ಸುಳ್ಯದಲ್ಲಿ ಮೆಡಾಕ್ ಮೆಡಿಕಲ್ಸ್ ಹಾಗೂ ಮೆಡಾಕ್ ವಿಷನ್ ಕೇರ್  ಶುಭಾರಂಭ

Advt_Headding_Middle

 

ಮಂಗಳೂರಿನಲ್ಲಿ ಹಾಗೂ ರಾಜ್ಯ ಮತ್ತು ಅಂತರರಾಜ್ಯದ ಇತರ ಕಡೆಗಳಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಪ್ರಸಿದ್ಧಿಗಳಿಸಿದ ಮೆಡಾಕ್ ಸಂಸ್ಥೆಯ ಮೆಡಿಕಲ್ಸ್ ಮತ್ತು ಸುಳ್ಯದ ಅತೀ ದೊಡ್ಡ ಆಪ್ಟಿಕಲ್ ಶೋರೂಂ ಸುಳ್ಯ ಕೆವಿಜಿ‌ ಕ್ಯಾಂಪಸ್ ಬಳಿ ತಾಲೂಕು ಕಛೇರಿ ಎದುರು ಜು.23 ರಂದು ಶುಭಾರಂಭಗೊಂಡಿತು.
ಕಣ್ಣಿನ ಆರೈಕೆ ಕ್ಷೇತ್ರದಲ್ಲಿ ಹಲವು ವರ್ಷಗಳ ಸಂಪ್ರದಾಯ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಆಪ್ಟಿಕಲ್  ಮಳಿಗೆಯ ಮೆಡೋಕ್ ವಿಷನ್ ಕೇರ್ ನ 11ನೇ ಶೋರೂಂ ಪ್ರಾರಂಭಗೊಂಡಿದೆ.
ಕೋವಿಡ್ ನಿಯಮಾನುಸರ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ನಡೆಯಿತು.
ಮೆಡಾಕ್ ವಿಷನ್ ಕೇರ್ ಕನ್ನಡಕಗಳ  ಶೋರೂಂ ನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಉದ್ಘಾಟಿಸಿದರು.
ಕಣ್ಣು ಪರಿಕ್ಷಾ ವಿಭಾಗವನ್ನು ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಲೀಲಾದರ್ ಉದ್ಘಾಟಿಸಿದರು.
ಮೆಡಾಕ್ ಮೆಡಿಕಲ್ ವಿಭಾಗವನ್ನು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ಉದ್ಘಾಟಿಸಿದರು.
ಕೆವಿಜಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಎನ್.ಎ ಜ್ಞಾನೇಶ್,ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಚೆನ್ನಕೇಶವ ದೇವಸ್ಥಾನ ಆಡಳಿತ ಮೊಕ್ತೆಸರಾದ ಡಾ.ಹರಪ್ರಸಾದ್ ತುದಿಯಡ್ಕ,ಕೆವಿಜಿ‌   ಮೆಡಿಕಲ್ ಕಾಲೇಜು ಸಾರ್ವಜನಿಕ ಸಂಪರ್ಕಧಿಕಾರಿ ರಜತ್‌ ಗೌಡ ಅಡ್ಕಾರ್, ಅಬ್ದುಲ್‌ ಖಾದರ್ ಹಾಜಿ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮ ಗ್ರಾಹಕರಿಗೆ ಉತ್ಪನ್ನವನ್ನು  ವರ್ತಕರ ಸಂಘದ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ ವಿತರಿಸಿದರು.
ಸುಳ್ಯ ತಾಲೂಕು ಅರೋಗ್ಯಧಿಕಾರಿ ಡಾ.ನಂದಕುಮಾರ್,ಸುಳ್ಯ ಸರಕಾರಿ ಆಸ್ಪತ್ರೆ ನಿವೃತ ಅರೋಗ್ಯಧಿಕಾರಿ ಡಾ.ಭಾನುಮತಿ,ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್,ಪತ್ರಕರ್ತ ದುರ್ಗಾಕುಮಾರ್‌ ನಾಯರ್ ಕೆರೆ,ಗಣಪ ಸಾಲಿಯಾನ್,ಮಾಧವ ಗೌಡ ಮೊದಲಾದವರು ಮಳಿಗೆಗೆ ಭೇಟಿಕೊಟ್ಟು ಶುಭ ಹಾರೈಸಿದರು.
ಮೇಡಾಕ್ ಸಂಸ್ಥೆಯ ಪಾಲುದಾರರ ಝಿರಾರ್ ಮೆಡಾಕ್, ಎಂ.ಬಿ ಯೂಸುಫ್,ಪೈಸಲ್ ಮೆಡಾಕ್,ಇರ್ಷಾದ್ ಮೆಡಾಕ್ ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯ ಬಗ್ಗೆ ವಿವರಿಸಿದರು.
ನಗರ ಪಂಚಾಯತ್ ಮಾಜಿ ಸದಸ್ಯ ಹಾಜಿ ಕೆ.ಎಂ ಕ ಮುಸ್ತಫಾ ಸ್ವಾಗತಿಸಿ,ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಮೆಡಾಕ್ ವಿಷನ್ ಸಂಸ್ಥೆಯ ವೈಶಿಷ್ಟ್ಯಗಳು

