ಅರಣ್ಯಾಧಿಕಾರಿಗಳು ಗೇರು ಕೃಷಿ ಕಡಿದಿದ್ದಾರೆಂದು ಆರೋಪಿಸಿ ರೈತ ಸಂಘ ಖಂಡನೆ

Advt_Headding_Middle

 

 

ತೊಡಿಕಾನ ಗ್ರಾಮದ ಶೇಷಮ್ಮ ಎಂಬವರು ತಮ್ಮ ಸ್ಥಳದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕಸಿ ಗೇರು ಗಿಡವನ್ನು ನೆಟ್ಟಿದ್ದರು ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಯಾವುದೇ ಗಡಿ ಗುರುತು ಮಾಡದೇ , ಶೇಷಮ್ಮರವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಕಳೆದ ೧೦ ದಿನಗಳ ಹಿಂದೆ ಸರಿಸುಮಾರು ೮೦ ಗಿಡಗಳನ್ನು ಕಡಿದು ಹಾಕಿ ತಮ್ಮ ದರ್ಪವನ್ನು ತೋರಿಸಿದ್ದಾರೆ ಹಾಗೂ ಅರಣ್ಯವನ್ನೇ ರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳಾದ ಮನೋಜ್ ಕುಮಾರ್ ಮತ್ತು ಚಿದಾನಂದರವರು ಗಿಡವನ್ನು ಕಡಿದು ತಮ್ಮ ಅಹಂಕಾರವನ್ನು ತೋರಿಸಿದ್ದಾರೆ. ಇದನ್ನು ತಾಲೂಕು ರೈತ ಸಂಘ ಖಂಡಿಸುತ್ತದೆ. ಸರಿಯಾಗಿ ತನಿಖೆ ಮಾಡಿ ಇಂತಹ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಮತ್ತು ನಷ್ಟ ಪರಿಹಾರವನ್ನು ಕಡಿದ ಅದಿಕಾರಿಗಳು ಕೊಡಬೇಕು ಎಂದು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತ ಮುಖಂಡ ಭರತ್ ಕುಮಾರ್ ಐವರ್ನಾಡು ರವರು ಅಧಿಕಾರಿಗಳ ಹೇಯ ಕೃತ್ಯಕ್ಕೆ ನಾಚಿಕೆಯಾಗಬೇಕು . ಒಂದುವೇಳೆ ಮೇಲಾಧಿಕಾರಿಗಳು ಸರಿಯಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳದಿದ್ದರೆ ಸುಳ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ರೈತರನ್ನು ಸೇರಿಸಿಕೊಂಡು ನಮ್ಮ ಸಂಘವು ಉಗ್ರ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಇಂದು ರೈತ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೇಳಿದರು . ಈ ಸಂದರ್ಭದಲ್ಲಿ ರೈತ ಮುಖಂಡರಾದ ನೂಜಾಲು ಪದ್ಮನಾಭ ಗೌಡ ,ಸುಳ್ಯಕೊಡಿ ಮಾಧವ ಗೌಡ , ದಿವಾಕರ ಪೈ ಅರಂಬೂರು , ಸೆಬಾಸ್ಟಿನ್ ಮಡಪ್ಪಾಡಿ , ಮಂಜುನಾಥ ಮಡ್ತಿಲ , ರಾಮಕೃಷ್ಣ ಕುಂಟುಕಾಡು , ಪೂವಯ್ಯ ಗೌಡ ಅಲೆಟ್ಟಿ , ಉಮೇಶ್ ಕೂಟೇಲು ಮೊದಲದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.