ಕಲ್ಮಕಾರು 9 ಕುಟುಂಗಳಿಗೆ ನಿವೇಶನ ನೀಡುವ ವಿಚಾರ

Advt_Headding_Middle

ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಭೆ : ಎಸ್.ಅಂಗಾರ

ತ್ರೈಮಾಸಿಕ ಕೆ.ಡಿ.ಪಿ. ಸಭೆ

ಎರಡು ವರ್ಷದ ಹಿಂದೆ ಭೂ ಕುಸಿತ ಉಂಟಾಗಿ ಕಲ್ಮಕಾರಿನ ಗುಳಿಕಾನ ಎಂಬಲ್ಲಿಯ 9 ಮನೆಗಳವರಿಗೆ ನಿವೇಶನ ಹಂಚಿಕೆ ಇನ್ನೂ ಆಗದಿರುವುದರಿಂದ ಈ ಸಮಸ್ಯೆ ಪರಿಹಾರಕ್ಕೆ ಡಿಸಿ, ಡಿಡಿಎಲ್‌ಆರ್, ಡಿಎಫ್‌ಒ ರವರಿದ್ದು ಪ್ರತ್ಯೇಕ ಸಭೆ ನಡೆಸುವುದಾಗಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.


ಇಂದು ತಾ.ಪಂ. ನಲ್ಲಿ ಸಚಿವ ಎಸ್.ಅಂಗಾರರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಶಾಸಕರು ಈ ವಿಚಾರ ಹೇಳಿದರು.
ಪಾಲನಾ ವರದಿಯ ಮೇಲೆ ವಿಷಯ ಪ್ರಸ್ತಾಪವಾದಾಗ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಅಲ್ಲಿ ಭಾಗಶಃ ಅರಣ್ಯ ಎಂದು ಇರುವುದರಿಂದ ನಮ್ಮ ಆಕ್ಷೇಪ ಇದೆ ಎಂದು ಸುಬ್ರಹ್ಮಣ್ಯ ಆರ್‌ಎಫ್.ಒ. ತಿಳಿಸಿದರು.

ಈ ಕುರಿತು ಚರ್ಚೆ ನಡೆದಾಗ, ಮಾತನಾಡಿದ ಪಂಜ ಆರ್.ಎಫ್.ಒ ಮಂಜುನಾಥರು ಅಲ್ಲಿ 2 ಸಾವಿರ ಎಕ್ರೆಯನ್ನು ಕೂಡಾ ಸರ್ವೆ ನಡೆಸಬೇಕು. ಆಗ ಅರಣ್ಯ ಇಲಾಖೆಯ ಜಾಗವನ್ನು ಹೊರತು ಪಡಿಸಿ ಸರಕಾರಿ ಜಾಗವನ್ನು ಗುರುತು ಪಡಿಸಲು ಸಾಧ ಎಂದು ಹೇಳಿದರು. ಬಳಿಕ ಸಚಿವರು, “ಈ ಕುರಿತು ಡಿ.ಸಿ., ಡಿಎಫ್.ಒ., ಡಿಡಿಎಲ್‌ಆರ್ ಅವರಿದ್ದು ಪ್ರತ್ಯೇಕ ಸಭೆ ನಡೆಸಿ ಶೀಘ್ರವೇ ಸಭೆ ಕರೆಯುತ್ತೇನೆ ಎಂದು ಹೇಳಿದರು.

ಕೊರೊನಾ ಪ್ರಕರಣ ತಾಲೂಕಿನಲ್ಲಿ ಕಡಿಮೆಯಾಗಿದೆ. 188 ಸಕ್ರಿಯ ಪ್ರಕರಣಗಳಿರುವ ಕುರಿತು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಮಾಹಿತಿ ನೀಡಿದರು. 6 ತಿಂಗಳಿನಿಂದ 6 ವರ್ಷದ ವರೆಗಿನ ಮಕ್ಕಳಿಗೆ ಪೌಷ್ಠಿಕಾಂಶ ನಿಡುತ್ತಿರುವ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಸುವ ಕುರಿತು ಸಿಡಿಪಿಒ ಮಾಹಿತಿ ನೀಡಿದರು.

ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವುದರಿಂದ ಜು.18 ರಿಂದ ಜು.21ರ ವರೆಗೆ ಜಾನುವಾರು ಸಾಗಾಟಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಪಶು ಸಂಗೋಪನಾಧಿಕಾರಿ ಡಾ| ನಿತಿನ್ ಪ್ರಭು ತಿಳಿಸಿದರು.  
ಮಳೆ ಬಂದು ಬರೆ ಕುಸಿತವಾದರೆ ಅದನ್ನು ತೆರವು ಮಾಡಲು ಇಲಾಖೆ ಸಿದ್ಧವಾಗಬೇಕೆಂದು ಸಚಿವರು ಪಿಡಬ್ಲ್ಯುಡಿ ಹಾಗೂ ಜಿ.ಪಂ. ಇಲಾಖೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ತಾ.ಪಂ. ಆಡಳಿತಾಧಿಕಾರಿ ಗಾಯತ್ರಿ ನಾಯಕ್, ತಾ.ಪಂ. ಇ.ಒ. ಭವಾನಿಶಂಕರ್, ತಹಶೀಲ್ದಾರ್ ಅನಿತಾ ಲಕ್ಷ್ಮೀ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.