ಹಿರಿಯ ಜಾನಪದ ಕಲಾವಿದೆ ಕೊರಪ್ಪೊಳುರವರ ಕಣ್ಣಿನ ಚಿಕಿತ್ಸೆಗೆ ನೆರವಾದ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ಥಳೀಯ ದಾನಿಗಳು

Advt_Headding_Middle

 

ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಜಾನಪದ ಕಲಾವಿದೆ ರಾಜ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಕೊರಪ್ಪೊಳು ಜಯನಗರ ರವರ ಚಿಕಿತ್ಸೆಗೆ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ಥಳೀಯ ದಾನಿಗಳು ಸಹಕರಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಇವರ ಕುಟುಂಬಕ್ಕೆ ಕೊರೊಪ್ಪೋಳು ರವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸುಮಾರು ಹತ್ತು ಸಾವಿರ ರೂಪಾಯಿಗಳು ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಅವರು ಸ್ಥಳೀಯ ನ ಪಂ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿ ರವರ ಬಳಿ ವಿಷಯವನ್ನು ಪ್ರಸ್ತಾಪಿಸಿದ್ದರು.

ಅವರು ತಾನು ಕಾರ್ಯಚರಿಸುತ್ತಿರುವ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಆರ್ಥಿಕವಾಗಿ ಸಹಾಯ ಹಸ್ತವನ್ನು ನೀಡಿದರು. ಸ್ಥಳೀಯ ನಿವಾಸಿಗಳಾದ ಕಾರ್ಮಿಕ ಸಂಘಟನೆಯ ಮುಖಂಡ ಮಂಜುನಾಥ ಬಳ್ಳಾರಿ, ನಿಸರ್ಗ ಇಂಡಸ್ಟ್ರೀಸ್ ಮಾಲಕ ಕಸ್ತೂರಿ ಶಂಕರ್, ಶಿಕ್ಷಕಿ ಪ್ರಭಾವತಿ ಜಯನಗರ ಹಾಗೂ ಇನ್ನಿತರ ದಾನಿಗಳ ಸಹಕಾರದಿಂದ ಕೊರೊಪ್ಪೋಳು ರವರ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ.
ಇದೀಗ ಇವರ ಸಹಕಾರದಿಂದ ನನಗೆ ಮತ್ತೆ ದೃಷ್ಟಿ ಬಂದಿದೆ ಇವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಕೊರೊಪ್ಪೊಳುರವರು ಸುದ್ದಿಗೆ ತಿಳಿಸಿದ್ದಾರೆ.

ಸುದ್ದಿ ಪ್ರತಿನಿಧಿ ನವೀನ್ ಮಚಾದೊ ಜಯನಗರ ಚಿಕಿತ್ಸೆಯ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.