ನೆಲ್ಲೂರು ಕೆಮ್ರಾಜೆ ಸಹಕಾರ ಸಂಘದಲ್ಲಿ ವೈಫೈ ನೆಟ್ ಹಬ್ ಉದ್ಘಾಟನೆ

Advt_Headding_Middle

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವೈಪೈ ನೆಟ್ ಹಬ್‌ನ ಉದ್ಘಾಟನೆಯು ಇಂದು ನೆರವೇರಿತು.

ಸಂಘದ ಅಧ್ಯಕ್ಷ ವಿಷ್ಣುಭಟ್ ಮೂಲೆತೋಟ ಇವರು ಸ್ವಿಚ್ ಅದುಮುವುದರ ಮೂಲಕ ಚಾಲನೆ ನೀಡಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಮತ್ತು ವರ್ಕ್ ಫ್ರಮ್ ಹೋಂ ಮಾಡುವವರಿಗೆ ಸೇರಿದಂತೆ ಅಗತ್ಯ ಉಳ್ಳವರಿಗಾಗಿ ಈ ಸೇವೆ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಗ್ರಾಮವನ್ನೇ ಅಂತರ್ಜಾಲ ಗ್ರಾಮವನ್ನಾಗಿ ಮಾಡುವ ಕನಸನ್ನೂ ಹೊಂದಿದ್ದೇವೆ . ಆ ಮೂಲಕ ಸಹಕಾರ ಸಂಘವು ರೈತರ ಮಾತ್ರವಲ್ಲದೆ, ಊರಿನ ಸರ್ವ ಸೇವೆಗೂ ತೆರೆದುಕೊಳ್ಳಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆಯವರು ಮಾತನಾಡಿ, ಕಾಲ ಸೃಷ್ಟಿಸಿದ ಅನಿವಾರ್ಯತೆ ಮತ್ತು ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ದೃಷ್ಟಿಯಿಂದ ಸಹಕಾರ ಸಂಘವೊಂದು ಇಂತಹ ಸೇವೆ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಏಕ ನೆಟ್ ಸಂಸ್ಥೆಯ ಮೂಲಕ ವೈಫೈ ಅನುಷ್ಠಾನಗೊಳಿಸಿದ ಸದಾಶಿವ ಭಟ್ ಕೊಡಪ್ಪಾಲ ಯೋಜನೆಯ ವಿವರ ನೀಡಿದರು.

ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಯು. ಸ್ವಾಗತಿಸಿ, ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ ವಂದಿಸಿದರು. ಸಿಬ್ಬಂದಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ನಾರ್ಣಕಜೆ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಖರೀದಿಗಾಗಿ ರೂ. 5000 ಧನ ಸಹಾಯವನ್ನು ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.