ಆಪ್ಟಿಕಲ್ ಸೇವೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ಸಂಸ್ಥೆ,ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ವಿಷನ್ ಕೇರ್ ನಲ್ಲಿ ಸೇವೆ  ಸೌಲಭ್ಯವನ್ನು ಒದಗಿಸಲಾಗಿದೆ,ಆರ್ಟ್ ದೃಷ್ಟಿ ಪರೀಕ್ಷಾ ಉಪಕರಣಗಳಿಂದ ಪರೀಕ್ಷೆ , ವಿವಿಧ ಕಂಪನಿಯ ಮತ್ತು ವಿವಿಧ ವಿನ್ಯಾಸದ ಹಾಗೂ ಅತ್ಯಾಧುನಿಕ ಶೈಲಿಯ ಸನ್ ಗ್ಲಾಸ್, ಮಾಡೆಲ್ ಗ್ಲಾಸ್,ಮುಖದ ಅಂದಕ್ಕೆ ತಕ್ಕಂತೆ ವಿನ್ಯಾಸ ಗೊಳಿಸಿದ ಗ್ಲಾಸ್ ಗಳ ಅತಿ ವಿಶಾಲವಾದ ಶೋರೂಂ ನಲ್ಲಿ ದೊರೆಯುತ್ತದೆ, ಮಕ್ಕಳಿಗಾಗಿ ವಿಶೇಷ ತರಹದ ಗ್ಲಾಸ್ 699 ಬೆಲೆಯಿಂದ  ಅರಂಭ ,ಆನ್‌ಲೈನ್ ಅಧ್ಯಯನಕ್ಕೆ ಪೂರಕವಾದ ಶಕ್ತಿರಹಿತ ಕನ್ನಡಕಗಳು, 40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡುಬರುವ ಸಣ್ಣ ಅಕ್ಷರಗಳನ್ನು ಓದುವ ಕಷ್ಟವನ್ನು ಪರಿಹರಿಸಲು ಓದುವ ಕನ್ನಡಕ ಮತ್ತು ದೃಷ್ಟಿ ಕನ್ನಡಕವನ್ನು ಒಂದೇ ದಿನದಲ್ಲಿ ತಯಾರಿಸಿ ಕೊಡಲಾಗುತ್ತದೆ,ಕನ್ನಡಕ ಖರೀದಿಸಿದ ಗ್ರಾಹಕರಿಗೆ ಒಂದು ವರ್ಷ ಉಚಿತ ಸರ್ವೀಸ್ ನೀಡಲಾಗುವುದು,ಕಾಂಟ್ಯಾಕ್ಟ್ ಲೆನ್ಸ್‌ಗಳು ರೂ .150 ರಿಂದ ಪ್ರಾರಂಭವಾಗುತ್ತದೆ

*ಮೆಡಿಕಲ್ ವಿಶೇಷತೆಗಳು*
ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ10 ಗಂಟೆಯವರೆಗೆ ಗ್ರಾಹಕರ ಸೇವೆಯಲ್ಲಿರುತ್ತದೆ,ಮಂಗಳೂರಿನಲ್ಲಿ ದೊರೆಯುವ ಎಲ್ಲಾ ಜೌಷದಿಗಳು,ಇನ್ನಿತರ ಕಡೆಗಳಿಂದಲೂ ಜೌಷದಿ ತರಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ,ಸ್ಥಳೀಯ ವ್ಯಾಪ್ತಿಯಲ್ಲಿ ಔಷಧಿಗಳನ್ನು ಹೋಂ ಡೆಲಿವರಿ ಕೊಡಲಾಗುತ್ತದೆ,ಎಲ್ಲಾ ತರಹದ ಸರ್ಜಿಕಲ್ ಉಪಕರಣಗಳು, ಶುಗರ್ ಟೆಸ್ಟ್ ಹಾಗೂ ಇನ್ನಿತರ ಅರೋಗ್ಯ ಸಂಬಂದ ಪಟ್ಟ ಉಪಕರಣಗಳು ದೊರೆಯುತ್ತದೆ,ಕೋವಿಡ್ ಗೆ ಸಂಬಂದಪಟ್ಟ ಮುಂಜಾಗ್ರತಾ ಕ್ರಮಗಳಿಗೆ ಬೇಕಾಗುವ ಸ್ಯಾನಿಟೈಸರ್, ಮಾಸ್ಕ್,ಪಲ್ಸ್ ಒಕ್ಸಿಮೀಟರ್,ಸಣ್ಣಮಕ್ಕಳಿಗೆ ಬೇಕಾಗುವ ವಿವಿಧ ಕಂಪೆನಿಯ ಪ್ಯಾಂಪರ್ಸ್ ಗಳಿಗೆ ವಿಶೇಷ ರಿಯಾಯಿತಿ, ಹಾಗೂ ಎಲ್ಲಾ ತರಹದ ಕಾಸ್ಮೆಟಿಕ್ಸ್ ,ಕ್ರೀಮ್ ಗಳು ಮಳಿಗೆಯಲ್ಲಿ ದೊರೆಯುತ್ತದೆ

ಪ್ರಾರಂಭೊತ್ಸವದ ಪ್ರಯುಕ್ತ ವಿಶೇಷ ‌ಕೊಡುಗೆಗಳು

*ಮಳಿಗೆ ಪ್ರಾರಂಭೊತ್ಸವದ ಪ್ರಯುಕ್ತ  ಸಾರ್ವಜನಿಕರಿಗೆ ಮಳಿಗೆಯ  ಮೊಬೈಲ್ ಸ್ಟೇಟಸ್ ನ್ನು ಹಾಕಿದ ಅದೃಷ್ಟ ಮೂವತ್ತು ಜನರಿಗೆ ಮೆಡಾಕ್ ಸಂಸ್ಥೆಯ ವತಿಯಿಂದ ಕೂಲಿಂಗ್ ಗ್ಲಾಸ್ ಬಹುಮಾನ ವಿತರಿಸಿದರು.
ಮಳಿಗೆಯಲ್ಲಿ ಖರೀದಿಸಿದ ಹಾಗೂ ಭೇಟಿ ನೀಡಿದ ಗ್ರಾಹಕರಿಗೆ ಮೊಬೈಲ್ ‌ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.