ನೆಟ್ಟಾರು: ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ

Advt_Headding_Middle

 

 24 ಮಂದಿಗೆ ಶಸ್ತ್ರಚಿಕಿತ್ಸೆ, 85 ಕನ್ನಡಕ ವಿತರಣೆ
ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯ ನೆಟ್ಟಾರು ಮತ್ತು ಸತ್ಯನಾರಾಯಣ ಕೋಡಿಬೈಲುರವರ ಸ್ಮರಣಾರ್ಥ ಉಚಿತ ಕಣ್ಣು ಪರೀಕ್ಷಾ ಶಿಬಿರ ಜು.‌ 18ರಂದು ಸ.ಹಿ.ಪ್ರಾ. ಶಾಲೆ ನೆಟ್ಟಾರಿನಲ್ಲಿ ನಡೆಯಿತು.
ನೆಟ್ಟಾರು ನಾಗರಿಕರು, ಅಕ್ಷಯ ಯುವಕ ಮಂಡಲ ನೆಟ್ಟಾರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಮಂಗಳೂರು, ಸುಳ್ಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ. ಪಿ. ದಯಾನಂದ ಪೈ ಮಂಗಳೂರು ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್,‌ ಸೆಂಚುರಿ ಗ್ರೂಪ್ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 160 ಮಂದಿ ಭಾಗವಹಿಸಿದ್ದು, 85 ಮಂದಿಗೆ ಕನ್ನಡಕ ವಿತರಿಸಲಾಯಿತು. ಪ್ರಸಾದ್ ನೇತ್ರಾಲಯದಲ್ಲಿ 24 ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗಿದ್ದು, ಫಲಾನುಭವಿಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆಯ ಬಳಿಕ ಅವರವರ ಮನೆಗೆ ಬಿಡುವ ವ್ಯವಸ್ಥೆಯನ್ನೂ ಚಿಕಿತ್ಸಾಲಯದವರೇ ಉಚಿತವಾಗಿ ಕಲ್ಪಿಸಿದರು. ಕನ್ನಡಕದ ಪ್ರಾಯೋಜಕತ್ವವನ್ನು ಅರುಣ್ ಶಂಕರ್ ನೆಟ್ಟಾರು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.