ಅಚ್ರಪ್ಪಾಡಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಣೆ

Advt_Headding_Middle

 

 

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಿಂದ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಣೆ ನಡೆಯಿತು.
2021-22 ನೇ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಿಂದ ಆರು ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಬೇರೆ ಶಾಲೆಗೆ ತೆರಳಿದ್ದಾರೆ. ಶಾಲೆಯ ಮಕ್ಕಳ ಸಂಖ್ಯೆ 27 ರಿಂದ 21ಕ್ಕೆ ಇಳಿಯಿತು. ಈ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ದಾಖಲಾದ ಶಾಲಾ ವ್ಯಾಪ್ತಿಯಲ್ಲಿ ಒಂದೆರಡು ಮಕ್ಕಳಿದ್ದ ಕಾರಣ ಶಾಲಾ ಶಿಕ್ಷಕರು ಶಾಲಾ ವ್ಯಾಪ್ತಿಯ ಪ್ರದೇಶವಲ್ಲದೆ ಆಸುಪಾಸಿನ ಪ್ರದೇಶಕ್ಕೆ ತೆರಳಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಪರಿಣಾಮ 1ನೇ ತರಗತಿಗೆ ಐದು ಮಕ್ಕಳು ಮತ್ತು 4ನೇ ತರಗತಿಗೆ 2 ಮಕ್ಕಳು ಹೊಸದಾಗಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ಅದಲ್ಲದೆ ಮಕ್ಕಳ ಕಲಿಕೆಗೆ ಪೂರಕವಾಗುವ ಕಲಿಕಾ ಸಾಮಗ್ರಿಗಳ ಜೊತೆಗೆ ಬ್ಯಾಗಿನ ವ್ಯವಸ್ಥೆಯನ್ನು ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಮುಖಾಂತರ ಕೊಡಿಸಿದ್ದಾರೆ. ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋವಿಡ್ ನಿಂದಾಗಿ ಈ ವರ್ಷ ಇನ್ನೂ ಶಾಲೆ ಭೌತಿಕವಾಗಿ ಪ್ರಾರಂಭವಾಗದ ಕಾರಣ ಮಕ್ಕಳ ಕಲಿಕೆ ಕುಂಠಿತಗೊಳ್ಳಬಾರದು ಎಂಬ ದೃಷ್ಟಿಯಿಂದ ಶಾಲಾ ಶಿಕ್ಷಕರು ಮಗುವಿನ ಕಲಿಕಾ ವೇಳಾಪಟ್ಟಿ ತಯಾರಿಸಿ ಮನೆಯಲ್ಲಿ ಓದುವ ಮೂಲೆ / ಓದುವ ಕೋಣೆ ನಿರ್ಮಿಸಿ ಶಾಲಾ ವಾತಾವರಣ ನಿರ್ಮಿಸುವಂತೆ ಪೋಷಕರಲ್ಲಿ ಉತ್ತೇಜಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 4H ಟ್ರಸ್ಟ್ ಮಂಗಳೂರು ಇವರ ವತಿಯಿಂದ ಸಮವಸ್ತ್ರದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಈ ಎಲ್ಲಾ ಯೋಜನೆಗಳಿಂದ ಪ್ರೇರಣೆಗೊಂಡ ಪೋಷಕರು ಶಾಲೆಗೆ ಇನ್ನೂ 2 ಮಕ್ಕಳನ್ನು 1 ನೇ ತರಗತಿಗೆ ದಾಖಲು ಮಾಡಲು ಮುಂದಾಗಿದ್ದಾರೆ.
ಕಾರ್ಯಕ್ರಮದಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಹರೀಶ್ ಕಡಪಾಲ, ಉಪಾಧ್ಯಕ್ಷರಾದ ಜಯಶ್ರೀ, ಮುಖ್ಯಶಿಕ್ಷಕಿ ಶ್ರೀಮತಿ ಶ್ವೇತಾ, ಸಹಶಿಕ್ಷಕರಾದ ಚಿನ್ನಸ್ವಾಮಿ ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.