ಗದ್ದೆಗಿಳಿದು ನೇಜಿ ನೆಟ್ಟ ಸಚಿವ

Advt_Headding_Middle

ಸವಣೂರಿನಲ್ಲಿ ನೇಗಿಲ ಯೋಗಿಯಾದ ಅಂಗಾರ

ಹಡಿಲು ಗದ್ದೆಯಲ್ಲಿ ಸಚಿವರ ಕೃಷಿ ಉತ್ಸಾಹ

ಸಚಿವ ಎಸ್.ಅಂಗಾರ ಕೃಷಿ ಕಾಯಕದಲ್ಲೂ ಸದಾ ಮುಂದು. ನಿನ್ನೆ ಸವಣೂರಿನಲ್ಲಿ ಗದ್ದೆಗಿಳಿದು ಬೇಸಾಯ ಮಾಡುವುದರೊಂದಿಗೆ ಈ ಸುಂದರ ಕ್ಷಣಗಳನ್ನು ಮತ್ತೆ ನೆನಪಿಗೆ ತಂದುಕೊಂಡರು.

 

ಸುಳ್ಯ ಶಾಸಕ, ರಾಜ್ಯದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರರು ಮೂಲತಃ ಕೃಷಿ ಕಾಯಕದಿಂದಲೇ ಮೇಲೆ ಬಂದವರು. ಗದ್ದೆಯ ಕೆಲಸ, ತೋಟದ ಕೆಲಸ ಅವರ ಬದುಕಿನ ಇತಿಹಾಸದ ಹೆಜ್ಜೆ ಗುರುತುಗಳು. ಗದ್ದೆ ಉಳುವ, ನಾಟಿ ಮಾಡುವ, ಭತ್ತದ ಪೈರು ಕೊಯ್ಯುವ ಕೆಲಸವೆಲ್ಲ ಅವರಿಗೆ ಸಲೀಸು. ನುರಿತ ಕೃಷಿ ಕೆಲಸಗಾರನಾಗಿದ್ದ ಅಂಗಾರರು ಶಾಸಕರಾದ ಬಳಿಕವೂ ತಮ್ಮ ಕೃಷಿ ಪ್ರೀತಿಯನ್ನು ಮರೆತವರಲ್ಲ. ಆರು ಬಾರಿ ಶಾಸಕರಾದರೂ ಮನೆಗೆ ಬಂದರೆ ತಡ ರಾತ್ರಿಯವರೆಗೆ ಕುಳಿತು ಅಡಿಕೆ ಸುಲಿಯುತ್ತಿದ್ದರು. ಬಿಡುವು ಸಿಕ್ಕಿದಾಗಲೆಲ್ಲಾ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದರು.

ಈ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು ನಿನ್ನೆ ದಿನ. ಲುಂಗಿ ಸುತ್ತಿ, ಬನಿಯನ್ ತೊಟ್ಟು ತಲೆಗೊಂದು ಮುಂಡಾಸು ಬಿಗಿದು ಹಳೆಯ ಗೆಟಪ್‌ನಲ್ಲಿ ಕೆಸರು ಗದ್ದೆಗಿಳಿದರು. ನೇಜಿ ನೆಟ್ಟು ಭತ್ತದ ಪೈರು ನಾಟಿ ಮಾಡಿದರು. ಅಕ್ಷರಶಃ ಮಣ್ಣಿನ ಮಗನಾದರು.

 

ಇದಕ್ಕೆಲ್ಲಾ ಕಾರಣವಾದದ್ದು ಸವಣೂರಿನ ಚಂದ್ರನಾಥ ಬಸದಿಯ ಸಮೀಪದ ಕೆಸರು ಗದ್ದೆ. ಹಡಿಲು ಗದ್ದೆಯಲ್ಲಿ ಬತ್ತ ಬೆಳೆಸುವ ಯೋಜನೆ ಗದ್ದೆಗಿಳಿಯೋಣ ಬಾ ಕಾರ್ಯಕ್ರಮವನ್ನು ಸವಣೂರಿನ ಅಂಬಾ ಬ್ರದರ್ಸ್ ತಂಡ ಹಮ್ಮಿಕೊಂಡಿತ್ತು. ಇಲ್ಲಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡಿಲು ಬಿದ್ದಿದ್ದು. ಸವಣೂರಿನ ಅಂಬಾ ಬ್ರದರ್ಸ್ ತಂಡ ಈ ಗದ್ದೆಯಲ್ಲಿ ಬೇಸಾಯ ಮಾಡುವ ಯೋಜನೆ ರೂಪಿಸಿತು. ಇಲ್ಲಿಗೆ ಆಗಮಿಸಿದ ಸಚಿವರು ಸ್ವಲ್ಪ ಹೊತ್ತು ಉತ್ಸಾಹದಿಂದ ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಜೊತೆಯಲ್ಲಿದ್ದ ಇತರ ಮುಖಂಡರಿಗೆ, ವಿದ್ಯಾರ್ಥಿಗಳಿಗೆ ಬತ್ತ ಬೇಸಾಯದ ಮಹತ್ವ ಮತ್ತು ಮಾದರಿಗಳನ್ನು ವಿವರಿಸಿದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮತ್ತು ಇತರ ಮುಖಂಡರು ಕೂಡ ಗದ್ದೆಗೆ ಇಳಿದು ಸಚಿವರಿಗೆ ಸಾಥ್ ನೀಡಿದರು. ಅಂಬಾ ಬ್ರದರ್ಸ್ ಸದಸ್ಯರು, ಸವಣೂರು ವಿದ್ಯಾರಶ್ಮಿ ಕಾಲೇಜಿನ ಎನ್ನೆಸೆಸ್ ವಿದ್ಯಾರ್ಥಿಗಳು ಸಚಿವರೊಂದಿಗೆ ಬೇಸಾಯಗಾರರಾದರು.
ಸವಣೂರು ಬಸದಿಯ ಆವರಣದ ಗದ್ದೆಯಲ್ಲಿ ಗದ್ದೆಯ ಮಾಲಕ ನ್ಯಾಯವಾದಿ ನಿರ್ಮಲ ಕುಮಾರ್ ಜೈನ್ ಚಾಲನೆ ನೀಡಿದರು. ಸಚಿವ ಅಂಗಾರ ಅವರನ್ನು ರಾಜ್‌ದೀಪಕ್ ಶೆಟ್ಟಿ ಮಠ ಗೌರವಿಸಿದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರನ್ನು ಧನುಶ್ ಶೆಟ್ಟಿ ಗೌರವಿಸಿದರು.
ಈ ಸಂದರ್ಭದಲ್ಲಿ ಇಂದಿರಾ ಬಿ.ಕೆ ,ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ರಾಜಲಕ್ಷ್ಮೀ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ,ಕಾಲೇಜಿನ ಎನ್ನೆಸೆಸ್ ಸಂಯೋಜಕ ವೆಂಕಟರಮಣ ಮೊದಲಾದವರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.