ಹೊಸ ನಿಯಮದೊಂದಿಗೆ ಇಂದು ಎಸ್ಎಸ್ ಎಲ್ ಸಿ ಪರೀಕ್ಷೆ

Advt_Headding_Middle

 

ಅನೇಕ ಅಡೆತಡೆಗಳ ನಡುವೆ ಇಂದು ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಒಂದರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಲ್ಲಿ ಕೊರೊನಾ ಸಂಕಷ್ಟದ ನಡುವೆ ಪರೀಕ್ಷೆ ಬರೆಯುತ್ತಿರುವುದು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಮಾತ್ರ. ಅದೆಷ್ಟೋ ವಿದ್ಯಾರ್ಥಿಗಳು ನಮ್ಮ ಪರೀಕ್ಷೆ ಕೂಡ ರದ್ದು ಆಗುತ್ತದೆ ಎಂದು ಖುಷಿಯಿಂದ ಜಾತಕ ಪಕ್ಷಿಯಂತೆ ಕುಳಿತಿದ್ದರು. ಇನ್ನಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಯಲ್ಲಿ 623, 624, 625… ಹೀಗೆ ಅಂಕ ತೆಗೆಯಬೇಕು ಎಂಬ ಕಠಿಣ ಪರಿಶ್ರಮದಿಂದ ಓದಿ ಕಾದು ಕುಳಿತಿದ್ದರು. ಇವರಿಬ್ಬರ ನಿರೀಕ್ಷೆ ಸುಳ್ಳಾಗುವಂತೆ ಸರ್ಕಾರ ಪರೀಕ್ಷೆ ನಡೆಸಲು ಹೊರಟಿದೆ. ಆದರೆ ಈ ವರ್ಷ ನಡೆಯುತ್ತಿರುವುದು ಎಸ್ ಎಸ್ ಎಲ್ ಸಿ ಪರೀಕ್ಷಾ ಪದ್ಧತಿಯಲ್ಲೇ ವಿನೂತನವಾದುದು. ಅದೆಷ್ಟು ಒತ್ತಡ ಬಂದರೂ ಪರೀಕ್ಷೆ ನಡೆಸಿಯೇ ಸಿದ್ದ ಎಂಬ ಉದ್ದೇಶದಿಂದ ಹೊಸ ಮಾದರಿಯ ಪರೀಕ್ಷೆಯನ್ನು ನಡೆಸಲು ತಯಾರಾಗಿದೆ. ಆದರೂ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಓದಿ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದು ಈ ಜಂಜಾಟದಿಂದ ಹೊರ ಬಂದರೆ ಸಾಕು ಎಂಬ ಭಾವನೆ ಮೂಡಿದೆ. ಒಂದು ವರ್ಷದಿಂದ ಶಿಕ್ಷಕರ ಪೋಷಕರ ಒತ್ತಡದಿಂದ ನಲುಗಿ ಹೋಗಿರುವ ವಿದ್ಯಾರ್ಥಿಗಳು ಮನಶಾಂತಿ ಬಯಸಿದ್ದಾರೆ. ಒಮ್ಮೆ ಪರೀಕ್ಷೆ ಮುಗಿದರೆ ಸಾಕು ಎನ್ನುವ ವಿದ್ಯಾರ್ಥಿಗಳಿಗೆ ಶುಭ ಕಾಲ ಕೂಡಿ ಬಂದಿದೆ.
ಅದೇನೇ ಇದ್ದರೂ ಶಿಕ್ಷಣ ಇಲಾಖೆಯ ವಿನೂತನ ಮಾದರಿಯ ಈ ಪರೀಕ್ಷೆ ವಿದ್ಯಾರ್ಥಿಗಳಿಗೆ ಸವಾಲು ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಒ.ಎಂ.ಆರ್. ನಲ್ಲಿ ಉತ್ತರ ಗುರುತಿಸುವ ವಿಧಾನ ವಿದ್ಯಾರ್ಥಿಗಳಿಗೆ ಹೊಸದು.ಪ್ರತಿ ವರ್ಷ ಪ್ರಥಮ ಭಾಷೆ ಬಿಟ್ಟು ಉಳಿದ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಈ ವರ್ಷ ಪ್ರತಿ ವಿಷಯ 40 ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗಿದೆ. ಬರವಣಿಗೆಯ ಸಾಮರ್ಥ್ಯವನ್ನು ಪರಿಗಣಿಸದ ಈ ವರ್ಷದ ಪರೀಕ್ಷೆ ಒಂದು ರೀತಿಯಲ್ಲಿ ಕೇವಲ ಬುದ್ದಿವಂತಿಕೆ ಮಾತ್ರ ಗುರುತಿಸುವ ಪರೀಕ್ಷೆಯಾಗಿದೆ.
