ಸುಬ್ರಹ್ಮಣ್ಯ ಠಾಣೆಯಲ್ಲಿ ನನ್ನ ಮೇಲೆ ನೀಡಿರುವ ದೂರು ನಾವು ನೀಡಿರುವ ದೂರಿಗೆ ಪ್ರತಿಯಾಗಿ ನೀಡಿರುವ ಸುಳ್ಳು ದೂರಾಗಿದೆ : ಸುಂದರ ಪಾಟಾಜೆ ಸ್ಪಷ್ಟನೆ

Advt_Headding_Middle

 

ಮಹಿಳೆಯೊಡನೆ ಅನುಚಿತವಾಗಿ ವರ್ತಿಸಿದ್ದೇನೆಂದು ಸುಬ್ರಹ್ಮಣ್ಯ ಠಾಣೆಯಲ್ಲಿ ನನ್ನ ಮೇಲೆ ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಇದು ನಿಜವಾದ ವಿಷಯವಲ್ಲ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಸ್ಪಷ್ಟನೆ ನೀಡಿದ್ದಾರೆ.
ಸುಬ್ರಹ್ಮಣ್ಯದ ಅಗ್ರಹಾರದ ಮಹಿಳೆಯೊಬ್ಬರು ಜು 13ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದಲಿತ ಮುಖಂಡ ಸುಂದರ ಪಾಟಾಜೆ ಮತ್ತು ಆತನ ಸಹಚರರು ನನ್ನನ್ನು ಸುಬ್ರಹ್ಮಣ್ಯ ಪೇಟೆಯಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿರುವ ಸುಂದರ ಪಾಟಾಜೆರವರು
” ಲಕ್ಷ್ಮಿ ಸುಬ್ರಮಣ್ಯ ಎಂಬವರು ದಿನಾಂಕ 9/7/2021 ರಂದು ನನ್ನನ್ನು ಸುಬ್ರಮಣ್ಯಕ್ಕೆ ಬರುವಂತೆ ಕರೆದರು. ಸುಬ್ರಹ್ಮಣ್ಯದ ಕಾವ್ಯ ಎಂಬ ಹುಡುಗಿಯ ಮೇಲೆ ಆಗಿರುವ ಅನ್ಯಾಯದ ಬಗ್ಗೆ ನಮ್ಮ ಗಮನ ಸೆಳೆದರು. ಆ ಬಳಿಕ ನಾವು ಸುಬ್ರಹ್ಮಣ್ಯದ ಅಗ್ರಹಾರದಲ್ಲಿರುವ ಕಾವ್ಯಾಳ ಅಜ್ಜಿ ಮನೆಗೆ ಹೋದೆವು. ಅಲ್ಲಿದ್ದ ಕಾವ್ಯ , ಚಿದಾನಂದ ಎಂಬ ವ್ಯಕ್ತಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ವಿವರಿಸಿದಳು. ಅವಳ ವಿವರಣೆಯನ್ನು ನಾವು ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೋಗಿ ಪೊಲೀಸ್ ದೂರು ನೀಡುವ ವ್ಯವಸ್ಥೆ ಮಾಡಿದೆವು. ತನ್ನ ತಾಯಿ ಮತ್ತು ಚಿದಾನಂದ ರ ಮಧ್ಯೆ ಅಕ್ರಮ ಸಂಬಂಧವಿರುವುದರಿಂದ ಅವನು ಹೀಗೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಳು. ಆ ಪ್ರಕಾರ ಸುಬ್ರಹ್ಮಣ್ಯ ಠಾಣೆಯಲ್ಲಿ ಚಿದಾನಂದ ಎಂಬವರ ಮೇಲೆ ದಿನಾಂಕ 9/7/2021 ರಂದು ಪ್ರಕರಣ ದಾಖಲಾಯಿತು.ಇದು ನಿಜವಾದ ಸತ್ಯ ಘಟನೆ. ನಾವು ದಿನಾಂಕ 9/7/2021 ರಂದು ಕಾವ್ಯನ ಅಜ್ಜಿ ಮನೆಯಲ್ಲಿ ಒಂದು ಗಂಟೆಗೆ ಈ ಕೇಸಿನ ಬಗ್ಗೆ ಮಾತಾಡಿಕೊಂಡು ನಂತರ ಎರಡು ಗಂಟೆಗೆ ಸುಬ್ರಹ್ಮಣ್ಯ ಠಾಣೆಗೆ ಬಂದು ನಂತರ ಸಾಯಂಕಾಲದವರೆಗೆ ಠಾಣೆಯಲ್ಲಿದ್ದೆವು. ಆದರೆ ಶ್ರೀಮತಿ ಅಶ್ವಿನಿ ಎಂಬವರು ನನ್ನ ವಿರುದ್ಧ ಕೇಸಿನಲ್ಲಿ ಉಲ್ಲೇಖ ಮಾಡಿರುವಂತಹ ವಿಚಾರ ಸತ್ಯಕ್ಕೆ ದೂರವಾದುದು. ಇದು ಚಿದಾನಂದನ ಮೇಲೆ ಕೊಟ್ಟಿರುವಂತ ದೂರಿಗೆ ಪ್ರತಿಯಾಗಿ ಸುಳ್ಳು ದೂರನ್ನು ನೀಡಿರುವುದಾಗಿದೆ. ಆದ್ದರಿಂದ ಇದನ್ನು ಮೇಲಾಧಿಕಾರಿಯವರು ಕೂಲಂಕುಶವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ನಮ್ಮ ಈ ಸಂಘಟನೆ ಐದು ವರ್ಷಗಳಿಂದ ದಲಿತ ಜನಾಂಗದವರಿಗೆ ನ್ಯಾಯ ಕ್ಕೋಸ್ಕರ ಹೋರಾಟ ಮಾಡಿಕೊಂಡು ಬಂದಿರುತ್ತದೆ. ಇದುವರೆಗೂ ಯಾವ ತಪ್ಪು ಕೆಲಸವನ್ನು ಕೂಡ ನಾನು ಮಾಡಿರುವುದಿಲ್ಲ. ಸೂಕ್ತ ತನಿಖೆಗೆ ಮೇಲಧಿಕಾರಿ ಯವರಿಗೆ ಮನವಿಯನ್ನು ಮಾಡುತ್ತಿದ್ದೇನೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಶ್ರೀಮತಿ ಅಶ್ವಿನಿ ಎಂಬವರು ಸುಳ್ಯದ ಕಲ್ಕುಡ ದೇವಸ್ಥಾನದ ಮುಂದೆ ಪ್ರಮಾಣ ಮಾಡಬೇಕೆಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.