ಕೋವಿಡ್ ಲಸಿಕೆಗಾಗಿ ಪುರಭವನದಲ್ಲಿ ಬೆಳಿಗ್ಗಿನಿಂದ ಕಾಯುತ್ತಿರುವ ಜನ

Advt_Headding_Middle

ಇರುವ ಲಸಿಕೆಯನ್ನು ಮೊದಲು ಬಂದವರಿಗೆ ನೀಡುತ್ತೇವೆ, ಉಳಿದವರಿಗೆ ಟೋಕನ್ ವ್ಯವಸ್ಥೆ ಮಾಡಲು ಕ್ರಮ : ನ.ಪಂ. ಅಧ್ಯಕ್ಷ

ಕೋವಿಡ್ 2ನೇ ಡೋಸ್ ಲಸಿಕೆಗಾಗಿ ಸುಳ್ಯದ ಕೆವಿಜಿ ಪುರಭವನದಲ್ಲಿ ಜನರು ಕ್ಯೂ ನಿಂತಿದ್ದಾರೆ. ಇಂದು ಪುರಭವನದಲ್ಲಿ 150 ಡೋಸ್ ಕೋವಿಡ್ ಲಸಿಕೆ ಇದೆ.

ಆದರೆ ಇನ್ನೂರ ಐವತ್ತಕ್ಕೂ ಹೆಚ್ಚು ಮಂದಿ ಪುರಭವನದಲ್ಲಿ ಲಸಿಕೆಗಾಗಿ ಬಂದಿದ್ದಾರೆ.
ಮೊದಲು ಬಂದ 150 ಮಂದಿಯನ್ನು ಲಸಿಕೆ ನೀಡಲು ಪುರಭವನದ ಒಳಗೆ ಕುಳಿತುಕೊಳ್ಳುವ ಅವಕಾಶ ನೀಡಿದರೆ, ಉಳಿದವರು ಪುರಭವನದ ಹೊರಗೆ ಲಸಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ಹೋದ ಸುದ್ದಿ ಪ್ರತಿನಿಧಿಗಳೊಂದಿಗೆ ತಮ್ಮ ಬೇಡಿಕೆಯನ್ನು ಹೇಳಿದ ಸಾರ್ವಜನಿಕರು ನಾವು ಬೆಳಿಗ್ಗಿನಿಂದ ಬಂದು ಕಾಯುತ್ತಿದ್ದೇವೆ.

ಆದರೆ ಇಲ್ಲಿ ಲಸಿಕೆ ಇಲ್ಲವಂತೆ. ನಮಗೆ ಇವತ್ತಿನ ದಿನಕ್ಕೆ ಮೆಸೇಜ್ ಬಂದಿದೆ. ಆದರೆ ಇಲ್ಲಿ ಬಂದಾಗ ಒಳಗೆ ಹೋಗಲು ಬಿಡುತ್ತಿಲ್ಲ. ನಮಗೆ ಇವತ್ತು ಲಸಿಕೆ ಇಲ್ಲವಾದರೆ ಟೋಕನ್ ನೀಡಲಿ. ಆ ದಿನ ಮಾತ್ರ ವಾಪಾಸ್ ಕಳುಹಿಸಬಾರದು ಎಂದು ಹೇಳಿದರು.
ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಭಿಪ್ರಾಯ ವ್ಯಕ್ತಪಡಿಸಿ, ಕಳೆದ ಮೂರು ದಿನಗಳಿಂದ ವ್ಯಾಕ್ಸಿನ್ ಬಾರದೇ ಇದ್ದ ಕಾರಣ ಸ್ವಲ್ಪ ರಶ್ ಹೆಚ್ಚಾಗಿದೆ. ಇವತ್ತು ೧೫೦ ಡೋಸ್ ಲಸಿಕೆ ಇದೆ. ಮೊದಲು ಬಂದವರಿಗೆ ಆದ್ಯತೆಯಲ್ಲಿ ನೀಡಲಾಗುತ್ತಿದೆ. ಇಂದು ಬಂದು ಲಸಿಕೆ ಸಿಗದವರಿಗೆ ಟೋಕನ್ ನೀಡಿ ಕಳುಹಿಸುತ್ತೇವೆ. ಇನ್ನೊಮ್ಮೆ ಲಸಿಕೆ ಬಂದಾಗ ಅವರಿಗೆ ಮೊದಲು ನೀಡಲಾಗುವುದು ಎಂದು ಅವರು ಹೇಳಿದರು.


ನ.ಪಂ. ಸದಸ್ಯ ಎಂ. ವೆಂಕಪ್ಪ ಮಾತನಾಡಿ, ಇಲ್ಲಿ ಬೆಳಿಗ್ಗಿನಿಂದ ಜನ ಬಂದು ಕಾಯುತ್ತಿದ್ದಾರೆ. ಆದರೆ ಬೇಡಿಕೆಯಷ್ಟು ಲಸಿಕೆ ಇಲ್ಲದಿರುವುದೇ ಈ ಗೊಂದಲಕ್ಕೆ ಸಮಸ್ಯೆ. ಆದ್ದರಿಂದ ಬೇಡಿಕೆ ಇರುವಷ್ಟು ಲಸಿಕೆ ಕೊಡಿಸಲು ಆಗ್ರಹಿಸುತ್ತೇವೆಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.