Breaking News

ನಾವೂರು ಬೀಜಕೊಚ್ಚಿ ಫ್ರೆಂಡ್ಸ್ ತಂಡದ ವತಿಯಿಂದ ಪತ್ರಕರ್ತರೊಂದಿಗೆ ಬಕ್ರೀದ್ ಆಚರಣೆ

Advt_Headding_Middle

ನಾವೂರು ಬೀಜಕೊಚ್ಚಿ ಫ್ರೆಂಡ್ಸ್ ತಂಡದ ವತಿಯಿಂದ ಪತ್ರಕರ್ತರೊಂದಿಗೆ ಪ್ರೆಸ್ ಕ್ಲಬ್ಬಿನಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡರು. ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಫ್ರೆಂಟ್ ವಾರಿಯರ್ಸ್ ರಾಗಿ ಸೇವೆ ಸಲ್ಲಿಸಿರುವ ಪತ್ರಕರ್ತರೊಂದಿಗೆ ಹಬ್ಬ ಆಚರಿಸಿ ಕೊಳ್ಳಬೇಕೆಂದು ತೀರ್ಮಾನಿಸಿದ್ದೆವು. ಈ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವಾದ ಇಂದು ನಮ್ಮ ತಂಡದ ಸದಸ್ಯರು ಎಲ್ಲರೂ ಸೇರಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಂಡದ ಪದಾಧಿಕಾರಿ ಹಮೀದ್ ಕುತ್ತಮಟ್ಟೆ ಈ ಸಂದರ್ಭದಲ್ಲಿ ಹೇಳಿದರು. ಸಂಘದ ಮತ್ತೋರ್ವ ಸದಸ್ಯ ಶರೀಫ್ ಕಂಠಿ ಮಾತನಾಡಿ ನಮ್ಮ ಈ ತಂಡವು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಇಂದು ಪತ್ರಕರ್ತರೊಂದಿಗೆ ಬಕ್ರೀದ್ ಹಬ್ಬ ಆಚರಿಸಿಕೊಂಡ ದ್ದು ತುಂಬಾ ಸಂತೋಷತಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಫ್ರೆಂಡ್ಸ್ ನಾವೂರು ಬೀಜಕೊಚ್ಚಿ ತಂಡದ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ, ಕಾರ್ಯದರ್ಶಿ ಸಿದ್ದಿಕ್, ಪದಾಧಿಕಾರಿಗಳಾದ ಸಲ್ಮಾನ್ ಫಾರಿಷ್, ಹಮೀದ್ ಚಾಯ್ಸ್, ಸಿನಾನ್, ಅಫ್ರಾಜ್, ಹಬೀಬ್, ಶಹಬಾದ್,ಫಯಾಜ್ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣ ಬೆಟ್ಟ, ಜಿಲ್ಲಾ ಸಮಿತಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಮಾತನಾಡಿ ಈದ್ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ತಂಡದ ವತಿಯಿಂದ ಬಕ್ರಿದ್ ಹಬ್ಬದ ಅಂಗವಾಗಿ ಭೋಜನಕೂಟ ಏರ್ಪಡಿಸಲಾಗಿತ್ತು. ಪತ್ರಕರ್ತ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಿದ್ದೀಕ್ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.