಯೋಜನೆಯಲ್ಲಿ ರೂ 40 ಸಾವಿರ ಅನುದಾನ ಇಡಲಾಗಿದೆ. ಬೇಸಿಗೆಯ ಕಾಲದಲ್ಲಿ ದುರಸ್ತಿ ಮಾಡುತ್ತೇವೆ. ಅರಣ್ಯ ಇಲಾಖೆಯ ಸಂಬಂಧಪಟ್ಟ ಜಾಗದಲ್ಲಿ ರಸ್ತೆ ಹಾದು ಹೋಗುವ ಕಾರಣ ಕಾಂಕ್ರೀಟಿಕರಣ ಅಥವಾ ಡಾಮರೀಕರಣ ಮಾಡಲಾಗುವುದಿಲ್ಲ. ಸೇತುವೆ ನಿರ್ಮಾಣದ ಬಗ್ಗೆ ಸಚಿವ ಎಸ್.ಅಂಗಾರ ರವರ ಗಮನಕ್ಕೆ ತಂದಿದ್ದೇವೆ. ಹೆಚ್ಚು ಮೊತ್ತದ ಅನುದಾನ ಬೇಕಾಗಿರುವುದರಿಂದ ಕಾಲಾವಕಾಶ ಬೇಕಾಗುವುದು. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುವ ಸತತ ಪ್ರಯತ್ನ ಮಾಡುತ್ತೇವೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.