ರಾಮಣ್ಣ ರೈ ವೈಪಾಲರವರಿಗೆ ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಶ್ರದ್ಧಾಂಜಲಿ

Advt_Headding_Middle

 

 

ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ರೈ ವೈಪಾಲರವರು ಜು.17. ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆಯು ಜು.24 ರಂದು ಸಂಘದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ
ಶ್ಯಾನುಭೋಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ರಾಮಣ್ಣ ರೈ ವೈಪಾಲರವರು ಎಲ್ಲರೊಂದಿಗೆ ಒಂದಾಗಿಕೊಂಡು ಉತ್ತಮ ಒಡನಾಟ ಬಾಂದವ್ಯ ಹೊಂದಿದ್ದರು.
ಸಂಘದ ಬೆಳ್ಳಿಹಬ್ಬವನ್ನು ಉತ್ತಮ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಬೇಕೆಂಬ ಕನಸನ್ನು ಕಂಡಿದ್ದರು ಆದರೆ ಅದು ಈಡೇರಲಿಲ್ಲ.ಮುಂದೆ ನಾವೆಲ್ಲರೂ ಸೇರಿ ಬೆಳ್ಳಿಹಬ್ಬವನ್ನು ಆಚರಣೆ ಮಾಡುವ ಮುಖಾಂತರ ಅವರ ಕನಸನ್ನು ನನಸಾಗಿಸೋಣ ಎಂದು ಹೇಳಿದರು.
ಅಗಲಿದ ಸತ್ಯನಾರಾಯಣ ಕೋಡಿಬೈಲು,ಸುಬ್ರಹ್ಮಣ್ಯ ನೆಟ್ಟಾರು ,ರಾಮಣ್ಣ ರೈ ನೆಟ್ಟಾರುರವರ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಪರಮೇಶ್ವರ ಭಟ್ ಕಜೆ, ಮೇಲ್ವಿಚಾರಕರಾದ ನಾಗೇಶ ಕೆ, ಹರೀಶ್ ಕೆ, ಸಂಘದ ಸದಸ್ಯ ರಾಮಕೃಷ್ಣ ಭಟ್ ಕುತ್ಯಾಡಿ ನುಡಿನಮನ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರರವರು ಪ್ರಾಸ್ತಾವಿಕ ಮಾತನಾಡಿ ರಾಮಣ್ಣ ರೈ ವೈಪಾಲರವರು 15 ವರ್ಷದಿಂದ ಸಂಘದ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ದುಡಿದಿದ್ದಾರೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.
ವಸಂತ ಗೌಡ ನೆಟ್ಟಾರು ಕಾರ್ಯಕ್ರಮ ನಿರೂಪಿಸಿ ,ಪರಮೇಶ್ವರ ಭಟ್ ವಂದಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪುರುಷೋತ್ತಮ ನೆಟ್ಟಾರು,ವಸಂತ ಎನ್.ನೆಟ್ಟಾರು,
ಕಿರಣ್ ಶೆಟ್ಟಿ ವೈಪಾಲ, ಸುಬ್ರಹ್ಮಣ್ಯ ಭಟ್ ಬೊಳಿಯಮೂಲೆ,
ಭಾಸ್ಕರ ಎನ್. ನೆಟ್ಟಾರು,
ಮಹಾಬಲ ಪೂಜಾರಿ ನೆಟ್ಟಾರು,
ಲೋಕೇಶ್ ಪೂಜಾರಿ ನೆಟ್ಟಾರು.ಎನ್.ರಾಮ ನೆಟ್ಟಾರು , ಸಂಘದ ಸದಸ್ಯರು,ಹಾಲು ಪರೀಕ್ಷಕಿ ವೀಕ್ಷಿತಾ , ಜಯಂತಿ ಹಾಗೂ ಇತರರು ಉಪಸ್ಥಿತರಿದ್ದು ಆಗಮಿಸಿದ ಎಲ್ಲರು ಒಂದು ನಿಮಿಷ ಮೌನ ಪ್ರಾರ್ಥಿಸಿ ರಾಮಣ್ಣ ರೈ ವೈಪಾಲರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.