ಕವನ : ಹೆಜ್ಜೆ

Advt_Headding_Middle

 

ನಿಜ ಬದುಕಿನ ಆರಂಭವದು ಕಂದನ ಮೊದಲ ಹೆಜ್ಜೆ….
ಅದು ಚೆನ್ನವಾಗು ವುದಯ್ಯಾ ಕಟ್ಟಿದರೆ ಗೆಜ್ಜೆ.

ಲಜ್ಜೆ ಬಿಟ್ಟು ಮುಂದೆ ಇಡು ಹೆಜ್ಜೆ;ನೀ ಗುರಿಯ ತಲುಪುವೆ…
ಇಟ್ಟ ಹೆಜ್ಜೆ ಹಿಂದೆಗೆಯಬೇಡ ;ನೀ ಬದುಕಿನ ಪರೀಕ್ಷೆಯಲ್ಲಿ ಸೋಲುವೆ .

ಎಷ್ಟು ನಡೆದರೂ ಕಾಣದು ಹೆಜ್ಜೆ ನೀರಿನಲಿ….
ಕಲ್ಲು-ಮುಳ್ಳಿನ ಮೇಲೂ ಇಟ್ಟರೆ ಹೆಜ್ಜೆ ಸಫಲನು ನೀನು ಬದುಕಿನಲಿ.

ಇತಿಹಾಸದ ಪುಟದಲ್ಲಿ ಅಮರರಾದರು ಗುರಿಯೆಡೆಗೆ ಹೆಜ್ಜೆ ಇಟ್ಟವರು….
ಜನರ ಮನದಲ್ಲಿ ಹಸಿರಾದರು ಅವರ ಬವಣೆಯ ನಂದಿಸಲು ತಮ್ಮ ಹೆಜ್ಜೆ ಮುಂದಿಟ್ಟವರು.

ಮೊದಲು ಸೋಲಲೇ ಬೇಕು ಎದುರಾಳಿಯ ಮುಂದೆ;ಅದು ಗೆಲುವಿನ ಮೊದಲ ಹೆಜ್ಜೆ…
ಕೊನೆಗೆ ಗೆಲ್ಲಲೇ ಬೇಕು ಎದುರಾಳಿ ಮತ್ತೆ ನೋಡದಂತೆ;ಅದು ಗೆಲುವಿನ ನಿಜವಾದ ಹೆಜ್ಜೆ.

ಬದುಕಿನ ಅಂತ್ಯವದು ವೃಧ್ಧಾಪ್ಯವೆಂಬ ಕೊನೆಯ ಹೆಜ್ಜೆ…
ಆಯುಷ್ಯ ಅಂತ್ಯವಾದರು ನೆನಪು ಅಂತ್ಯವಲ್ಲ ಅಲ್ಲವೇ?! ಅಮರನಾಗುವೆ ನೀ ಇಟ್ಟಿದ್ದರೆ ಸಾಧನೆಯ ಹೆಜ್ಜೆ…

-ತಿತೀಕ್ಷಾ.ಎಮ್.ಜೆ
ದ್ವಿತೀಯ ವಿಜ್ಞಾನ
ಎಸ್.ಎಸ್.ಪಿ.ಯು
ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.