ಏರ್ಟೆಲ್ ನೆಟ್ವರ್ಕ್ ಸರಿಪಡಿಸುವಂತೆ ಆಗ್ರಹಿಸಿ ಸಾರ್ವಜನಿಕರಿಂದ ಮನವಿ, ಮತ್ತು ಪ್ರತಿಭಟನೆಯ ಎಚ್ಚರಿಕೆ

Advt_Headding_Middle

 

ಜಯನಗರ, ಕೊಡಂಕೆರಿ, ಕೊಯಿಂಗೋಡಿ, ಕೊರಂಬಡ್ಕ, ಬೀರಮಂಗಿಲ, ಕೊಡಿಯಾಲಬೈಲು, ಕಮಿಲಡ್ಕ, ಮುಂತಾದ ಪ್ರದೇಶಗಳಲ್ಲಿ ಕಳೆದ 15ದಿನಗಳಿಂದ ಏರ್ಟೆಲ್ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ಏರ್ಟೆಲ್ ಬಳಕೆದಾರರಾದ ನಮಗೆ ಬಾರಿ ತೊಂದರೆಯಾಗಿದೆ. ಅದೇ ರೀತಿ ಈ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ತರಬೇತಿಗಳಿಗೆ ತೊಂದರೆಯಾಗಿದ್ದು ಸಂಬಂಧಪಟ್ಟವರು ಶೀಘ್ರವಾಗಿ ಸ್ಪಂದಿಸಿ ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಸುಳ್ಯ ಏರ್ಟೆಲ್ ಕಚೇರಿಗೆ ಜುಲೈ 23ರಂದು ಈ ಭಾಗದ ಜನರ ಸಹಿ ಸಂಗ್ರಹಿಸಿದ ಮನವಿಯನ್ನು ನೀಡಲಾಗಿದೆ. ಮನವಿಯಲ್ಲಿ 10 ದಿನದ ಒಳಗೆ ಸರಿಪಡಿಸಿ ಕೊಡದಿದ್ದಲ್ಲಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೆರಿ, ಜೆಡಿಎಸ್ ನಾಯಕ ರಾಕೇಶ್ ಕುಂಟಿಕಾನ ಇವರು ಸ್ಥಳೀಯ ಜನತೆಯ ಸಹಿ ಸಂಗ್ರಹಿಸಿರುವ ಮನವಿಯನ್ನು ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.