Breaking News

ಸುಬ್ರಹ್ಮಣ್ಯ  ಕೆಎಸ್ಎಸ್ ಕಾಲೇಜಿನಿಂದ ನಿವೃತ್ತರಾದವರಿಗೆ ಸನ್ಮಾನ

Advt_Headding_Middle

 

 

ಸುಬ್ರಹ್ಮಣ್ಯ ಕೆಎಸ್ಎಸ್ ಮಹಾವಿದ್ಯಾಲಯದಲ್ಲಿ ಜು.17 ರಂದು 2020- 21ನೇ ಅವಧಿಯಲ್ಲಿ ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಡಾ। ತಾರಕೇಶ್ವರಿ ಯುಎಸ್, ಪ್ರಾಂಶುಪಾಲ ಪ್ರೊಫೆಸರ್ ಬಾಲಕೃಷ್ಣ ಪೈ, ಆಫೀಸ್ ಸಿಬ್ಬಂದಿ ಶ್ರೀಮತಿ ಚಂದ್ರಾವತಿ ಇವರುಗಳಿಗೆ ಸ್ಟಾಪ್ ಕ್ಲಬ್ ಹಾಗೂ ಆಫೀಸ್ ಸ್ಟಾಫ್ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ। ಗೋವಿಂದ ಎನ್ಎಸ್ ಅಧ್ಯಕ್ಷ ಸ್ಥಾನವನ್ನು ವಹಿಸಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾಕ್ಟರ್ ತಾರಕೇಶ್ವರಿ U.S ಅವರ ಪತಿ ಶ್ರೀ ಹರೀಶ ಬಿ .ಎಚ್. ಪ್ರೊ। ಬಾಲಕೃಷ್ಣ ಪೈ ಅವರ ಧರ್ಮಪತ್ನಿ ಶ್ರೀಮತಿ ಸೌಮ್ಯ ಬಿ. ಪೈ, ಶ್ರೀಮತಿ ಚಂದ್ರಾವತಿ ಅವರ ಪತಿ ಬಾಲಗೋಪಾಲ್ ನಾಯರ್ ಕೆ.ಬಿ. , ಪುತ್ರ ಕೃಷ್ಣಪ್ರಸಾದ್ , ಮಹಾವಿದ್ಯಾಲಯದ ಬೋಧಕ ಬೋಧಕೇತರ ವೃಂದ ದವರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಶರಾಮ್ ಪ್ರಸಾದ್ ಇವರು ಸಂಸ್ಕೃತ ಶ್ಲೋಕ ಪಠಿಸುವುದರಿಂದ ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಫೋ। ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಘಟಕದ ಸಂಯೋಜಕರು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ। ಪ್ರಸಾದ್ N. ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯಕ್ಕೆ ಹೊಸದಾಗಿ ಸೇರ್ಪಡೆಗೊಂಡ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ। ಕುಮಾರ ಶೇಣಿ, ಹಾಗೂ ಹಿಂದಿ ವಿಭಾಗಕ್ಕೆ ಸೇರ್ಪಡೆಗೊಂಡ ಫೋ। ಕೃಷ್ಣ ಡಿ .ಲಮಾಣಿ ಇವರುಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.