ಜು.28 ರಂದು ಬೆಳ್ಳಾರೆ ರೋಟರಿ ಕ್ಲಬ್ ಟೌನ್ ಪದಾಧಿಕಾರಿಗಳ ಪದಗ್ರಹಣ

Advt_Headding_Middle

 

ಬೆಳ್ಳಾರೆ ರೋಟರಿ ಕ್ಲಬ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.28ರಂದು ನಡೆಯಲಿದೆ ಎಂದು ರೋಟರಿ ಕ್ಲಬ್ ಕಾರ್ಯದರ್ಶಿ ವಿನಯಕುಮಾರ್ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್‌ನಿಂದಾಗಿ ಪ್ರಪಂಚವೇ ಸಂಕಷ್ಟಕ್ಕೀಡಾಗಿದ್ದರೂ ನಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆದಿದೆ. ಪೆರುವಾಜೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ಅಡ್ಕಾರು ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಗೇಟ್ ಕೊಡುಗೆ, ಜ್ಞಾನದೀವಿಗೆ ಯೋಜನೆಯಡಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುಗೆ – ಹೀಗೆ ಇನ್ನೂ ಹಲವಾರು ಕಾರ್ಯಗಳನ್ನು ಮಾಡಿzವೆ. ನಮ್ಮ ಯೋಜನೆಗಳನ್ನು ಮನಗಂಡ ರೋಟರಿ ಜಿಲ್ಲೆ ೩೧೮೧ ಗೋಲ್ಡನ್ ಕ್ಲಬ್ ಸೈಟೇಶನ್ ನೀಡಿ ಗೌರವಿಸಿದೆ.
ಇದೀಗ ೨೦೨೧-೨೨ ನೇ ಸಾಲಿಗೆ ನೂತನ ತಂಡ ಆಯ್ಕೆಗೊಂಡಿದ್ದು ಅಧ್ಯಕ್ಷರಾಗಿ ಪದ್ಮನಾಭ ಬೀಡು, ನಿಕಟಪೂರ್ವಾಧ್ಯಕ್ಷರಾಗಿ ಮೋನಪ್ಪ ತಂಬಿನಮಕ್ಕಿ, ಕಾರ್ಯದರ್ಶಿಯಾಗಿ ವಿನಯಕುಮಾರ್, ಕೋಶಾಧಿಕಾರಿಯಾಗಿ ಎ.ಕೆ. ಮಣಿಯಾಣಿ, ನಿಯೋಜಿತ ಅಧ್ಯಕ್ಷರಾಗಿ ಕೇಶವ ಮೂರ್ತಿ, ಸಾರ್ಜೆಂಟ್ ಅಟ್ ಅರ್ಮ್ಸ್ ಆಗಿ ರಾಜಗೋಪಾಲ್, ಸಂಘ ಸೇವೆ ನಿರ್ದೇಶಕರಾಗಿ ಶಶಿಧರ್, ಸಮುದಾಯ ಸೇವೆ ನಿರ್ದೇಶಕರಾಗಿ ರವಿಂದ್ರ ಗೌಡ, ವೃತ್ತಿ ಸೇವೆ ನಿರ್ದೇಶಕರಾಗಿ ಪ್ರಭಾಕರ ಆಳ್ವ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ಚಂದ್ರಶೇಖರ ರೈ, ಯುವಜನ ಸೇವೆ ನಿರ್ದೇಶಕರಾಗಿ ನವೀನ್ ಕುಮಾರ್ ರೈ ಕಾರ್ಯನಿರ್ವಹಿಸಲಿದ್ದಾರೆ.
ಜು.೨೮ರಂದು ಪದಪ್ರದಾನ ನಡೆಯಲಿದ್ದು ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನೂತನ ತಂಡದ ಪದಗ್ರಹಣ ಕಾರ್ಯಕ್ರಮ ನಡೆಯುವುದು. ಪೂರ್ವ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ್‌ರವರು ಪದಗ್ರಹಣ ಅಧಿಕಾರಿಯಾಗಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಉದ್ಯಮಿ ಡಿ.ವಿ.ಸತೀಶ್ ಹಾಗೂ ಗೌರವ ಅತಿಥಿಗಳಾಗಿ ವಲಯದ ಸಹಾಯಕ ಗವರ್ನರ್ ಜಿತೇಂದ್ರ, ವಲಯ ಕಾರ್ಯದರ್ಶಿ ಅಬ್ಬಾಸ್ ಮುರ, ಝೋನಲ್ ಲೆಫ್ಟಿನೆಂಟ್ ಭಾನುಪ್ರಕಾಶ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್ ಭಾಗವಹಿಸಲಿದ್ದಾರೆ.
ಈ ವರ್ಷದಲ್ಲಿ ಪರಿಸರ, ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆಯನ್ನು ನೀಡಲಿzವೆ. ರುದ್ರಭೂಮಿಗಳ ಅಭಿವೃದ್ಧಿಗೆ ಪ್ರಯತ್ನಿಸಲಿzವೆ. ಕರ್ನಾಟಕರಲ್ಲಿರುವ ಎಲ್ಲಾ ರೋಟರಿ ಕ್ಲಬ್‌ಗಳು ಸೇರಿಕೊಂಡು ವಿದ್ಯಾಸೇತು ಎಂಬ ಯೋಜನೆಯಡಿಯಲ್ಲಿ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಆಂಗ್ಲ ವಿಷಯಗಳ ಹೆಚ್ಚಿನ ತರಬೇತಿಗಾಗಿ ವಿಶಿಷ್ಟ ಪುಸ್ತಕಗಳು ನೀಡಲಿzವೆ. ಪ್ರಾಜೆಕ್ಟ್ ಸಹಕಾರಿತ ಯೋಜನೆಯಡಿ ಕಾಗ್‌ನಿಝೆಂಟ್ ಕಂಪೆನಿಯ ಜತೆಗೂಡಿ ಕಾಲೇಜು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಸರಕಾರಿ ಪದವಿ ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ನೀಡಲಿzವೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಪದ್ಮನಾಭ ಬೀಡು, ನಿಕಟಪೂರ್ವಾಧ್ಯಕ್ಷ ಮೋನಪ್ಪ ತಂಬಿನಮಕ್ಕಿ, ಕೋಶಾಧಿಕಾರಿ ಎ.ಕೆ.ಮಣಿಯಾಣಿ, ರವೀಂದ್ರಗೌಡ ಎಂ, ನವೀನ್ ಕುಮಾರ್ ರೈ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.