ಶೇಣಿ: ಮನೆ ಹಾನಿಗೊಳಗಾದ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಊರವರು

Advt_Headding_Middle

 

 

 

ಅಮರಪಡ್ನೂರು ಗ್ರಾಮದ ಶೇಣಿ ಬಳಿಯ ಕುಳ್ಳಾಜೆ ಎಂಬಲ್ಲಿಯ ನಿವಾಸಿ ಮಾಣಿಕ ಮತ್ತು ಬೊಳ್ಳೆಚ್ಚಿ ದಂಪತಿಯ ಮನೆ ಗಾಳಿ ಮಳೆಗೆ ಧ್ವಂಸಗೊಂಡಿತ್ತು. ಮನೆಯ ಸಮೀಪವಿದ್ದ ಕಟ್ಟಿಗೆ ಇಡುವ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿದ್ದರು. ಇದನ್ನರಿತ ಶೇಣಿಯ ಯುವಕರ ತಂಡ ದಾನಿಗಳ ಸಹಕಾರದಿಂದ ಶ್ರಮದಾನದ ಮೂಲಕ ಸಣ್ಣ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತಿಸಿದರು. ಇದರ ಪೂರ್ಣ ವರದಿ ಸುದ್ದಿ ಬಿಡುಗಡೆ ವಾರಪತ್ರಿಕೆ ಮತ್ತು ಸುದ್ದಿ ವೆಬ್ ಸೈಟ್ ನಲ್ಲಿ ಪ್ರಸಾರಗೊಂಡಿತು. ವರದಿಯಲ್ಲಿ ಪ್ರಕಟಿಸಿದ ದೂರವಾಣಿ ಸಂಖ್ಯೆಯನ್ನು ಆಧರಿಸಿ ಹಲವು ಮಂದಿ ದಾನಿಗಳು ವಸ್ತು ರೂಪದಲ್ಲಿ ಮತ್ತು ಹಣದ ರೂಪದಲ್ಲಿ ಸಹಾಯ ನೀಡಿದರು. ಊರಿನ ಅನೇಕ ಮಂದಿ ಶ್ರಮದಾನಲ್ಲಿ ಭಾಗವಹಿಸಿ ಕಲ್ಲಿನ ಗೋಡೆಯ ಶೀಟ್ ಹಾಕಿದ ಸಣ್ಣ ಮನೆಯೊಂದನ್ನು ನಿರ್ಮಿಸಿ ಜು. 18ರಂದು ಫಲಾನುಭವಿಗಳಿಗೆ ಬಿಟ್ಟುಕೊಟ್ಟರು. ಗ್ರಾಮ ಕರಣಿಕರೂ ಮುರಿದು ಬಿದ್ದಿದ್ದ ಮನೆಯ ಮಹಜರು ನಡೆಸಿ ಇಲಾಖೆಯ ಮೂಲಕ ರೂ. 19,500/ ಸಹಾಯಧನ ಬಂತು. ಒಂದೂವರೆ ತಿಂಗಳ ಹಿಂದೆ ಮನೆ ನಿರ್ಮಾಣದ ಕಾಯಕದಲ್ಲಿ ಸ್ಥಳೀಯರಾದ ಧರ್ಮಪಾಲ ಶೇಣಿ, ಅಶೋಕ ಸಾಲ್ಯಾನ್ ಶೇಣಿ, ಪ್ರಶಾಂತ್ ಸಾಲ್ಯಾನ್ ಶೇಣಿ, ರಂಜಿತ್ ಕುಳ್ಳಾಜೆ, ಸಚಿನ್ ಶೇಣಿ, ಅಶ್ವಿನ್ ರೈ ಶೇಣಿ,ಗೋಪಿನಾಥ್ ಶೇಣಿ, ದಿನೇಶ್ ಪೂಜಾರಿ ಕುಳ್ಳಾಜೆ, ರವಿ ಪೂಜಾರಿ ಕುಳ್ಳಾಜೆ, ಪುರುಷೋತ್ತಮ ಕುಳ್ಳಾಜೆ, ಭವಾನಿಶಂಕರ ಕುಳ್ಳಾಜೆ, ಮಹೇಶ್ ಕುಳ್ಳಾಜೆ, ಹೊನ್ನಪ್ಪ ಪೂಜಾರಿ ಕುಳ್ಳಾಜೆ, ಹೊನ್ನಪ್ಪ ಸೂರೆಂಗಿ, ಸುಂದರ ಕುಳ್ಳಾಜೆ, ಜನಾರ್ದನ ಶೇಣಿ, ಶರತ್ ಶೇಣಿ, ಭರತ್ ಶೇಣಿ, ವಿವೇಕ್ ರೈ ಶೇಣಿ, ಹರ್ಷಿತ್ ಪೋನಡ್ಕ, ದೀಕ್ಷಿತ್ ಪೋನಡ್ಕ, ಚಂದ್ರಶೇಖರ ಶೇಣಿ, ಪ್ರಶಾಂತ್ ರೈ ಶೇಣಿ, ನಾರಾಯಣ ಆಚಾರ್ಯ, ಹೊನ್ನಪ್ಪ ಶೇಣಿ, ಸುರೇಶ್ ನಾಯ್ಕ ಸೂರೆಂಗಿ, ಸುಪ್ರೀತ್ ಕುಳ್ಳಾಜೆ, ರಂಜಿತ್ ಪೆರುವಾಜೆ, ಸೃಜನ್ ಶೇಣಿ, ಸುದೀಪ್ ಶೇಣಿ, ನಿಶಾಂತ್ ರೈ ಶೇಣಿ, ಮುರಳಿ ಭಟ್ ಸೂರೆಂಗಿ, ಕೇಶವ ಕುಳ್ಳಾಜೆ, ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸದರೆ, ಕುಮಾರ್ ಕಲ್ಲುಗುಂಡಿ, ಕನಸುಗಳ ಬೆನ್ನೇರಿ ತಂಡ ಸುಳ್ಯ, ರಘುರಾಮ ಕೋಟೆ, ಕೋಟೆ ಫೌಂಡೇಶನ್ ಬೆಂಗಳೂರು, ಗಣೇಶ್ ಭಟ್ ಮೀನಾ ಎಂಟರ್‌ಪ್ರೈಸಸ್ ಬೆಳ್ಳಾರೆ, ರಾಮಕೃಷ್ಣ ಭಟ್ ಕುರುಂಬುಡೇಲು, ಪದ್ಮನಾಭ ಬೀಡು, ಧರ್ಮಪಾಲ ಆಚಾರ್ಯ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ,
ವಸಂತ ಶೆಟ್ಟಿ ಬೆಳ್ಳಾರೆ, ರವಿ ಸಾಯಿ ಸ್ಮರಣ ಕನಕಮಜಲು, ಧರ್ಮಪಾಲ ಪೂಜಾರಿ ಶೇಣಿ, ನ್ಯಾಯವಾದಿ ಸತೀಶ್ ಕುಂಭಕೋಡು,
ರಾಕೇಶ್ ಶೆಟ್ಟಿ ತಂಬಿನಮಕ್ಕಿ,
ಮಹಾಲಿಂಗ ನಾಯ್ಕ್ ಹೊಸಮಜಲ್, ಯತೀಶ್ ಶೇಣಿ ಬೀಜದಗುಂಡಿ, ಪ್ರತೀಕ್ ಗೌಡ ಪಂಜ, ಶಿವಪ್ರಕಾಶ್ ಆಚಾರ್ಯ ಪೆರುವಾಜೆ. ನಿತಿನ್ ಚೊಕ್ಕಾಡಿ,
ವೆಂಕಟರಮಣ ಕಜೆಮೂಲೆ,
ಬೋಜಪ್ಪ ಗೌಡ ಶೇಣಿ,
ಜಯಪ್ರಕಾಶ್ ಪಂಜೀಗಾರು,
ಸತೀಶ್ ದಳ ಕಳಂಜ,
ಸತೀಶ್ ಕುಂಬಕ್ಕೊಡ್,
ಹೊನ್ನಪ್ಪ ಬೆಳ್ಳಾರೆ,
ಈಶ್ವರ ವಾರಣಾಶಿ, ಮುರಳಿ ಭಟ್ ಸೂರೆಂಗಿ ಮೊದಲಾದವರು ವಸ್ತು ರೂಪದಲ್ಲಿ ಮತ್ತು ಧನ ಸಹಾಯವನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.