ರಂಗಮನೆಯಲ್ಲಿ ‘ಓ ನನ್ನ ಮನ್ಸೆ’ ಹಾಡು ಬಿಡುಗಡೆ

Advt_Headding_Middle

ಯೋಗಿತಾ ಬಂಗಾರಕೋಡಿ ಅವರ ನಿರ್ದೇಶನದಲ್ಲಿ, ಮಮತಾ ಕಲ್ಮಕಾರು ರವರ ಕಂಟದಲ್ಲಿ, ಯಶ್ ಫೋಟೋಗ್ರಫಿ ಅವರ ಚಿತ್ರಿಕರಣದ ” ಓ ನನ್ನ ಮನ್ಸೇ” ಹಾಡಿನ ಬಿಡುಗಡೆ ಜು. 24 ರಂದು ಸುಳ್ಯದ ರಂಗಮನೆಯಲ್ಲಿ ನಡೆಯಿತು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷೆ ಬೆಳವಣಿಗೆಗೆ ಇಂತಹ ಪ್ರಯತ್ನಗಳು ಮುಖ್ಯ. ಯುವ ಜನತೆ ಈ ತರಹದ ಪ್ರಯೋಗಗಳಲ್ಲಿ ತೊಡಗಿದರೆ ಭಾಷೆ ವಿಸ್ತರಿಸುತ್ತದೆ ಎಂದರು.
ರಂಗ ನಿರ್ದೇಶಕ‌ ಜೀವನ್ ರಾಂ ಸುಳ್ಯ ಮಾತನಾಡಿ, ಯುವ ತಂಡದ ಪ್ರಯೋಗ ಮೆಚ್ಚುವಂತದ್ದು, ಇನ್ನಷ್ಟು ಹೊಸತನಗಳು ಮೂಡಲಿ, ನಮ್ಮ ವಿದ್ಯಾರ್ಥಿನಿ ಯೋಗಿತಳ ಈ ಪ್ರಥಮ ಹೆಜ್ಜೆ ಮುಂದೆ ಇನ್ನಷ್ಟ್ ಸಾಧನೆಗಳಿಗೆ ಪ್ರೇರಣೆ ಆಗಲಿ ಎಂದು ಹಾರೈಸಿದರು.
ಆಕಾಶವಾಣಿ ಉದ್ಘೋಷಕ ವಿನೋದ್ ಮೂಡಗದ್ದೆ ಮಾತನಾಡಿ ಭಾಷೆಯನ್ನು ಪ್ರತಿಯೊಂದು ಸ್ತರದಲ್ಲಿ ಬಳಸಿದರೆ ಮಾತ್ರ ಭಾಷೆ ಪಸರಿಸಲು ಸಾಧ್ಯ ಎಂದು ಹೇಳಿದರು.
ಅಕಾಡೆಮಿ ಸದಸ್ಯ ಕಿರಣ್ ಕುಂಬಳಚೇರಿ ಮಾತನಾಡಿ ಯುವ ಸಮೂಹ ಒಳ್ಳೆಯ ಪ್ರಯತ್ನ ಮಾಡುತ್ತಿದೆ. ಹೀಗೇ ಮುಂದುವರೆಯಲಿ ಎಂದರು.
ಆರ್.ಜೆ ತ್ರಿಶೂಲ್ ತಂಡಕ್ಕೆ ಶುಭ ಹಾರೈಸಿದರು.
ಹಾಡಿನ ತಂಡದ ಸದಸ್ಯರು, ಸಾಹೇಬ್ರು ನಾಟಕ ತಂಡದ ಸದಸ್ಯರು, ಪಡ್ಡಂಬೈಲು ರವೀಶ್, ಲಾಲಿತ್ಯ, ವಾಮನ ಉಪಸ್ಥಿತರಿದ್ದರು.

ಮನುಜ ನೇಹಿಗ ಮತ್ತು ಪಡ್ಡಂಬೈಲು ಮನ್ವಿತ್ ಪ್ರಾರ್ಥಿಸಿದರು. ಕ್ಷಮಾ ಅಂಬೆಕಲ್ಲು ಸ್ವಾಗತಿಸಿ, ಯತೀನ್ ಹಾರಂಬಿ ವಂದಿಸಿ, ಯೋಗಿತ ಬಂಗಾರಕೋಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.