ಇಂದು ಅರಂತೋಡು ಸೊಸೈಟಿ ವತಿಯಿಂದ ‘ಸಿರಿ ನೆಟ್‌ಕೆಫೆ ವೈಫೈ ಹಬ್’ ಉದ್ಘಾಟನೆ ಮತ್ತು ಪಹಣಿಯಲ್ಲಿ ಬೆಳೆ ನೋಂದಣಿ ಕುರಿತು ಮಾಹಿತಿ ಕಾರ್ಯಾಗಾರ

Advt_Headding_Middle

 

ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಶಾಲಾ , ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲಿ ಕುಳಿತು ಕೆಲಸ ಮಾಡುವ ನೌಕರರಿಗೆ ನೆರವಾಗುವ ದೃಷ್ಟಿಯಿಂದ ಸ್ಪರ್ಧಾತ್ಮಕ ದರದಲ್ಲಿ ವೈಫೈ – ಅಂತರ್ಜಾಲವನ್ನು ಒದಗಿಸುವ ನೂತನ ಕಾರ್ಯಕ್ರಮ ಸಿರಿ ನೆಟ್‌ಕೆಫೆ ” ವೈಫೈ ಹಬ್ ನ ಉದ್ಘಾಟನೆ ಮತ್ತು ಪಹಣಿಯಲ್ಲಿ ಬೆಳೆ ನೋಂದಣಿ ಕುರಿತು ಮಾಹಿತಿ ಕಾರ್ಯಾಗಾರ (ಇಂದು) ಜುಲೈ 22 ರಂದು ಪೂ.10.30ಕ್ಕೆ ಅರಂತೋಡು ಸಹಕಾರಿ‌ ಸಂಘದ ಸಿರಿಸೌಧದಲ್ಲಿ ನಡೆಯಲಿದೆ. ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಉಬರಡ್ಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾ.ಪಂ.ಅಧ್ಯಕ್ಷೆ ಹರಿಣಿ ದೇರಾಜೆ ,ಏಕಾನೆಟ್ ನ ಸಾಯಿರಂಜನ್, ಸದಾಶಿವ ಕಡೆಪಾಲ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಅಧಿಕಾರಿ ಮೋಹನ್ ನಂಗಾರು, ಸಹಾಯಕ ತೋಟಗಾರಿಕಾ ಅಧಿಕಾರಿ ಅರ್ಬಣ್ಣ ಪೂಜಾರಿ ಭಾಗವಹಿಸಲಿದ್ದಾರೆ. ತಾಲೂಕಿನ ಸಹಕಾರ ರಂಗದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಯೋಜನೆಯನ್ನು ಅನುಷ್ಠಾನ ಮಾಡಿದೆ ಎಂದು ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಪ್ರಕಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.