ಕೊಡಿಯಾಲ : ಶತಾಯುಷಿ ಅಂಬಾ ಯಾನೆ ಭಾಗೀರಥಿ ಪೈ ಬಾಚೋಡಿಯವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆ

Advt_Headding_Middle

 

 

ಕೊಡಿಯಾಲ ಗ್ರಾಮದ ಬಾಚೋಡಿಯ ದಿವಂಗತ ಶ್ರೀ ಕೊಗ್ಗ ಯಾನೆ ರಾಯ ಪೈಯವರ ಪತ್ನಿ ಶ್ರೀಮತಿ ಅಂಬಾ ಯಾನೆ ಭಾಗೀರಥಿ ಪೈಯವರು ಜು.9 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜು.21 ರಂದು ಬಾಚೋಡಿ ಮನೆಯಲ್ಲಿ ನಡೆಯಿತು.
ವೆ.ಮೂ.ಪಿ.ಅಣ್ಣಪ್ಪ ಭಟ್ ಪುತ್ತೂರು, ಪುರೋಹಿತ ವೆಂಕಟೇಶ ಭಟ್ ಪುತ್ತೂರು,ಕುದುರೆಮುಖ ಕಂಪೆನಿಯ ನಿವೃತ್ತ ಜನರಲ್ ಮೆನೇಜರ್ ಗಜಾನನ ಪೈ, ಪ್ರಕಾಶ ಪೈಯವರು ದಿ.ಅಂಬಾ ಭಾಗೀರಥಿ ಪೈಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುತ್ರರಾದ ಸುರೇಶ ಪೈ, ಪಾಂಡುರಂಗ ಪೈ, ವೆಂಕಟೇಶ ಪೈ, ಶ್ರೀನಿವಾಸ ಪೈ, ಹರಿದಾಸ ಪೈ, ಪ್ರಕಾಶ ಪೈ, ಉಮೇಶ ಪೈ, ನಿತ್ಯಾನಂದ ಪೈ ಹಾಗೂ ಪುತ್ರಿಯರಾದ ಶ್ರೀಮತಿ ಪ್ರೇಮಾ ಶೆಣೈ, ಶ್ರೀಮತಿ ಉಮಾ ಪೈ, ಶ್ರೀಮತಿ ನಿರ್ಮಲಾ ಕಾಮತ್, ಶ್ರೀಮತಿ ಕಾವೇರಿ ಮುಕ್ತಾ ಪ್ರಭು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಮರಿ ಮೊಮ್ಮಕ್ಕಳು ಉಪಸ್ಥಿತರಿದ್ದರು.
ಆಗಮಿಸಿದ ಗಣ್ಯರು ದಿ.ಅಂಬಾ ಯಾನೆ ಭಾಗೀರಥಿ ಪೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.