Breaking News

ಸುಬ್ರಹ್ಮಣ್ಯ : ದಲಿತ ಮುಖಂಡರ ಮೇಲೆಯೇ ದೂರು ದಾಖಲು

Advt_Headding_Middle

 

 

ಸುಬ್ರಹ್ಮಣ್ಯದ ಅಗ್ರಹಾರದ ಮಹಿಳೆಯೊಬ್ಬರು ದಲಿತ ಮುಖಂಡರ ಮೇಲೆ ಪೋಲೀಸ್ ದೂರು ನೀಡಿ ದೂರು ದಾಖಲಾದ ಘಟನೆ ಜು.13 ರಂದು ನಡೆದಿದೆ.

ಮಹಿಳೆಯು ಸುಬ್ರಹ್ಮಣ್ಯ ಪೇಟೆಯಿಂದ ಅಗ್ರಹಾರ ಮನೆಗೆ ಹೋಗುತ್ತಿರುವಾಗ ಮಹಿಳೆಯ ಗಂಡ ಕುಮಾರ, ದಲಿತ ಮುಖಂಡರಾದ ಲಕ್ಷ್ಮಿ , ಸುಂದರ ಪಾಟಾಜೆ ,ವಿಶ್ವನಾಥ್ ಅಲೆಕ್ಕಾಡಿ ,ಅಣ್ಣಿ ಯೆಲ್ತಮಾರ್, ರಾಘವ ಕಲ್ಲಾರ, ಶ್ರೀನಿವಾಸ್ ಬಾಳಿಲ ,ರಮೇಶ್ ಮತ್ತಾಡಿ ,ರಾಜೇಶ್ ನೆಟ್ಟಾರು, ಎಂಬುವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ಎ ಬೇವರ್ಸಿ ನೀನು ಯಾಕೆ ಚಿದಾನಂದನ ಜೊತೆ ಇರುವುದು” ಎಂದು ಹೇಳುತ್ತಾ ಸುಂದರ್ ಪಾಟಾಜೆಯವರು, ಅವಾಚ್ಯವಾಗಿ ಬೈದು, ಪಿರ್ಯಾದಿದಾರರೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಉಳಿದ ಆರೋಪಿಗಳು ” ಇನ್ನುಮುಂದೆ ಚಿದಾನಂದನ ಜೊತೆಗೆ ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎ೦ದು ದೂರಿನಲ್ಲಿ ತಿಳಿಸಿದ್ದಾರೆ. ಫಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳಾದ ಕಾವ್ಯಾಳ ಮನ ಪರಿವರ್ತಿಸಿ ಚಿದಾನಂದ ಎಂಬಾತನ ವಿರುದ್ಧ ಸುಳ್ಳು ಜಾತಿ ನಿಂದನೆ ದೂರು ಕೊಡಿಸಿದ್ದಾರೆ ಎ೦ದೂ ದೂರಿನಲ್ಲಿ ತಿಳಿಸಲಾಗಿದೆ.
ದೂರು ಸ್ವೀಕರಿಸಿದ ಪೋಲೀಸರು ಕಲ೦: 341,504,354,506 r/w 149 IPC ರಂತೆ ದೂರು ದಾಖಲಿಸಿಕೊ0ಡಿದ್ದಾರೆ೦ದು ತಿಳಿದುಬ೦ದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.