ಇಲಾಖೆ ಪರೀಕ್ಷೆ ಕಡೆ ಹೆಚ್ಚು ಮುತುವರ್ಜಿ ವಹಿಸಿರುವುದರಿಂದ ಭಯ ಪಡುವ ಅಗತ್ಯ ಇಲ್ಲ. ಹಿಂದಿನ ವರ್ಷಕ್ಕಿಂತ ದುಪ್ಪಟ್ಟು ಪರೀಕ್ಷಾ ಕೇಂದ್ರಗಳು ಇರುವುದರಿಂದ ಹತ್ತಿರದಲ್ಲಿ ಪರೀಕ್ಷೆ ಬರೆಯಲು ಅವಕಾಶವಾಗಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದ್ದು ಪ್ರತಿ ಡೆಸ್ಕ್ ನಲ್ಲಿ ಒಬ್ಬ ಪರೀಕ್ಷಾರ್ಥಿ ಕುಳಿತು ಪರೀಕ್ಷೆ ಬರೆಯಬಹುದಾಗಿದೆ.
ಅಂತೂ ಇಂದು ಹೊಸ ವಿಧಾನದ ಮೂಲಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ.
*ಅರ್ಧ ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ ಕೊಠಡಿ ಸಂಖ್ಯೆ ಗುರುತಿಸಿಕೊಳ್ಳಿ.
*ಧೈರ್ಯದಿಂದ ಪರೀಕ್ಷೆ ಎದುರಿಸಿ.
*ಒ.ಎಂ.ಆರ್.ಹಾಳೆಯಲ್ಲಿ ತಮ್ಮ ನೋಂದಣಿ ಮುಂತಾದ ಅಗತ್ಯ ಮಾಹಿತಿ ತುಂಬಲು ಮರೆಯದಿರಿ.
* ಉತ್ತರ ಗೊತ್ತಾದ ತಕ್ಷಣ ಜಾಗ್ರತೆಯಿಂದ ಶೇಡ್ ಮಾಡಿರಿ.
*ಎರಡು ಬಾಕ್ಸ್ ಗಳಿಗೆ ಶೇಡ್ ಮಾಡಿದಾಗ ಉತ್ತರ ಅಸಿಂಧು ಆಗುವುದರಿಂದ ಯೋಚಿಸಿ ಉತ್ತರಿಸಿ.
*ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಒಟ್ಟಿಗೆ ಸಿಗುವುದರಿಂದ ಸುಲಭ ಏನಿಸುವ ಯಾವುದೇ ವಿಷಯದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.
*ಒಂದು ಬಾರಿ ಶೇಡ್ ಮಾಡಿದ ಉತ್ತರವನ್ನು ಅಳಿಸಲು
ಪ್ರಯತ್ನಿಸಬೇಡಿ ಒ.ಎಂ.ಆರ್.ಶೀಟ್ ಹಾಳಗುವ ಸಾಧ್ಯತೆ ಇದೆ.
*ಸಮಯ ಈ ಹಿಂದಿನಂತೆ ಮೂರು ಗಂಟೆ ಇರುವುದರಿಂದ ಸಮಯ ಬೇಕಾದಷ್ಟು ಇದೆ ಎಂದು ವ್ಯರ್ಥ ಮಾಡಬೇಡಿ.
ಈ ಎಲ್ಲಾ ಕ್ರಮದೊಂದಿಗೆ ಪರೀಕ್ಷಾ ನಿಯಮ ಪಾಲಿಸಿ ಧೈರ್ಯದಿಂದ ಪರೀಕ್ಷೆ ಎದುರಿಸಿ. ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್.

– ವಿಶ್ವನಾಥ್ ಎಸ್.
ಬ್ಲೆಸ್ಸ್ಡ್ ಕುರಿಯಾಕೋಸ್ ಪ್ರೌಢಶಾಲೆ
ಗುತ್ತಿಗಾರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.