ಜಾಲ್ಸೂರು ಗ್ರಾಮದ ಮರಸಂಕ ಎಂಬಲ್ಲಿ ಸೇತುವೆ ಆಗದಿರಲು ಪ್ರಶಸ್ತ ಸ್ಥಳ ಸಿಗದಿರುವುದು ಕಾರಣ: ಹರೀಶ್ ಕಂಜಿಪಿಲಿ

Advt_Headding_Middle

ಮರಸಂಕ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೆ ಸಚಿವರ ಕಡೆಯಿಂದ ಪ್ರಯತ್ನ ಆಗಿದೆ ಅನುದಾನ ಇಡುವ ಕಾರ್ಯ ಆಗಿತ್ತು ಆದರೆ ಆ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಪ್ರಸಕ್ತವಾದ ಎರಡು ಬದಿಯ ಸ್ಥಳ ಖಾಸಗಿ ವ್ಯಕ್ತಿಗಳದ್ದಾಗಿದೆ , ಅವರ ಒಪ್ಪಿಗೆ ಇಲ್ಲದೆ ಕಾಮಗಾರಿ ಮಾಡುವ ಅವಕಾಶ ಇಲ್ಲದ ಕಾರಣ ಸೇತುವೆ ನಿರ್ಮಾಣ ಕೆಲಸ ಬಾಕಿಯಾಗಿದೆ , ಅಲ್ಲೇ ಪಕ್ಕದಲ್ಲಿ ಒಂದು ಸೇತುವೆ ಇದ್ದು ಅದು ಕೂಡ ಖಾಸಗಿಯವರ ಪಟ್ಟ ಜಾಗದಲ್ಲಿ ಇದೆ. ಸದ್ರಿ ಒಂದು ಬದಿಯ ಖಾಸಗಿ ಜಾಗದ ವ್ಯಕ್ತಿ ಸೇತುವೆ ನಿರ್ಮಾಣಕ್ಕೆ ಸ್ಥಳ ಒದಗಿಸುವುದಾಗಿ ಒಪ್ಪಿಗೆ ನೀಡಿದ್ದಾರೆ, ಇನ್ನೋರ್ವ ವ್ಯಕ್ತಿಯನ್ನು ಒಪ್ಪಿಸುವ ಪ್ರಯತ್ನ ಆಗುತ್ತಿದೆ.
ಕಳೆದ ವರ್ಷದವರೆಗೆ ಕ್ಷೇತ್ರದಲ್ಲಿ ಒಟ್ಟು 157 ರಷ್ಟು ಸಣ್ಣ ಮತ್ತು ದೊಡ್ಡ ಸೇತುವೆಗಳು ನಮ್ಮ ಸಚಿವರ ಕ್ಷೇತ್ರದಲ್ಲಿ ಆಗಿದೆ ಉತ್ತರಕನ್ನಡದ ನಂತರ ಅತಿ ಹೆಚ್ಚು ತೊರೆ, ಕೊಳ್ಳ, ಹಳ್ಳ ನದಿಗಳಿರುವ ಕ್ಷೇತ್ರ ಸುಳ್ಯ .


ಗುಡ್ಡ, ಅರಣ್ಯ ,ಕಾಡುಗಳ ಮಧ್ಯೆ ಕಚ್ಚಾ ರಸ್ತೆ ಸೇರಿದಂತೆ ಇರುವ 76 ಗ್ರಾಮಗಳ ಬಹಳ ವಿಸ್ತಾರವಾದ ಕ್ಷೇತ್ರವಾಗಿ ಸುಳ್ಯ ಇತರ ಕ್ಷೇತ್ರಗಳಿಗಿಂತ ಎರಡರಷ್ಟಿದೆ. ಹಿಂದೆ ಇದ್ದ ಕಾಲುದಾರಿಗಳು ಈಗ ರಸ್ತೆಗಳಾಗಿವೆ ಸಚಿವರು ರಸ್ತೆಗೆ ಸೇತುವೆಗೆ ತಂದಿರುವ ಅದೆಷ್ಟು ಅನುದಾನಗಳು ಮೀಸಲು ಅರಣ್ಯದ ಪರಿಣಾಮ ಹಿಂದೆ ಹೋಗಿದೆ. ಆದರೂ ಅದೆಷ್ಟೋ ಗ್ರಾಮೀಣ ಪ್ರದೇಶದ ಕಚ್ಚಾ ರಸ್ತೆಗಳು ಇಂದು ವ್ಯವಸ್ಥಿತ ರಸ್ತೆ ಗಳಾಗಿವೆ . ಇನ್ನಷ್ಟು ರಸ್ತೆಗಳ ಬೇಡಿಕೆ ಪ್ರತಿವರ್ಷ ಹೆಚ್ಚುತ್ತಿದೆ ಜೊತೆಗೆ ಸೇತುವೆಗಳ ಬೇಡಿಕೆ ಕೂಡ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸೇತುವೆಗಳನ್ನು ಮಾಡಿಸಿರುವಂತಹ ಕೀರ್ತಿ ನಮ್ಮ ಸಚಿವರದ್ದು ಆದರೆ ಇವೆಲ್ಲದಕ್ಕೂ ಎಲ್ಲಿಯೂ ಪ್ರಚಾರವನ್ನು ನೀಡದೆ ತನ್ನ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.
ಸುಮಾರು 1994 ರ ಮೊದಲು ಸುಳ್ಯ ಕ್ಷೇತ್ರದಲ್ಲಿ ಇದ್ದ ರಸ್ತೆ, ಸೇತುವೆಗಳ ಸ್ಥಿತಿ ಹಾಗೂ ಪ್ರಸ್ತುತ ಸಂಪಾಜೆಯಿಂದ ನೆಲ್ಯಾಡಿ ಯವರೆಗೆ ಹಿಂದ ಇದ್ದ ಹಲವು ಜಿಲ್ಲಾ ಮುಖ್ಯ ರಸ್ತೆಗಳು, ಲೋಕೋಪಯೋಗಿ ರಸ್ತೆಗಳಾಗಿ ಸಚೀವರ ಪ್ರಯತ್ನ ರಿಂದ ಮೇಲ್ದರ್ಜೆಗೇರಿದೆ. ಗಣಣೀಯ ಪ್ರಮಾಣದಲ್ಲಿ ಪ್ರಧಾನ ರಸ್ತೆಗಳು ಅಭಿವೃದ್ಧಿ ಹೊಂದಿದೆ.
ಆಗದಿರುವ ಒಂದೆರಡು ಕಾರ್ಯಗಳ ಬಗ್ಗೆ ಟೀಕಿಸುವ ಸಂದರ್ಭದಲ್ಲಿ ಆಗಿರುವ ನೂರಾರು ಅಭಿವೃದ್ಧಿ ಕೆಲಸಗಳು ಬಗ್ಗೆ ಉಲ್ಲೇಖಿಸುವ ಕಾರ್ಯ ಕೂಡ ಮಾಡಬೇಕು.

-ಹರೀಶ ಕಂಜಿಪಿಲಿ, ಅಧ್ಯಕ್ಷ ಬಿಜೆಪಿ ಸುಳ್ಯ ಮಂಡಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.