ಶ್ರೀಮತಿ ಲೀಲಾವತಿ ಕಲ್ಲೋಣಿಯವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ

Advt_Headding_Middle

 

ಬೆಳ್ಳಾರೆ ಗ್ರಾಮದ ಕಲ್ಲೋಣಿ ನಿವಾಸಿ ಸುಳ್ಯ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಟೆಂಡರ್ ಶ್ರೀಮತಿ ಲೀಲಾವತಿಯವರು ಜು.4 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜು.21 ರಂದು ಐವರ್ನಾಡಿನ ಪಲ್ಲತ್ತಡ್ಕ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರು ದೀಪ ಬೆಳಗಿಸಿದರು.
ಸವಿತಾ ಸಮಾಜದ ಮಾಜಿ ಅಧ್ಯಕ್ಷ ಹರೀಶ್ ಬಂಟ್ವಾಳ್ ರವರು ದಿ .ಲೀಲಾವತಿಯವರ ಬಗ್ಗೆ ಪರಿಚಯಿಸಿ ನುಡಿನಮನ ಸಲ್ಲಿಸಿದರು.
ಮಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಕಚೇರಿಯಲ್ಲಿ ಇಂಜಿನಿಯರ್ ಆಗಿರುವ ರತ್ನಾಕರ್ ಚೌಟರವರು ಲೋಕೋಪಯೋಗಿ ಇಲಾಖಾ ಪರವಾಗಿ ಮತ್ತು ಎಸ್.ಎನ್.ಮನ್ಮಥರವರು ಊರವರ ಪರವಾಗಿ ನುಡಿನಮನ ಸಲ್ಲಿಸಿದರು.
ಮೃತರ ಆತ್ಮಕ್ಕೆ ಒಂದು ನಿಮಿಷ ಶಾಂತಿ ಕೋರಿ ಮೌನಪ್ರಾರ್ಥಿಸಿ,ಬಳಿಕ ಆಗಮಿಸಿದ ಗಣ್ಯರು ಮತ್ತು ಬಂಧುಗಳು ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಗುರುಪ್ರಸಾದ್ ಮತ್ತು ವಿಜಯ್ ಕುಮಾರ್, ದಾಮೋದರ ಲಾವಂತಡ್ಕ ಮತ್ತು ಇತರ ಸಹೋದರರು, ಸಹೋದರಿಯರು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.